UP Election 2022 ಉತ್ತರ ಪ್ರದೇಶ ಚುನಾವಣಾ ಅಖಾಡಕ್ಕೆ ಚಾಣಾಕ್ಷನ ಎಂಟ್ರಿ, ಅಮಿತ್ ಶಾ ಮನೆ ಮನೆ ಪ್ರಚಾರ ಆರಂಭ!

By Suvarna NewsFirst Published Jan 23, 2022, 3:25 AM IST
Highlights
  • ಉತ್ತರ ಪ್ರದೇಶದಲ್ಲಿ ಶಾ ಮನೆ ಮನೆ ಪ್ರಚಾರ ಆರಂಭ
  • ಚುನಾವಣೆ ಘೋಷಣೆ ಬಳಿಕ ಮೊದಲ ಬಾರಿಗೆ ಕೈರಾನಾಗೆ ಶಾ ಭೇಟಿ 
  • ಸಾವಿರಾರು ಹಿಂದು ಕುಟುಂಬಗಳನ್ನು ಗುಳೆ ಹೋಗಿದ್ದ ಜಿಲ್ಲೆ

ಕೈರಾನಾ(ಜ.23): ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ಸಾವಿರಾರು ಹಿಂದು ಕುಟುಂಬಗಳನ್ನು ಗುಳೆ ಹೋಗಿದ್ದ ಉತ್ತರಪ್ರದೇಶದ ಕೈರಾನಾಕ್ಕೆ ಶನಿವಾರ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಅವರು ಬಿಜೆಪಿ ಅಭ್ಯರ್ಥಿಗಳ ಪರ ಮನೆ-ಮನೆ ಪ್ರಚಾರ ನಡೆಸಿದರು. ಈ ವೇಳೆ ಸಂತ್ರಸ್ತ ಕುಟುಂಬಗಳನ್ನು ಖುದ್ದಾಗಿ ಭೇಟಿ ಮಾಡಿದ ಅವರು, ಕಳೆದೈದು ವರ್ಷಗಳಲ್ಲಿ ಯೋಗಿ ಆದಿತ್ಯನಾಥ್‌(Yogi Adityanath) ಅವರ ಸರ್ಕಾರದ ಸಾಧನೆಗಳ ಪಟ್ಟಿಯನ್ನು ವಿವರಿಸಿದರು. ಅಲ್ಲದೆ ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬಿದರು.

ತನ್ಮೂಲಕ 2017ರ ವಿಧಾನಸಭೆ ಚುನಾವಣೆಯಲ್ಲೂ ಕೈರಾನಾದಿಂದ( Kairana) ಸಾವಿರಾರು ಹಿಂದು ಕುಟುಂಬಗಳನ್ನು ಗುಳೆ ಹೋಗುವಂತೆ ಮಾಡಿದ್ದ(Hindu migration controversy) ಅಂಶವನ್ನು ಬಿಜೆಪಿ ದೊಡ್ಡ ಮಟ್ಟದಲ್ಲಿ ಚುನಾವಣಾ(Uttar Pradesh Election) ವಿಚಾರವಾಗಿಸಿಕೊಂಡಿತ್ತು. ಇದೀಗ ಚುನಾವಣೆ ಘೋಷಣೆ ಬಳಿಕ ಇದೇ ಮೊದಲ ಬಾರಿಗೆ ಶಾ ಅವರು ಕೈರಾನಾಕ್ಕೆ ಭೇಟಿ ನೀಡಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

UP Elections: ಮೊದಲ ಹಂತದ ಚುನಾವಣೆಗೆ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ!

ಇತ್ತೀಚೆಗಿನ ಚುನಾವಣೆ ಪ್ರಚಾರಗಳಲ್ಲೂ ಕೈರಾನಾ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದ ಬಿಜೆಪಿಯ ಹಿರಿಯ ನಾಯಕರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ಕಾನೂನು-ಸುವ್ಯವಸ್ಥೆ ಸುಧಾರಣೆಯಾಗಿದೆ ಎಂದು ಹೇಳಿದ್ದರು.

ಕೈರಾನಾದಲ್ಲಿ ಅಮಿತ್‌ ಶಾ ಅವರನ್ನು ಕಾಣಲು ಪಕ್ಷದ ಕಾರ್ಯಕರ್ತರು ಮತ್ತು ಜನ ಸಾಮಾನ್ಯರು ಕಿಕ್ಕಿರಿದು ಸೇರಿದ ಹಿನ್ನೆಲೆಯಲ್ಲಿ ಶಾ ಅವರ ಭದ್ರತಾ ಸಿಬ್ಬಂದಿಗೆ ಜನಸಂದಣಿಯನ್ನು ನಿಭಾಯಿಸುವುದು ದೊಡ್ಡ ಸವಾಲಾಗಿತ್ತು. ಅಮಿತ್ ಶಾ ಎಂಟ್ರಿಯಿಂದ ಇದೀಗ ಉತ್ತರ ಪ್ರದೇಶ ರಾಜಕೀಯ ರಂಗು ಪಡೆದುಕೊಂಡಿದೆ. ಎಲ್ಲಾ ಪಕ್ಷಗಳು ಯುಪಿ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಇತ್ತ ಬಿಜೆಪಿ ಯುಪಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತಿದ್ದು, ಅಮಿತ್ ಶಾ ಕೂಡ ಅಖಾಡಕ್ಕಿಳಿದಿದ್ದಾರೆ.

UP Elections: ಇರೋ ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿ ಯತ್ನ, ಯೋಗಿಪುರ ರಹಸ್ಯ

ಕರ್ಹಲ್‌ನಿಂದ ಅಖಿಲೇಶ್‌ ಯಾದವ್‌ ಸ್ಪರ್ಧೆ ಅಧಿಕೃತ
ಸಮಾಜವಾದಿ ಪಕ್ಷದ(SP) ಮುಖ್ಯಸ್ಥ ಅಖಿಲೇಶ್‌ ಯಾದವ್‌(Akhilesh yadav) ಉತ್ತರ ಪ್ರದೇಶ ಚುನಾವಣೆಗೆ ಮೈನ್‌ಪುರದ ಕರ್ಹಾಲ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ರಾಮ್‌ಗೋಪಾಲ್‌ ಯಾದವ್‌ ಅಧಿಕೃತ ಘೋಷಣೆ ಮಾಡಿದ್ದಾರೆ. ಭಾರೀ ಅಂತರದಿಂದ ಅಖಿಲೇಶ್‌ ಗೆಲ್ಲಲ್ಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್‌ ಯಾದವ್‌, ಉತ್ತರ ಪ್ರದೇಶದಲ್ಲಿ ಎಸ್‌ಪಿಅಧಿಕಾರಕ್ಕೆ ಬಂದರೆ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು. ಉತ್ತರಪ್ರದೇಶದಲ್ಲಿ ಐಟಿ ವಲಯದಲ್ಲಿ 22 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು.

 ನಾನು ಸಿಎಂ ಅಭ್ಯರ್ಥಿ ಎಂದಿಲ್ಲ: ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
 ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌(Congress) ಅಧಿಕಾರಕ್ಕೆ ಬಂದರೆ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ತಮ್ಮ ಹೇಳಿಕೆ ಭಾರೀ ಸುದ್ದಿಯಾದ ಬೆನ್ನಲ್ಲೇ ‘ನಾನು ಹಾಗೆ ಹೇಳಿಲ್ಲ’ ಎಂದು ಪ್ರಿಯಾಂಕಾ ವಾದ್ರ(priyanka Vadra) ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ‘ಉತ್ತರಪ್ರದೇಶದಲ್ಲಿ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ನಾನು ಹೇಳಿಲ್ಲ. ನೀವೆಲ್ಲಾ (ಪತ್ರಕರ್ತರು) ಪದೇ ಪದೇ ಅದೇ ಪ್ರಶ್ನೆ ಕೇಳಿದ್ದರಿಂದ ಬೇಸತ್ತು ‘ನಿಮಗೆ ನನ್ನ ಮುಖ ಬಿಟ್ಟು ಬೇರಾರ ಮುಖವಾದರೂ ಕಾಣುತ್ತಾ ಎಂದಿದ್ದೆ ಅಷ್ಟೇ’ ಎಂದು ಹೇಳಿದ್ದಾರೆ.

ಶುಕ್ರವಾರ ಪಕ್ಷದ ಯುವ ಪ್ರಣಾಳಿಕೆ ಬಿಡುಗಡೆ ವೇಳೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ, ‘ನಿಮಗೆ ಕಾಂಗ್ರೆಸ್‌ ಪಕ್ಷದಲ್ಲಿ ಬೇರೆ ಯಾರದ್ದಾದರೂ ಮುಖ ಕಾಣಿಸುತ್ತಿದೆಯೇ? ಕಾಣುತ್ತಿದೆಯಾದರೆ, ಎಲ್ಲೆಡೆ ನನ್ನ ಚಿತ್ರವೇ ಕಾಣಿಸುತ್ತಿದೆ’ ಎಂದಿದ್ದರು. ಇದರಿಂದ ಪ್ರಿಯಾಂಕಾ ಸಿಎಂ ಅಭ್ಯರ್ಥಿ ಬಿಂಬಿತವಾಗಿತ್ತು.


 

click me!