ಫೇಸ್‌ಬುಕ್‌ನಲ್ಲಿ ವಿವಾಹಿತ ಮಹಿಳೆಯ ಸಂಪರ್ಕ: ಮುಂಬೈಗೆ ಕರೆದೊಯ್ದು ಮತಾಂತರ

By Anusha KbFirst Published Jun 12, 2023, 3:12 PM IST
Highlights

ವಿವಾಹಿತ ದಲಿತ ಮಹಿಳೆಯ ಜೊತೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿ ಆಕೆಯನ್ನು ಓಡಿಸಿಕೊಂಡು ಹೋಗಿ ಬಲವಂತವಾಗಿ ಮತಾಂತರಿಸಿದ ಯುವಕನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶ: ವಿವಾಹಿತ ದಲಿತ ಮಹಿಳೆಯ ಜೊತೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿ ಆಕೆಯನ್ನು ಓಡಿಸಿಕೊಂಡು ಹೋಗಿ ಬಲವಂತವಾಗಿ ಮತಾಂತರಿಸಿದ ಯುವಕನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಮತಾಂತರ ತಡೆ ಕಾಯ್ದೆಯಡಿ ಈ ಬಂಧನವಾಗಿದೆ. ಆಕೆಯ ಸ್ನೇಹ ಬೆಳೆಸಿ ಮತಾಂತರಿಸಿದ ಪ್ರಮುಖ ಆರೋಪಿ ಸಜ್ಜಾವುಲ್ಲಾ ಹಾಗೂ ಆತನಿಗೆ ಸಹಕರಿಸಿದ ಇತರ ಐವರನ್ನು ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ (Siddharthnagar district) ಮಿಶ್ರೌಲಿಯಾ (Mishrauliya)ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಕ್ರಮ ಧಾರ್ಮಿಕ ಮತಾಂತರ ಪ್ರಕರಣ ಬೆಳಕಿಗೆ ಬಂದಿದೆ. ಇದೆ ಜಿಲ್ಲೆಯ ಸಿಸ್ವಾನ್ ಗ್ರಾಮದ ನಿವಾಸಿ ಸಜಾವುಲ್ಲಾ ಎಂಬಾತ ದಲಿತ ಕುಟುಂಬಕ್ಕೆ ಸೇರಿದ ವಿವಾಹಿತ ಮಹಿಳೆಯೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿ, ಆಕೆಯೊಂದಿಗೆ ಓಡಿಹೋಗಿದ್ದ ನಂತರ ಆಕೆಯನ್ನು ಇತರರ ನೆರವಿನೊಂದಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾನೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್  504 ಮತ್ತು 506, ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿದ್ಧಾರ್ಥನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Latest Videos

Gehana Vasisth: ಮುಸ್ಲಿಂ ಯುವಕನ ಜೊತೆ ಪೋರ್ನ್​ ಕೇಸ್​ ನಟಿ ಮದ್ವೆ: ಇಸ್ಲಾಂಗೆ ಮತಾಂತರ?

ಮಹಿಳೆ ಲಕ್ಮಿ ನಾಲ್ಕು ವರ್ಷಗಳ ಹಿಂದೆ ಶೈಲೇಶ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಈ ವರ್ಷ ಮೇ 31 ರಂದು ರಾತ್ರಿ ಲಕ್ಷ್ಮಿ ತಮ್ಮ ಮನೆಯಿಂದ 55,000 ರೂ ನಗದು ಹಾಗೂ ಚಿನ್ನಾಭರಣಗಳನ್ನು ತೆಗೆದುಕೊಂಡು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಸೊಸೆ ಹಣ ಚಿನ್ನಾಭರಣದೊಂದಿಗೆ ನಾತ್ತೆಯಾದ ಬಗ್ಗೆ ಕುಟುಂಬಸ್ಥರು ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದಾದ ಎರಡು ದಿನಗಳ ನಂತರ, ಇದೇ ಜಿಲ್ಲೆಯ ಸಿಸ್ವಾನ್ ಗ್ರಾಮದ ನಿವಾಸಿ ಸಜಾವುಲ್ಲಾ ಎಂಬಾತ ಶೈಲೇಶ್ ಅವರ ಪತ್ನಿಯೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿ ಪುಸಲಾಯಿಸಿ ತನ್ನ ಕೆಲವು ಸಹಚರರೊಂದಿಗೆ ಮುಂಬೈಗೆ ಕರೆದೊಯ್ದಿರುವುದು ಪತ್ತೆಯಾಗಿದೆ. ಮುಂಬೈಗೆ ಕರೆದೊಯ್ದು ಸಜ್ಜಾವುಲ್ಲಾ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಪ್ರಕ್ರಿಯೆ ನಡೆಸಿ ಆಕೆಯ ಹೆಸರನ್ನು ಲಕ್ಷ್ಮಿ ಬದಲು ಮುಸ್ಕಾನ್ (Muskaan) ಎಂದು ಬದಲಾಯಿಸಿದ್ದಾನೆ. ನಂತರ ನಿಖಾಹ್ ಸಮಾರಂಭ ಮಾಡಿ ಆಕೆಯನ್ನು ಮದ್ವೆಯಾಗಿದ್ದಾನೆ.

ಹಿಂದೂ ಹೆಸರಲ್ಲಿ ಲವ್, ಬಲವಂತವಾಗಿ ಮತಾಂತರಗೊಳಿಸಿ ಅಪ್ಪನ ಜೊತೆ ಸೆಕ್ಸ್‌ಗೆ ಒತ್ತಾಯಿಸಿದ ಅಬೀದ್!

ಇದೇ ವೇಳೆ ಈ ವಿಚಾರ ತಿಳಿದ ಯುವತಿಯ ಸಂಬಂಧಿಕರು ಮುಂಬೈ (Mumbai) ತಲುಪಿದ್ದು, ಎರಡೂ ಕಡೆಯವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಆಕೆಯನ್ನು ಆಕೆಯ ಕುಟುಂಬದ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಿಯ (Lakshmi) ಸಹೋದರನ ಜೊತೆ ಮಾತನಾಡಿದ ಬಳಿಕ ಲಕ್ಷ್ಮಿ ಹಾಗೂ ಸಜ್ಜಾವುಲ್ಲಾ ನಡುವಿನ ಸ್ನೇಹದ ಬಗ್ಗೆ ತಿಳಿಯಿತು, ಸಿಸ್ವಾನ್ ಗ್ರಾಮದ ಯುವಕನೊಂದಿಗೆ ಆಕೆ ಫೇಸ್‌ಬುಕ್‌ನಲ್ಲಿ (Facebook) ಚಾಟ್ ಮಾಡುತ್ತಿದ್ದಳು ಎಂದು ಆತ ಬಹಿರಂಗಪಡಿಸಿದ್ದಾನೆ ಎಂದು ಲಕ್ಷ್ಮಿಯ ಪತಿ ಶೈಲೇಶ್ (Shailesh) ಹೇಳಿದ್ದಾರೆ.  ಮುಂಬೈಗೆ ಕರೆದೊಯ್ಯುವ ಮೊದಲು ಲಕ್ಷ್ಮಿ ನಾಸಿಕ್‌ನ ಕಲ್ಯಾಣ್‌ನಲ್ಲಿ ವಾಸಿಸುವ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿದ್ದಾಳೆ. ತನ್ನನ್ನು ಬಲವಂತವಾಗಿ ಅವರು ಮುಂಬೈಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದಾಳೆ. ಇದಾದ ಬಳಿಕ ಆಕೆಯ ಫೋನ್ ಸ್ವಿಚ್ಆಫ್ ಆಗಿತ್ತು ಎಂದು ಶೈಲೇಶ್ ಹೇಳಿದ್ದಾರೆ. 
 

click me!