
ಆಯೋಧ್ಯೆ(ಜ.24) ಆಯೋಧ್ಯೆ ಭವ್ಯ ರಾಮ ಮಂದಿರ ಲೋಕಾರ್ಪಣೆಗೊಂಡ ಮರು ದಿನ ಬರೋಬ್ಬರಿ 5 ಲಕ್ಷ ಭಕ್ತರು ರಾಮಲಲ್ಲಾ ದರ್ಶನ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಇಂದು ದುಪ್ಪಟ್ಟು ಭಕ್ತರು ದರ್ಶನಕ್ಕಾಗಿ ಆಯೋಧ್ಯೆಗೆ ಧಾವಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆಯೋಧ್ಯೆ ರಸ್ತೆ, ಬೀದಿ, ಹೋಟೆಲ್, ರಾಮಜನ್ಮಭೂಮಿ ಆವರಣ ಎಲ್ಲೆಡೆ ಭಕ್ತ ಸಾಗರವೇ ಇದೆ. ನಿಯಂತ್ರಣಕ್ಕೂ ಮೀರಿ ಭಕ್ತರು ಆಗಮಿಸಿರುವ ಕಾರಣ ಉತ್ತರ ಪ್ರದೇಶ ಸರ್ಕಾರ ತಾತ್ಕಾಲಿಕವಾಗಿ ಆಯೋಧ್ಯೆಗೆ ತೆರಳುವ ಎಲ್ಲಾ ಬಸ್ ರದ್ದುಗೊಳಿಸಿದೆ.
7 ಲಕ್ಷಕ್ಕೂ ಅಧಿಕ ಮಂದಿಗ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಇನ್ನು ನಿನ್ನೆ ಆಯೋಧ್ಯೆಗೆ ಆಗಮಿಸಿ ದರ್ಶನ ಪಡೆದ ಲಕ್ಷಾಂತರ ಭಕ್ತರು ಇಂದೂ ಕೂಡ ಅಯೋಧ್ಯೆಯಲ್ಲಿ ಇತರ ದೇವಸ್ಥಾನಗಳ ದರ್ಶನ ಮಾಡುತ್ತಿದ್ದಾರೆ. ಹೀಗಾಗಿ ಆಯೋಧ್ಯೆ ಸುತ್ತ ಮುತ್ತ 10 ಲಕ್ಷಕ್ಕೂ ಅಧಿಕ ಭಕ್ತರು ಜಮಾಯಿಸಿದ್ದಾರೆ. ಭಕ್ತರ ನಿಯಂತ್ರಿಸುವುದು ರಾಮಜನ್ಮಭೂಮಿಯಲ್ಲಿ ನಿಯೋಜನೆಗೊಂಡಿರುವ ಪೊಲೀಸರಿಗೆ ಸವಾಲಾಗುತ್ತಿದೆ. ಇದೇ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಕೂಡ ಸವಾಲಾಗುತ್ತಿದೆ. ಹೀಗಾಗಿ ಯುಪಿ ಸರ್ಕಾರ ತಾತ್ಕಾಲಿಕವಾಗಿ ಆಯೋಧ್ಯೆ ಬಸ್‌ಗಳನ್ನು ರದ್ದುಗೊಳಿಸಲಾಗಿದೆ.
ಅಯೋಧ್ಯೆಯಲ್ಲಿ ಭಾರಿ ನೂಕುನುಗ್ಗಲು: ಸದ್ಯಕ್ಕೆ ಅಯೋಧ್ಯಗೆ ಬರಬೇಡಿ ಪೊಲೀಸರ ಮನವಿ
ಸದ್ಯ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಖಾಸಗಿ ಸರ್ವೀಸ್ ಬಸ್‌ಗಳನ್ನು ರದ್ದುಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ, ತಾತ್ಕಾಲಿಕವಾಗಿ ಖಾಸಗಿ ವಾಹನಗಳನ್ನು ಆಯೋಧ್ಯೆ ಪ್ರವೇಶವನ್ನು ಕೆಲ ಗಂಟೆಗಳ ಕಾಲ ತಡೆಹಿಡಿಯುವ ಸಾಧ್ಯತೆ ಇದೆ. ಆಯೋಧ್ಯೆ ರಾಮ ಮಂದಿರ ದರ್ಶನಕ್ಕಾಗಿ ಆಗಮಿಸಿರುವ ಭಕ್ತರು ಸದ್ಯ ಉತ್ತರ ಪ್ರದೇಶ ಇತರ ಧಾರ್ಮಿಕ ಸ್ಥಳಗಳ ದರ್ಶನ ಪಡೆಯಲು ಸೂಚಿಸಲಾಗಿದೆ. ಆಯೋಧ್ಯೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿರುವ ಕಾರಣ, ತಾತ್ಕಾಲಿಕವಾಗಿ ಬಸ್ ತಡೆ ಹಡಿಯಲಾಗಿದೆ. ಭಕ್ತರು ಸಹಕರಿಸಬೇಕಾಗಿ ಮನವಿ ಮಾಡಲಾಗಿದೆ.
ಉತ್ತರ ಪ್ರದೇಶ ಸಾರಿಗೆ ಸಂಸ್ಥೆ ಪ್ರಕಾರ, ರಾಜ್ಯದ ಮೂಲೆ ಮೂಲೆಗಳಿಂದ ಆಯೋಧ್ಯೆಗೆ ಸೇವೆ ನೀಡುತ್ತಿರುವ 933 ಬಸ್‌ಗಳನ್ನು ತಾತ್ಕಾಲಿಕವಾಗಿ ತಡೆಹಡಿಯಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಬಸ್ ಸಂಚಾರ್ ಪುನರ್ ಆರಂಭಗೊಳ್ಳಲಿದೆ ಎಂದು ವಕ್ತಾರರು ಹೇಳಿದ್ದಾರೆ. ಅಪಾರ ಸಂಖ್ಯೆಯಲ್ಲಿ ರಾಮ ಮಂದಿರಕ್ಕೆ ಭಕ್ತರು ಆಗಮಿಸುತ್ತಿರುವ ಕಾರಣ ಸ್ಥಳವಕಾಶದ ಕೊರತೆಯಾಗುತ್ತಿದೆ. ಹೀಗಾಗಿ ರಾಮ ಭಕ್ತರು ಮನವಿಗೆ ಸ್ಪಂದಿಸಬೇಕಾಗಿ ವಿನಂತಿ ಮಾಡಿದೆ.
ಕೊರೆವ ಚಳಿಯಲ್ಲೂ ಲಕ್ಷಾಂತರ ಭಕ್ತರು ರಾಮಲಲ್ಲಾ ದರ್ಶನ, ಆರ್ಥಿಕ ಕೇಂದ್ರ ಬಿಂದುವಾದ ಆಯೋಧ್ಯೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ