ಪ್ರವಾಸಕ್ಕೆಂದು ಹೋದ 2000 ವಾಹನ ಮರಳಿ ಕಳಿಸಿದ ಪೊಲೀಸರು..!

By Suvarna News  |  First Published Jul 11, 2021, 5:07 PM IST
  • ಉತ್ತರಾಖಂಡ್ ಪ್ರವಾಸಕ್ಕೆಂದು ಜೋಶ್‌ನಲ್ಲಿ ಹೋದ ಜನರಿಗೆ ನಿರಾಸೆ
  • 2000 ವಾಹನಗಳನ್ನು ಹಿಂದಿರುಗಿ ಕಳಿಸಿದ ಪೊಲೀಸರು

ದೆಹಲಿ(ಜು.11): ಲಾಕ್‌ಡೌನ್ ಸಡಿಲ ಮಾಡಿದ್ದೇ ತಡ ಜನ ಪ್ರವಾಸಿ ತಾಣಗಳಿಗೆ ಮುಗಿ ಬಿದ್ದಿದ್ದಾರೆ. ಕೊರೋನಾ ಇಲ್ವೇ ಇಲ್ಲ ಎಂಬಂತೆ ಬೇಕಾಬಿಟ್ಟಿ ಮೋಜಿನಲ್ಲಿ ಮುಳುಗಿದ್ದಾರೆ.

ಕೆಲವು ದಿನಗಳ ಹಿಂದೆ ಹಲವು ಪ್ರವಾಸೋದ್ಯಮ ಸ್ಥಳದ ಜನದಟ್ಟಣೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಸರ್ಕಾರಗಳು ಎಚ್ಚೆತ್ತುಕೊಂಡಿವೆ. ಹಲವು ರಾಜ್ಯದಲ್ಲಿ ಪ್ರವಾಸಿಗರ ಸಂಖ್ಯೆ ಮೇಲೆ ನಿರ್ಬಂಧ ಹೇರಿದರೆ, ಇನ್ನೂ ಕೆಲವೆಡೆ ನಿಯಮ ಬಿಗಿಗೊಳಿಸಲಾಗಿದೆ. ಇದೀಗ ಇವುಗಳ ಸಾಲಿಗೆ ಉತ್ತರಾಖಂಡ್ ಕೂಡಾ ಸೇರಿದೆ.

Tap to resize

Latest Videos

"

ರಾಜ್ಯದಿಂದ ಮತ್ತು ಹೊರಗಿನಿಂದ ಮಸ್ಸೂರಿ ಮತ್ತು ನೈನಿತಾಲ್ಗೆ ಭೇಟಿ ನೀಡಲು ಯೋಜಿಸುತ್ತಿರುವ ಪ್ರವಾಸಿಗರು 72 ಗಂಟೆ ಒಳಗೆ ಮಾಡಿದ ಕೋವಿಡ್ -19 ಪರೀಕ್ಷೆಯನ್ನು ನೀಡುವುದನ್ನು ರಾಜ್ಯ ಕಡ್ಡಾಯಗೊಳಿಸಿದೆ.

ಕೊರೋನಾ ಇನ್ನೂ ಹೋಗಿಲ್ಲ: ಪ್ರವಾಸಿಗರಿಗೆ ಕೇಂದ್ರ ಎಚ್ಚರಿಕೆ

ಮಸ್ಸೂರಿ ಕಡೆಗೆ ಹೋಗುವ ಸುಮಾರು 2 ಸಾವಿರ ವಾಹನಗಳನ್ನು ಉತ್ತರಾಖಂಡ ಪೊಲೀಸರು ಶನಿವಾರ ತಡೆದು ವಾಪಸ್ ಕಳುಹಿಸಿದ್ದಾರೆ. ಪ್ರವಾಸಿಗರ ಒಳಹರಿವನ್ನು ನಿಯಂತ್ರಿಸಲು ಮತ್ತು ಜನದಟ್ಟಣೆ ತಡೆಯಲು ರಾಜ್ಯ ಸರ್ಕಾರ ಕಟ್ಟುನಿಟ್ಟಾದ ಕೋವಿಡ್ -19 ನಿರ್ಬಂಧಗಳನ್ನು ಘೋಷಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.

ಮುಸ್ಸೂರಿಗೆ ಹೋಗುವ ಮಾರ್ಗದಲ್ಲಿರುವ ಕುತಾಲ್ ಗೇಟ್ ಮತ್ತು ಕಿಮಾಡಿ ಪ್ರದೇಶಗಳಲ್ಲಿ ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸರು ಹಿಂದಿನ ದಿನ ತಿಳಿಸಿದ್ದರು. ದಾಖಲೆಗಳನ್ನು ಹೊಂದಿರುವವರಿಗೆ ಮಾತ್ರ ಮುಸ್ಸೂರಿಗೆ ಮುಂದುವರಿಯಲು ಅವಕಾಶ ನೀಡಲಾಗುತ್ತಿದೆ ಮತ್ತು ಉಳಿದವುಗಳನ್ನು ಹಿಂತಿರುಗಿಸಲಾಗುತ್ತಿದೆ ಎಂದು ಮುಸ್ಸೂರಿಯ ವೃತ್ತ ಅಧಿಕಾರಿ ನರೇಂದ್ರ ಪಂತ್ ಹೇಳಿದ್ದಾರೆ.

click me!