Latest Videos

ಮಹಿಳಾ ಪೊಲೀಸ್ ಪೇದೆ ಜೊತೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಡಿಎಸ್‌ಪಿಗೆ ನೀಡಿದ ಶಿಕ್ಷೆ ಭಾರಿ ಚರ್ಚೆ!

By Chethan KumarFirst Published Jun 23, 2024, 10:00 AM IST
Highlights

ಮಹಿಳಾ ಪೊಲೀಸ್ ಪೇದೆ ಜೊತೆಗೆ ಡಿಎಸ್‌ಪಿ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಘಟನೆ ಭಾರಿ ಕೋಲಾಹಲ ಸೃಷ್ಟಿಸಿದೆ. ಘಟನೆ ಬಲಿಕ ಡಿಎಸ್‌ಪಿಗೆ ನೀಡಿರುವ ಶಿಕ್ಷೆಗೆ ಒಂದೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಅಮಾನತು ಶಿಕ್ಷೆ ಸರಿ ಎಂಬ ವಾದವೂ ಕೇಳಿಬರುತ್ತಿದೆ.
 

ಲಖನೌ(ಜೂ.23) ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ ತನ್ನ ಪವರ್ ಬಳಸಿಕೊಂಡು ಮಹಿಳಾ ಪೊಲೀಸ್ ಪೇದೆಯನ್ನು ಕರೆದುಕೊಂಡು ಲಾಡ್ಜ್‌ಗೆ ತೆರಳಿದ್ದಾರೆ. ಒಂದೆ ಕೊಠಡಿಯಲ್ಲಿ ಮಹಿಳಾ ಪೊಲೀಸ್ ಪೇದೆ ಜೊತೆ ಕಳೆದ ಡಿಎಸ್‌ಪಿಯನ್ನು ಅದೇ ಠಾಣೆಯ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ದಾಳಿ ವೇಳೆ ಮಹಿಳಾ ಪೊಲೀಸ್ ಜೊತೆ ಅಸಭ್ಯ ಭಂಗಿಯಲ್ಲಿದ್ದ ಡಿಎಸ್‌ಪಿ ವಿರುದ್ಧ ದೂರು ದಾಖಲಾಗಿತ್ತು. ಈ ವರದಿ ಆಧರಿಸಿ ಹೆಚ್ಚುವರಿ ಪೊಲೀಸ್ ಆಯುಕ್ತರು ಡಿಎಸ್‌ಪಿಗೆ ಶಿಕ್ಷೆ ವಿಧಿಸಿದ್ದಾರೆ. ಡಿಎಸ್‌ಪಿ ಆಗಿದ್ದ ಪೊಲೀಸ್‌ ಇದೀಗ ಕೆಳ ದರ್ಜೆಯ ಪೊಲೀಸ್ ಪೇದೆಯಾಗಿ ಹಿಂಬಡ್ತಿ ನೀಡುವ ಮೂಲಕ ಶಿಕ್ಷೆ ವಿಧಿಸಲಾಗಿದೆ. ಈ ಶಿಕ್ಷೆ ಇದೀಗ ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶದ ಉನ್ನಾವೋ ಬಳಿ ಠಾಣೆಯಲ್ಲಿ ಈ ಘಟನೆ ನಡೆದಿದೆ.

ಡಿಎಸ್‌ಪಿ ಕೃಪಾ ಶಂಕರ್ ಕನೌಜಿಯಾ ಮೊದಲು ಸರ್ಕಲ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗಷ್ಟೆ ಡಿಎಸ್‌ಪಿಯಾಗಿ ಬಡ್ತಿ ಪಡೆದಿದ್ದರು. ಅದೇ ಠಾಣೆಯ ಮಹಿಳಾ ಪೊಲೀಸ್ ಪೇದೆ ಜೊತೆ ಸುಲುಗೆಯಿಂದ ಇದ್ದ ಕೃಪಾ ಶಂಕರ್ ಕನೌಜಿಯಾ ತನ್ನ ರಾಸಲೀಲೆ ಶುರುಮಾಡಿದ್ದಾರೆ. ಕುಟುಂಬದ ಕಾರಣದಿಂದ ಒಂದು ವಾರ ರಜೆ ಪಡೆದ ಡಿಎಸ್‌ಪಿ ನೇರವಾಗಿ ಮಹಿಳಾ ಪೊಲೀಸ್ ಪೇದೆಯನ್ನು ಕರೆದುಕೊಂಡು ಲಾಡ್ಜ್‌ಗೆ ತೆರಳಿದ್ದಾರೆ.

ಉ.ಪ್ರದೇಶದಲ್ಲಿ ಕರ್ನಾಟಕ ಪೊಲೀಸರು ಪೇಚಿಗೆ ಸಿಲುಕಿದ ಘಟನೆ; ನಮ್ಮವರು ತಪ್ಪು ಮಾಡಿಲ್ಲ, ಬಂಧಿಸಲು ಹೋಗಿದ್ರು: ಪರಮೇಶ್ವರ್

ಕಾನ್ಪುರ ಹೊಟೆಲ್‌ನಲ್ಲಿ ರೂಂ ಪಡೆದ ಡಿಎಸ್‌ಪಿ ಮಹಿಳಾ ಪೊಲೀಸ್ ಜೊತೆ ಕಳೆದಿದ್ದಾರೆ. ಈ ವೇಳೆ ಡಿಎಸ್‌ಪಿ ಎರಡೂ ಮೊಬೈಲ್‌ಗನ್ನು ಸ್ವಿಚ್ ಆಫ್ ಮಾಡಿದ್ದಾರೆ. ಡಿಎಸ್‌ಪಿ ಮನೆಗೆ ಬರದ ಕಾರಣ ಆತಂಕಗೊಂಡ ಪತ್ನಿ ಹಾಗೂ ಕುಟುಂಬಸ್ಥರು, ಉನ್ನಾವೋ ಪೊಲೀಸ್ ಠಾಣೆ ಸಂಪರ್ಕಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಡಿಎಸ್‌ಪಿ ಮೊಬೈಲ್ ನೆಟ್‌ವರ್ಕ್ ಪರಿಶೀಲಿಸಿದ್ದರೆ.ಇದರ ಜಾಡು ಹಿಡಿದು ಹೊರಟ ಪೊಲೀಸರು ಕಾನ್ಪುರ ಹೊಟೆಲ್‌ಗೆ ತೆರಳಿದ್ದಾರೆ.

ಹೊಟೆಲ್ ಕೊಠಡಿಗೆ ದಾಳಿ ಮಾಡಿದ ಪೊಲೀಸರಿಗೆ ಆಘಾತವಾಗಿದೆ. ಡಿಎಸ್‌ಪಿ, ಮಹಿಳಾ ಪೇದೆ ಜೊತೆ ಅಸಭ್ಯ ಭಂಗಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಘಟನೆ ಬಳಿಕ ಪೊಲೀಸರು ವರದಿ ತಯಾರಿಸಿ ಎಡಿಜಿ ನೀಡಿದ್ದಾರೆ. ಈ ವರಧಿ ಆಧರಿಸಿ ಎಡಿಜಿ, ಡಿಎಸ್‌ಪಿ ಕೃಪಾ ಶಂಕರ್ ಕನೌಜಿಯಾರನ್ನು ಕೆಳ ದರ್ಜೆ ಪೊಲೀಸ್ ಪೇದೆಯಾಗಿ ಹಿಂಬಡ್ತಿ ಶಿಕ್ಷೆ ನೀಡಿದ್ದಾರೆ.ಹಲವರು ಈ ಶಿಕ್ಷೆಯನ್ನು ಪ್ರಶಂಸಿಸಿದ್ದಾರೆ. ಮತ್ತೆ ಕೆಲವರು ಅಮಾನತು ಮಾಡಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಶಿಕ್ಷಕನ ಆಕ್ರೋಶದ ಹೊಡೆತಕ್ಕೆ ವಿದ್ಯಾರ್ಥಿಗೆ ಶ್ರವಣ ದೋಷ, ಕಂಗಾಲದ ಕುಟುಂಬ!

click me!