ತನ್ನತ್ತ ಎಸೆದ ಚಪ್ಪಲಿನ ಹೊತ್ಕೊಂಡೇ ಹೋಯ್ತು ಹಾವು: ಹಳೆ ವೀಡಿಯೋ ಮತ್ತೆ ವೈರಲ್

Published : Jun 12, 2023, 02:05 PM ISTUpdated : Jun 12, 2023, 02:08 PM IST
ತನ್ನತ್ತ ಎಸೆದ ಚಪ್ಪಲಿನ ಹೊತ್ಕೊಂಡೇ ಹೋಯ್ತು ಹಾವು:  ಹಳೆ ವೀಡಿಯೋ ಮತ್ತೆ ವೈರಲ್

ಸಾರಾಂಶ

ಹಾವೊಂದು ಚಪ್ಪಲಿಯನ್ನು ಬಾಯಲ್ಲಿ ಕಚ್ಚಿ ಎತ್ತಿಕೊಂಡು ಹೋಗುತ್ತಿರುವ ವೀಡಿಯೋವೊಂದು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಮತ್ತೆ ಅದೇ ವೀಡಿಯೋ ವೈರಲ್ ಆಗಿದೆ. ಅನೇಕರು ಈ ವೀಡಿಯೋಗೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. 

ಹಾವೊಂದು ಚಪ್ಪಲಿಯನ್ನು ಬಾಯಲ್ಲಿ ಕಚ್ಚಿ ಎತ್ತಿಕೊಂಡು ಹೋಗುತ್ತಿರುವ ವೀಡಿಯೋವೊಂದು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಮತ್ತೆ ಅದೇ ವೀಡಿಯೋ ವೈರಲ್ ಆಗಿದೆ. ಅನೇಕರು ಈ ವೀಡಿಯೋಗೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. 

ಹಾವುಗಳು ಅತ್ಯಂತ ಭಯಗೊಳಿಸುವ ಸರೀಸೃಪಗಳಾಗಿವೆ.  ಹಾವು ಎಂದ ಕೂಡಲೇ ಬಹುತೇಕ ಜನ ಭಯಗೊಳ್ಳುತ್ತಾರೆ. ಆದರೂ ಅನೇಕರು ಹಾವಿನಿಂದ ಆಕರ್ಷಣೆಗೊಳ್ಳುತ್ತಾರೆ. ಭಯಗೊಳ್ಳುವವರ ನಡುವೆಯೇ ಹಾವನ್ನು ಇಷ್ಟಪಡುವ ಅನೇಕರಿದ್ದಾರೆ. ಹಾವುಗಳ ಪರಿಸರದ ಜೀವ ವೈವಿಧ್ಯದ ಪ್ರಮುಖ ಭಾಗವಾಗಿದ್ದು, ಭೂಮಿಯ ತಾಪಮಾನದ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪರಿಸರದ ಸಮೃದ್ಧಿಗೆ ಹಾವುಗಳು ಬೇಕೆ ಬೇಕು. ಇಂತಹ ಹಾವೊಂದರ ವೀಡಿಯೋ ಈಗ ಜನರ ಹಾಸ್ಯಕ್ಕೆ ಕಾರಣವಾಗಿದೆ. 

ನಿಮ್ಮ ಕನಸಿನಲ್ಲಿ ಹಾವು ಬರುತ್ತಿದೆಯಾ?: ಇದು ನಿಮ್ಮ ಅದೃಷ್ಟ ಬದಲಾಗುವ ಸಮಯ

ಐಎಫ್‌ಎಸ್ ಅಧಿಕಾರಿಯಾಗಿರುವ ಪರ್ವಿನ್ ಕಸ್ವಾನ್ ಅವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅವರು ಈ ಹಾವು ಚಪ್ಪಲಿ ತೆಗೆದುಕೊಂಡು ಹೋಗಿ ಏನು ಮಾಡಬಹುದು ಎಂಬುದೇ ಅಚ್ಚರಿಯಾಗಿದೆ ಅದಕ್ಕೆ ಕಾಲುಗಳಿಲ್ಲ ಎಂದು ಬರೆದುಕೊಂಡಿದ್ದಾರೆ. 30ಸೆಕೆಂಡ್‌ಗಳ ವೀಡಿಯೋದಲ್ಲಿ ಹಾವೊಂದು ಮನೆ ಮುಂದೆ ಹರಿದಾಡುತ್ತಾ ಬಂದಿದ್ದು, ಈ ವೇಳೆ ಹಾವನ್ನು ಬೆದರಿಸಲು ಯಾರೋ ಚಪ್ಪಲಿ ಎಸೆದಿದ್ದಾರೆ. ಈ ವೇಳೆ ಹಾವು ಆ ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿದೆ.  ಇತ್ತ ಹಾವು ಚಪ್ಪಲ್ ತೆಗೆದುಕೊಂಡು ಹೋಗಿ ಏನು ಮಾಡುತ್ತದೆ ಎಂಬ ಐಎಫ್‌ಎಸ್ ಅಧಿಕಾರಿಯ ಈ ಕುತೂಹಲಕ್ಕೆ ಜನ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.

ಕೆಲವರು ಈ ಹಾವಿಗೆ ಯಾರೋ ಚಪ್ಪಲಿಯಲ್ಲಿ ಹೊಡೆದಿರಬೇಕು ಅದಕ್ಕೆ ಅದು ಬಂದು ಈ ಚಪ್ಪಲಿಯನ್ನು ಹೊತ್ತೊಯ್ದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ನಾಗಿಣಿ ಇರಬೇಕು ತನ್ನ ನಾಗನಿಗೆ ಚಪ್ಪಲಿ ತೆಗೆದುಕೊಂಡು ಹೋಗಿ ಕೊಡುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಒಟ್ಟಿನಲ್ಲಿ ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಹಾಸ್ಯದ ಜೊತೆ ಚಪ್ಪಲಿ ತೆಗೆದುಕೊಂಡು ಹೋಗಿ ಹಾವು ಏನ್ ಮಾಡುತ್ತೆ ಎಂಬ ಕುತೂಹಲಕ್ಕೆ ಕಾರಣವಾಗಿದೆ. 

ಕಾಫಿನಾಡಿನ ಉರಗ ತಜ್ಞ ಸ್ನೇಕ್‌ ನರೇಶ್‌ ಹಾವು ಕಚ್ಚಿ ಸಾವು: ರಕ್ಷಣೆ ಮಾಡಿದ ಹಾವೇ ಕಚ್ಚಿಬಿಡ್ತು!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೌಟು, ಕುಕ್ಕರ್ ಹಿಡಿದು ನಿಲ್ಲಿ, SIR ವಿರುದ್ಧ ಹೋರಾಟಕ್ಕೆ ಮಹಿಳೆಯರಿಗೆ ಸಿಎಂ ಮಮತಾ ಬ್ಯಾನರ್ಜಿ ಕರೆ
ಮಧುಮೇಹ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: AIIMS ವೈದ್ಯರಿಂದ ಅದ್ಭುತ ಸಾಧನೆ, ಈಗ ಕೇವಲ 2 ಗಂಟೆಯಲ್ಲಿ ಗುಣಪಡಿಸಬಹುದು!