ಜೂನ್ 26ರಿಂದ ಟೆಲಿಕಾಂ ಹೊಸ ಕಾಯ್ದೆ ಜಾರಿ, ನಿಮಗೆ ತಿಳಿದಿರಲಿ ನಿಯಮಗಳ ಮಹತ್ತರ ಬದಲಾವಣೆ!

By Chethan KumarFirst Published Jun 23, 2024, 9:17 AM IST
Highlights

ಜೂನ್ 26 ರಿಂದ ಟೆಲಿಕಾಂ ಹೊಸ ಕಾಯ್ದೆ ಜಾರಿಯಾಗುತ್ತಿದೆ. ನೂತನ ಕಾಯ್ದೆ ಪ್ರಕಾರ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದೆ. ತುರ್ತು ಸಂದರ್ಭದಲ್ಲಿ ಎಲ್ಲಾ ಟೆಲಿಕಾಂ ಸೇವೆಗಳನ್ನು ಸರ್ಕಾರ ನಿಯಂತ್ರಣಕ್ಕೆ ಪಡೆಯಲು  ಈ ಕಾಯ್ದೆ ಅನುಮತಿಸುತ್ತದೆ. ಜೂನ್ 26ರಿಂದ ಯಾವ ನಿಮಯಗಳು ಬದಲಾಗುತ್ತಿದೆ.

ನವದೆಹಲಿ(ಜೂ.23)  ತುರ್ತು ಸಂದರ್ಭಗಳಲ್ಲಿ ಸರ್ಕಾರ ಎಲ್ಲಾ ಟೆಲಿಕಾಂ ಸಂಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಳ್ಳಬಹುದು. ಅಂದರೆ ಜಿಯೋ, ಏರ್‌ಟೆಲ್ ಸೇರಿದಂತೆ ಟೆಲಿಕಾಂ ಸೇವೆಗಳನ್ನು ತುರ್ತು ಸಂದರ್ಭದಲ್ಲಿ ಸರ್ಕಾರ ನಿಯಂತ್ರಣಕ್ಕೆ ಪಡೆಯುವ ಅಧಿಕಾರವನ್ನು ಈ ಹೊಸ ಕಾಯ್ದೆ ನೀಡುತ್ತಿದೆ. ಹೌದು, ಜೂನ್ 26ರಿಂದ ಭಾರತದಲ್ಲಿ ಹೊಸ ಟೆಲಿಕಾಂ ಕಾಯ್ದೆ ಜಾರಿಯಾಗುತ್ತಿದೆ. ಕೆಲ ಮಹತ್ತರ ಬದಲಾವಣೆಗಳು ಈ ಕಾಯ್ದೆಯಲ್ಲಿದೆ. 

ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಜೂನ್ 26ರಿಂದ ಟೆಲಿಕಾಂ ಸರ್ವೀಸ್ ಕ್ಷೇತ್ರದಲ್ಲಿ ಕೆಲ ಬದಲಾವಣೆಯಾಗುತ್ತಿದೆ. ಈ ಪೈಕಿ ಸೆಕ್ಷನ್ 1, 2 ಹಾಗೂ 10 ರಿಂದ 30ರಲ್ಲಿ ಬದಲಾವಣೆಯಾಗುತ್ತಿದೆ. ಇನ್ನು ಸೆಕ್ಷನ್ 42 ರಿಂದ 44, 46, 47, 50 ರಿಂದ 58, 61, ಮತ್ತು ಈ ಕಾಯಿದೆಯ 62 ಜಾರಿಗೆ ಬರಲಿದೆ.

Latest Videos

ರಾಜಕಾರಣಿಗಳು ಮೂಗುತೂರಿಸಿದ್ದರಿಂದ Aircel ಕಂಪನಿ ಕಳ್ಕೊಂಡೆ, ಈಗ ದೇಶ ಬದಲಾಗಿದೆ ಎಂದ ಮಾಲೀಕ!

ಹೊಸ ಕಾಯ್ದೆ ಪ್ರಕಾರ ಜೂನ್ 26ರಿಂದ ವಿಪತ್ತು ನಿರ್ವಹಣೆ, ಸಾರ್ವಜನಿಕ ತುರ್ತು ಪರಿಸ್ಥಿತಿ, ಸಾರ್ವಜನಿಕ ಹಿತದೃಷ್ಟಿ, ಅಪರಾಧ ತಡೆಗಟ್ಟುವಿಕೆ, ಭದ್ರತೆ ಸೇರಿದಂತೆ ಕೆಲ ಸಂದರ್ಭಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೇ ದೂರಸಂಪರ್ಕ ಸೇವೆಯನ್ನು ಸ್ವಾಧಿನ ಪಡಿಸಿಕೊಳ್ಳಬಹುದು. ಅಥವಾ ತಾತ್ಕಾಲಿಕವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಸರ್ಕಾರಗಳು ಸಾರ್ವಜನಿಕರಿಗೆ ಸಂದೇಶಗಳು, ತುರ್ತು ಕರೆಗಳನ್ನು ಮಾಡಲು ಬಳಸಿಕೊಳ್ಳಬಹುದು. 

ದೂರ ಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳು ದೂರ ಸಂಪರ್ಕ ನೆಟ್‌ವರ್ಕ್ ಸ್ಥಾಪಿಸಲು, ನಿರ್ವಹಿಸಲು ಅಥವಾ ಸೇವೆ ನೀಡಲು ಸರ್ಕಾರದ ಅಧಿಕೃತ ಪರವಾನಗೆ ಪಡೆಯುವ ಅಗತ್ಯವಿದೆ. ಇನ್ನು ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿಯನ್ನು ಹೊಸ ಕಾಯ್ದೆ ಪ್ರಕಾರ ಡಿಜಿಟಲ್ ಭಾರತ್ ನಿಧಿ ಎಂದು ಮರುನಾಮಕರ ಮಾಡಲಾಗುತ್ತಿದೆ. ಈ ನಿಧಿಯಲ್ಲಿನ ಹಣವನ್ನು ಗ್ರಾಮೀಣ ಪ್ರದಶದಲ್ಲಿ ಟೆಲಿಕಾಂ ಸೇವೆ, ದೂರಸಂಪರ್ಕ ಮೂಲಭೂತ ಸೌಕರ್ಯ, ಸಂಶೋಧನೆಗಳಿಗೆ ಬಳಸಿಕೊಳ್ಳಲಾಗುತ್ತದೆ.  ಗ್ರಾಮೀಣ ಪ್ರದೇಶದಲ್ಲಿ ದೂರಸಂಪರ್ಕ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸಲು ಉತ್ತೇಜನ ನೀಡಲಾಗುತ್ತದೆ.

ಇದರ ಜೊತೆಗೆ ಉಪಗ್ರಹ ಸೇವೆ, ತರಂಗಾಂತರ ಹಂಚಿಕೆ, ಸ್ಪೆಕ್ಟ್ರಮ್ ಆಡಳಿತಾತ್ಮಕ ಕಾರ್ಯವಿಧಾನಗಳಲ್ಲೂ ಮಹತ್ತರ ಬದಲಾವಣೆ ತರಲಾಗಿದೆ. ನೂತನ ದೂರಸಂಪರ್ಕ ಕಾಯ್ದೆ 2023 ಜಾರಿಯಾದ ಬಳಿಕ ಭಾರತೀಯ ಟೆಲಿಗ್ರಾಫ್ ಕಾಯ್ದೆ 1885, ವೈಯರ್‌ಲೆಸ್ ಟೆಲಿಗ್ರಾಫಿ ಕಾಯ್ದೆ 1953 ನಿಯಮಗಳು ಅಸ್ತಿತ್ವ ಕಳೆದುಕೊಳ್ಳಲಿದೆ.  ನಿಮಯಗಳ ಬದಲಾವಣೆ ಜೂನ್ 26, 2024ರಿಂದಲೇ ಜಾರಿಯಾಗಲಿದೆ. 

ಡೇಟಾ ಬಳಕೆಯಲ್ಲಿ ಚೀನಾ ಹಿಂದಿಕ್ಕಿದ ಜಿಯೋ, ವಿಶ್ವದ ಅತೀ ದೊಡ್ಡ ಆಪರೇಟರ್ ಕಿರೀಟ!
 

click me!