ಮದುವೆ ದಿನವೂ ಬಿಡಲಿಲ್ಲ ಪಾನಿಪೂರಿ: ವಧುವಿಗೆ ಪೂರಿ ಕಿರೀಟ

Published : Jul 11, 2021, 05:49 PM ISTUpdated : Jul 11, 2021, 05:54 PM IST
ಮದುವೆ ದಿನವೂ ಬಿಡಲಿಲ್ಲ ಪಾನಿಪೂರಿ: ವಧುವಿಗೆ ಪೂರಿ ಕಿರೀಟ

ಸಾರಾಂಶ

ಹೆಣ್ಮಕ್ಕಳ ಪಾನಿಪೂರಿ, ಗೋಲ್ಗಪ್ಪ ಲವ್ ಎಷ್ಟೆಂಬುದು ರಿವೀಲ್ ಆಯ್ತು ನೋಡಿ ವಧುವಿಗೆ ಪೂರಿಯದ್ದೇ ಕಿರೀಟ

ಇತ್ತೀಚೆಗೆ ಪಾನಿ ಪೂರಿಯೊಳಗೆ ಉಂಗುರವನ್ನು ಇರಿಸುವ ಮೂಲಕ ತನ್ನ ಗೆಳತಿಗೆ ಪ್ರಪೋಸ್ ಮಾಡಿದ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿತ್ತು. ಆಹಾರ ಪ್ರಿಯರು ಇದನ್ನು ಬೆಸ್ಟ್ ಪ್ರಪೋಸಲ್ ಎಂದು ಮೆಚ್ಚಿದ್ದರು. ಈಗ ಇದನ್ನೂ ಮೀರಿಸುವ ವಿಡಿಯೋ ವೈರಲ್ ಆಗಿದೆ.

ರುಚಿಕರವಾದ ಆಹಾರದ ಕಾರಣಗಳಿಗಾಗಿ ದಕ್ಷಿಣ ಭಾರತದ ವಧುವಿನ ವೀಡಿಯೊ ವೈರಲ್ ಆಗುತ್ತಿದೆ. ಪಾನಿ ಪುರಿಯಿಂದ ಮಾಡಿದ ಕಿರೀಟ, ಹೂಮಾಲೆ ಮತ್ತು ಕಂಕಣದಲ್ಲಿ ಅಲಂಕರಿಸಲ್ಪಟ್ಟ ಈ ಸ್ಟ್ರೀಟ್ ಫುಡ್ ಲವರ್ ವಧು ಆಹಾರದ ಬಗ್ಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸಿದ್ದಾಳೆ.

ಗೋಲ್ಗಪ್ಪಗೆ ಈ ವಿಧಾನದಿಂದ ಮನೆಯಲ್ಲೇ ಮಾಡಿ ಗರಿಗರಿ ಪುರಿ!

ವೈರಲ್ ವಿಡಿಯೋವೊಂದರಲ್ಲಿ, ದಕ್ಷಿಣ ಭಾರತದ ವಧು ಪಾನಿ ಪುರಿಯ ಮೇಲಿನ ಪ್ರೀತಿಯನ್ನು ತಿಳಿಸಿದ್ದಾಳೆ.  ಮದುವೆಯ ಉಡುಪು ಮತ್ತು ಆಭರಣಗಳನ್ನು ಧರಿಸಿರುವುದನ್ನು ಕಾಣಬಹುದು. ಅದರ ಜೊತೆ ಪಾನಿ ಪೂರಿಯ ಹಾರ, ಕಂಕಣವನ್ನು ಧರಿಸಿದ್ದಾಳೆ.

ವಧು ಕುಳಿತಾಗ, ಅವಳ ಮನೆಯ ಸದಸ್ಯರು ಮುಂದೆ ಬಂದು ಅವಳ ತಲೆಯ ಮೇಲೆ ಭವ್ಯವಾದ ಪಾನಿಪುರಿ ಕಿರೀಟವನ್ನು ಇಟ್ಟಿದ್ದಾರೆ. ಮುಗುಳ್ನಗುತ್ತಿರುವ ಮತ್ತು ನಗುತ್ತಿರುವ ವಧು ತನ್ನ ವಿಶೇಷ ದಿನದಂದು ತನ್ನ ನೆಚ್ಚಿನ ತಿಂಡಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಫುಲ್ ಖುಷ್ ಅಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು