ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿರುವ ಪೆನ್ನಾರ್ ನದಿ ನೀರು ಹಂಚಿಕೆ ವಿವಾದವನ್ನು ಪರಿಹರಿಸಲು ಸಂಧಾನದ ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿರುವ ಪೆನ್ನಾರ್ ನದಿ ನೀರು ಹಂಚಿಕೆ ವಿವಾದವನ್ನು ಪರಿಹರಿಸಲು ಸಂಧಾನದ ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ನದಿ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾ. ಎಂ.ಆರ್.ಶಾ ಮತ್ತು ನ್ಯಾ.ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು, ಕರ್ನಾಟಕ ಮತ್ತು ತಮಿಳುನಾಡು ನಡುವಿನ ನೀರು ಹಂಚಿಕೆ ಸಮಸ್ಯೆ ಇತ್ಯರ್ಥಕ್ಕೆ 2 ವಾರಗಳಲ್ಲಿ ಹೊಸದಾಗಿ ಸಂಧಾನ ಸಮಿತಿ ರಚಿಸಬೇಕು. ಆ ಸಮಿತಿಯು ಮೂರು ತಿಂಗಳೊಳಗೆ ತನ್ನ ವರದಿಯನ್ನು ನ್ಯಾಯಾಲಯಕ್ಕೆ ನೀಡಬೇಕು ಎಂದು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ದಕ್ಷಿಣ ಪೆನ್ನಾರ್ ಜಲ ವಿವಾದ ಇತ್ಯರ್ಥಕ್ಕೆ ನ್ಯಾಯಾಧಿಕರಣ ಬೇಡ: ಸಚಿವ ಡಿ.ಕೆ.ಶಿವಕುಮಾರ್
ಆಸ್ಕರ್ ರೇಸಲ್ಲಿ ಭಾರತದ ಟು ಕಿಲ್ ಏ ಟೈಗರ್ ಚಿತ್ರ
ನವದೆಹಲಿ: 2024ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಅಂತಿಮ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದಿಂದ ‘ಟು ಕಿಲ್ ಏ ಟೈಗರ್’ ಎಂಬ ಸಾಕ್ಷ್ಯ ಚಿತ್ರ ಮಾತ್ರ ಆಯ್ಕೆಯಾಗಿದೆ.
ಇದನ್ನು ಹೊರತುಪಡಿಸಿ ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಜನಮನ್ನಣೆ ಪಡೆದ ‘ಓಪನ್‌ಹೈಮರ್’ ಚಿತ್ರ 13 ವಿಭಾಗಳಲ್ಲಿ ಆಯ್ಕೆಯಾಗಿದೆ. ‘ಅನಾಟಮಿ ಆಫ್ ಎ ಫಾಲ್’ ಚಿತ್ರವು 5 ವಿಭಾಗಳಲ್ಲಿ ಆಯ್ಕೆಯಾಗಿದೆ. ‘ಟು ಕಿಲ್ ಎ ಟೈಗರ್’ ಚಿತ್ರವನ್ನು ನಿಷಾ ಪಹುಜಾ ಎಂಬ ಭಾರತ ಮೂಲದ ಕೆನಡಾ ನಿವಾಸಿ ನಿರ್ದೇಶಿಸಿದ್ದು, ಕೆನಡಾ ದೇಶದ ‘ಕೋರ್ನೇಲಿಯಾ ಪ್ರಿನ್ಸಿಪಿ’ ತಂಡ ಹಾಗೂ ಡೇವಿಡ್ ಓಪನ್ ಹೈಮ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಜಾರ್ಖಂಡ್‌ನಲ್ಲಿ ನಡೆದ ಘಟನೆಯಾಗಿದ್ದು, 13 ವರ್ಷದ ಮಗಳಿಗಾದ ಲೈಂಗಿಕ ಕಿರುಕುಳದ ವಿರುದ್ಧ ತಂದೆ ಹೋರಾಡಿದ ಪರಿಯನ್ನು ಕಥೆಯಾಗಿಸಿಕೊಂಡಿದೆ.
River Alignment ಕುರಿತು ನಮ್ಮ ರಾಜ್ಯವನ್ನು ವಿಶ್ವಾಸಕ್ಕೆ ಪಡೆದಿಲ್ಲ: ದೇವೇಗೌಡ