ಇಂದು ಬೆಳಗ್ಗೆ 11 ಗಂಟೆಗೆ ಶೌರ್ಯ ಏರ್‌ಲೈನ್ಸ್ ವಿಮಾನ ತ್ರಿಭುವನ್ ಏರ್‌ಪೋರ್ಟ್‌ನಿಂದ ಪೊಝಾರಾದತ್ತ ಹೊರಟಿತ್ತು ಎಂದು ಟಿಐಎ ವಕ್ತಾರ ಪ್ರೇಮನಾಥ್ ಟಾಕೂರ ಮಾಹಿತಿ ನೀಡಿದ್ದಾರೆ.
ಕಠ್ಮಂಡು: ಶೌರ್ಯ ಏರ್‌ಲೈನ್ಸ್ ಏರ್‌ಕ್ರಾಫ್ಟ್ ಟೇಕಾಫ್ ವೇಳೆ ಪತನಗೊಂಡಿದೆ. ನೇಪಾಳ ಕಠ್ಮಂಡು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಘಡ ಸಂಭವಿಸಿದೆ. ಏರ್ ಸ್ಟಾಫ್ ಸಿಬ್ಬಂದಿ ಸೇರಿದಂತೆ ಒಟ್ಟು 19 ಜನರು ವಿಮಾನದಲ್ಲಿದ್ದರು. ಇಂದು ಬೆಳಗ್ಗೆ 11 ಗಂಟೆಗೆ ಶೌರ್ಯ ಏರ್‌ಲೈನ್ಸ್ ವಿಮಾನ ತ್ರಿಭುವನ್ ಏರ್‌ಪೋರ್ಟ್‌ನಿಂದ ಪೊಝಾರಾದತ್ತ ಹೊರಟಿತ್ತು ಎಂದು ಟಿಐಎ ವಕ್ತಾರ ಪ್ರೇಮನಾಥ್ ಟಾಕೂರ ಮಾಹಿತಿ ನೀಡಿದ್ದಾರೆ.
ವಿಮಾನ ಪತನವಾಗುತ್ತಿದ್ದಂತೆ ಅಗ್ನಿಶಾಮಕದಳದ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ವೈದ್ಯಕೀಯ ತಂಡ ಸಿಬ್ಬಂದಿ ಆಗಮಿಸಿದ್ದಾರೆ. ಗಾಯಾಳು ಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ ಬಂದು ನಿಂತಿವೆ. ಯಾವುದೇ ಸಾವು-ನೋವಿನ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.
