ಅಡುಗೆಮನೆಯಲ್ಲಿದ್ದ 250 ಗ್ರಾಂ ಆಲೂಗಡ್ಡೆ ಕಳ್ಳತನ: ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

By Mahmad RafikFirst Published Nov 2, 2024, 7:04 PM IST
Highlights

ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಅಡುಗೆಗೆಂದು ಸಿದ್ಧಪಡಿಸಿಟ್ಟಿದ್ದ ಆಲೂಗಡ್ಡೆ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಲಕ್ನೋ: ವ್ಯಕ್ತಿಯೋರ್ವ ತನ್ನ ಮನೆಯಲ್ಲಿ ಅಡುಗೆ ಸಿದ್ಧ ಮಾಡಿಟ್ಟಿದ್ದ ಆಲೂಗಡ್ಡೆ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ನಶೆಯಲ್ಲಿ ನನ್ನ ಆಲೂಗಡ್ಡೆ ಕಳ್ಳತನವಾಗಿರುವ ವಿಷಯ ಹೇಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸರ ಪ್ರಶ್ನೆಗೆ ಉತ್ತರಿಸುತ್ತಾ ತನ್ನ ಮನೆಯಲ್ಲಿದ್ದ ಆಲೂಗಡ್ಡೆ ಹೇಗೆ ಮಿಸ್ ಆಯ್ತು ಎಂಬುದನ್ನು ವಿವರಿಸಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿರುವ ನೆಟ್ಟಿಗರು, ಈ ವ್ಯಕ್ತಿಗೆ ನ್ಯಾಯ ಸಿಗುವರೆಗೂ ಹೋರಾಟ ಮಾಡಬೇಕು. ಆಲೂಗಡ್ಡೆ ಪ್ರಿಯರಿಗೆ ತುಂಬಾ ದುಃಖಕರ ವಿಷಯ ಇದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ವ್ಯಕ್ತಿ ಮತ್ತು ಪೊಲೀಸ್ ಅಧಿಕಾರಿ ನಡುವಿನ ಸಂಭಾಷಣೆ ಹೀಗಿದೆ
ಪೊಲೀಸ್:
ನೀನೇನಾ ಕಾಲ್ ಮಾಡಿದ್ದು? ನಿನ್ನ ಹೆಸರು ಏನು?
ವ್ಯಕ್ತಿ: ಹೌದು ನಾನೇ ಕಾಲ್ ಮಾಡಿದ್ದು, ನನ್ನ ಹೆಸರು ವಿಜಯ್ ವರ್ಮಾ ಎಂದು ತಂದೆ ಹಾಗೂ ಏರಿಯಾ ಹೆಸರು ಹೇಳುತ್ತಾನೆ.
ಪೊಲೀಸ್: ಕಾಲ್ ಮಾಡಿದ್ದೇನೆ? ಏನಾಗಿದೆ?
ವ್ಯಕ್ತಿ: ನಾನು 4 ಗಂಟೆಗೆ ಬಂದು ಆಲೂಗಡ್ಡೆ ಸಿಪ್ಪೆ ಬಿಡಿಸಿ ಎತ್ತಿಟ್ಟಿದ್ದೆ. ಹೊರಗಡೆ ಹೋಗಿ ತಿಂದು-ಕುಡಿದು ಬರೋಣ ಅಂತ ಹೋಗಿದ್ದೆ. ಹಿಂದಿರುಗಿ ಬಂದಾಗ ಮನೆಯಲ್ಲಿ ಆಲೂಗಡ್ಡೆ ಇರಲಿಲ್ಲ. ಇದು ನನ್ನ ಮನೆಯ ಸಮಸ್ಯೆ. 
ಪೊಲೀಸ್: ಆಲೂಗಡ್ಡೆ ಕಳ್ಳತನ ಮಾಡಿದ್ಯಾರು?
ವ್ಯಕ್ತಿ: ಅದುವೇ ಗೊತ್ತಾಗುತ್ತಿಲ್ಲ. ಈ ಸಂಬಂಧ ತನಿಖೆ ನಡೆಸಿ ಆಲೂಗಡ್ಡೆಯನ್ನು ಹುಡುಕಿಕೊಡಿ. 

Latest Videos

ಪೊಲೀಸ್: ಆಲೂಗಡ್ಡೆ ಎಷ್ಟಿತ್ತು? ಸುಮಾರು ಎರಡ್ಮೂರು ಕೆಜಿ ಇರಬಹುದಾ? 
ವ್ಯಕ್ತಿ: ಮನೆಯಲ್ಲಿ ನಾನೊಬ್ಬನೇ ಇರೋದು. 250 ರಿಂದ 300 ಗ್ರಾಂ ಇರಬಹುದು. 
ಪೊಲೀಸ್: ಓ..  250 ರಿಂದ 300 ಗ್ರಾಂ ಆಲೂಗಡ್ಡೆ ಕಳ್ಳತನವಾಗಿದೆಯಾ? ಯಾವ ಸರಾಯಿ ಕುಡಿದಿದ್ದೀಯಾ ನೀನು? 
ವ್ಯಕ್ತಿ: ಇಲ್ಲೇ ಸ್ಥಳೀಯವಾಗಿ ಸಿಗುವ ಮದ್ಯ ಕುಡಿದಿದ್ದೇನೆ. ಇಡೀ ದಿನ ಕೂಲಿ ಕೆಲಸ ಮಾಡೋದರಿಂದ ಸಂಜೆ ಸ್ವಲ್ಪ ಮದ್ಯ ಕುಡಿಯುತ್ತೇನೆ. ಸ್ವಲ್ಪ ನಶೆಯಲ್ಲಿದ್ದೇನೆ.

ಇದನ್ನೂ ಓದಿ: ಮಗನಿಗೆ ಬ್ಲೂಫಿಲಂನಲ್ಲಿ ಕೆಲಸ ಸಿಕ್ಕ ವಿಷಯ ಕೇಳಿದಾಗ ಅಮ್ಮನ ರಿಯಾಕ್ಷನ್ ಹೇಗಿತ್ತು ನೋಡಿ

ಪೊಲೀಸ್ ಸಿಬ್ಬಂದಿ ಮತ್ತು ವ್ಯಕ್ತಿಯ ಸಂಭಾಷಣೆ ಕಂಡು ನೆಟ್ಟಿಗರು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಏನಾದ್ರೂ ಕಳ್ಳತನವಾದ್ರೆ ಹುಡುಕಿಕೊಡೋದು ಪೊಲೀಸರ ಕರ್ತವ್ಯ. ಅದಕ್ಕಾಗಿಯೇ ಆತ ಪೊಲೀಸರಿಗೆ ಕರೆ ಮಾಡಿದ್ದೇನೆ. ಕುಡುಕರು ಅಂದ್ರೆ ಸುಮ್ನೆನಾ? ದಯವಿಟ್ಟು ಆತ ಕಳೆದುಕೊಂಡ ವಸ್ತುವನ್ನು ಹುಡುಕಿಕೊಡಿ ಎಂದು ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ. 

ಇದೊಂದು ತುಂಬಾ ಗಂಭೀರ ವಿಷಯವಾಗಿದ್ದು, ಕಳ್ಳತನವಾಗಿದ್ದಂತು ನಿಜ ಅಲ್ಲವೇ? ಚಿನ್ನ ಅಥವಾ ಆಲೂಗಡ್ಡೆಯಾಗಲಿ ಇದು ಕಳ್ಳತನ. ಆದ್ದರಿಂದ ಈ ಸಂಬಂಧ ಪೊಲೀಸರು ತನಿಖೆ ನಡೆಸಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಂದಿಷ್ಟು ಮಂದಿ ಅದು ಚಿನ್ನದ ಆಲೂಗಡ್ಡೆ ಆಗಿರಬಹುದು? ಈ ಕಳ್ಳತನದ ವಿಷಯವನ್ನಾಧರಿಸಿ ಸಿನಿಮಾ ಸಹ ಮಾಡಬಹುದು ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪಿಜ್ಜಾ ತಿಂದು ಇಟ್ಟ ಕಸ ಸ್ವಚ್ಛಗೊಳಿಸಿ ಅಭಿಮಾನಿಗಳ ಹೃದಯ ಗೆದ್ದ ಅರ್ಜಿತ್ ಸಿಂಗ್!

Vijay Verma of Hardoi, UP called the police after 250 grams of potatoes were stolen.
pic.twitter.com/wjqAMbPVFw

— Ghar Ke Kalesh (@gharkekalesh)

250 grams of potatoes? That’s some serious spud-napping! Looks like Hardoi is taking potato security to a whole new level….. hahahaha… Who knew potatoes were the new gold? Sounds like a mash-up of crime drama in Hardoi!

— Ayodhya P Singh (@AyodhyaPS)
click me!