60 ವರ್ಷದ ವೃದ್ಧ ರೈತನೋರ್ವನ ಗುದನಾಳ ಸೇರಿದ್ದ 16 ಇಂಚು ಉದ್ದದ ಸೋರೆಕಾಯಿಯನ್ನು ನಾಲ್ವರು ವೈದ್ಯರ ತಂಡ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಂತಹ ಘಟನೆ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಭೋಪಾಲ್: 60 ವರ್ಷದ ವೃದ್ಧ ರೈತನೋರ್ವನ ಗುದನಾಳ ಸೇರಿದ್ದ 16 ಇಂಚು ಉದ್ದದ ಸೋರೆಕಾಯಿಯನ್ನು ನಾಲ್ವರು ವೈದ್ಯರ ತಂಡ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಂತಹ ಘಟನೆ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ತೀವ್ರವಾದ ಹೊಟ್ಟೆನೋವಾಗುತ್ತಿದೆ ಎಂದು ವೃದ್ಧ ಮನೆಯವರಲ್ಲಿ ಹೇಳಿಕೊಂಡ ಹಿನ್ನೆಲೆಯಲ್ಲಿ ವೃದ್ಧನನ್ನು ಮನೆಯವರು ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆಯಲ್ಲಿ ಎಕ್ಸ್‌ರೇ ಮಾಡಿದಾಗ ಯಾವುದು ಹೊರಗಿನ ವಸ್ತುವೊಂದು ದೇಹದ ಒಳ ಸೇರಿರುವುದು ಕಂಡು ಬಂದಿತ್ತು. ಇದಾದ ನಂತರ ವೈದ್ಯರಾದ ಡಾ. ಮನೋಜ್ ಚೌಧರಿ, ಡಾ ನಂದಕಿಶೋರ್ ಜಾಟವ್, ಡಾ. ಅಶಿಶ್ ಶುಕ್ಲಾ, ಡಾ. ಸಂಜಯ್ ಮೌರ್ಯ ಇವರಿದ್ದ ತಂಡ ಪ್ರಾಥಮಿಕ ತಪಾಸಣೆಯ ನಂತರ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾದರು.
ಇದಾದ ನಂತರ ವೈದ್ಯರ ತಂಡ ವೃದ್ಧನ ಗುದನಾಳ ಸೇರಿದ್ದ ಸೋರೆಕಾಯಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ ಹಾಗೂ ರೋಗಿ ಈಗ ಅಪಾಯದಿಂದ ಪಾರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಸೋರೆಕಾಯಿಯೊಂದು ಅವರ ಗುದನಾಳ ಸೇರಿದ್ದು ಹೇಗೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ, ಆದರೆ ಇದೊಂದು ಮಾನಸಿಕ ಅಸ್ವಸ್ಥತೆಯಿಂದ ನಡೆದಿರಬಹುದು ಅಥವಾ ಆಕಸ್ಮಿಕವಾಗಿ ಆಗಿರಲೂಬಹುದು ಎಂದು ಡಾ ಚೌಧರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಅದು ದೇಹ ಆ ಪ್ರದೇಶವನ್ನು ಸೇರಿದ್ದೇಗೆ ಎಂಬ ಬಗ್ಗೆ ವಿಚಾರಿಸುತ್ತಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೇ ರೋಗಿಯ ಬಳಿ ಈ ಬಗ್ಗೆ ಕೇಳಿದಾಗ ಅವರು ಉತ್ತರಿಸಲು ನಿರಾಕರಿಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
undefined
ಗುದನಾಳದಲ್ಲಿ ಸಿಲುಕಿತ್ತು ಸೌತೆಕಾಯಿ, ಬೀಜ ತಿಂದಿದ್ದೆ ಎಂದ ವ್ಯಕ್ತಿ, ದಂಗಾದ ವೈದ್ಯರು!
ಇಂತಹ ಪ್ರಕರಣ ಇದೇ ಮೊದಲಲ್ಲ, ಈ ಹಿಂದೆಯೂ ಕೆಲವರು ತಮ್ಮ ಗುದನಾಳದಲ್ಲಿ ಸಿಕ್ಕಿಸಿಕೊಂಡಿದ್ದ ಬಾಟಲ್ ಗ್ಲಾಸ್‌ಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಅಂತಹ ಪ್ರಕರಣಗಳಲ್ಲೆಲ್ಲಾ ವೈದ್ಯರಿಗೆ ಇದು ಹೇಗೆ ದೇಹ ಸೇರಿತ್ತು ಎಂಬ ಬಗ್ಗೆ ಉತ್ತರ ಸಿಕ್ಕಿಲ್ಲ.
ಮಹಿಳೆಯ ಗುಪ್ತಾಂಗದಲ್ಲಿ ಸಿಕ್ತು 88 ಪ್ಯಾಕೇಟ್ ಡ್ರಗ್ಸ್, ಹೊರತೆಗೆಯಲು 11 ದಿನ ಬೇಕಾಯ್ತು!