ಇಬ್ಬರು ಅಲ್ ಖೈದಾ ಉಗ್ರರ ಬಂಧನ; ಬಿಜೆಪಿ ನಾಯಕ ಗುರಿಯಾಗಿಸಿ ಆತ್ಮಹತ್ಯಾ ಬಾಂಬ್ ದಾಳಿಗೆ ಸಂಚು

Published : Jul 11, 2021, 06:21 PM ISTUpdated : Jul 11, 2021, 07:14 PM IST
ಇಬ್ಬರು ಅಲ್ ಖೈದಾ ಉಗ್ರರ ಬಂಧನ; ಬಿಜೆಪಿ ನಾಯಕ ಗುರಿಯಾಗಿಸಿ ಆತ್ಮಹತ್ಯಾ ಬಾಂಬ್ ದಾಳಿಗೆ ಸಂಚು

ಸಾರಾಂಶ

ಭಾರತದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಅಲ್‌ಖೈದಾ ಉಗ್ರ ಸಂಘಟನೆ ಇಬ್ಬರು ಉಗ್ರರ ಅರೆಸ್ಟ್ ಮಾಡಿದ ಉತ್ತರ ಪ್ರದೇಶ ATS ಪೊಲೀಸ್ ಆತ್ಮಹತ್ಯಾ ಬಾಂಬ್ ದಾಳಿ ತರಬೇತಿ ಮೂಲಕ ಸ್ಫೋಟಕಕ್ಕೆ ತಯಾರಿ

ಲಖನೌ(ಜು.11): ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳ(ATS) ಕಾರ್ಯಚರಣೆಯಿಂದ ಭಾರತದಲ್ಲಿ ನಡೆಯಬಹುದಾದ ಭಾರಿ ದುರಂತವೊಂದು ತಪ್ಪಿದೆ. ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ಭಾರತದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಇಬ್ಬರನ್ನು ಉತ್ತರ ಪ್ರದೇಶ ಎಟಿಎಸ್ ಬಂಧಿಸಿದ್ದಾರೆ.

ಉಗ್ರರ ಪರ ಕೆಲಸ : 11 ಸರ್ಕಾರಿ ನೌಕರರು ವಜಾ

ಕಾಕೋರಿಯ ದುಬಗ್ಗ ಪ್ರದೇಶದ ಫರೀಡಿಪುರದಲ್ಲಿರುವ ಶಾಹಿದ್‌ಗೆ ಸೇರಿದ ಮನೆಯಿಂದ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಕಾರ್ಯಚರಣೆ ನಡೆಸಿದ ಎಟಿಎಸ್ ಪೊಲೀಸರು ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮನೆ ಸುತ್ತ ಮುತ್ತ ಕಾರ್ಯಚರಣೆ ನಡೆಸಿದ ಪೊಲೀಸರು ಎರಡು ಪ್ರೆಶರ್-ಕುಕ್ಕರ್ ಬಾಂಬ್‌ಗಳು,   6 ರಿಂದ 7 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಬ್ಬರು ಉಗ್ರರ ಜೊತೆ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಚರಣೆ ನಡೆಸಿದ ಪೊಲೀಸರಿಗೆ ಮತ್ತೊಂದು ಸ್ಫೋಟಕ ವಿಚಾರ ಬಹಿರಂಗವಾಗಿದೆ. ಈ ಉಗ್ರರ ಮಾನವ ಬಾಂಬ್ ತರಬೇತಿ ನೀಡುತ್ತಿರುವ ಮಾಹಿತಿ ಬಹಿರಂಗವಾಗಿದೆ. ಯುವಕರ ಸಂಘಟನೆಗೆ ಸೇರಿಸಿಕೊಂಡು ಅವರಿಗೆ ಲಕ್ಷ ಲಕ್ಷ ರೂಪಾಯಿ ಹಣದ ಆಫರ್ ನೀಡಲಾಗುತ್ತಿತ್ತು. ಬಳಿಕ ಮಾನವ ಬಾಂಬ್ ತರಬೇತಿ ನೀಡುವ ಮಾಹಿಯೂ ಲಭ್ಯವಾಗಿದೆ.

ಹೈದರಾಬಾದ್‌ನಲ್ಲಿ NIA ಬಲೆಗೆ ಬಿದ್ದ ಇಬ್ಬರು ಲಷ್ಕರ್‌ ಉಗ್ರರು!...

ಮಾನವ ಬಾಂಬ್ ಮೂಲಕ ಭಾರತದಲ್ಲಿ ಭಾರಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂದು ADG ಪ್ರಶಾಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.  ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರು ಭಯೋತ್ಪಾದಕರು ಲಖನೌದಲ್ಲಿ ಬಿಜೆಪಿ ಸಂಸದ ಮತ್ತು ಕೆಲವು ಹಿರಿಯ ಬಿಜೆಪಿ ನಾಯಕರನ್ನು ಗುರಿಯಾಗಿಸಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಅನ್ನೋ ಮಾಹಿತಿ ಬಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?