Bomb Hoax Call: ಎಂಥವ್ರೆಲ್ಲಾ ಇರ್ತಾರಪ್ಪ... ಅಡುಗೆ ಸಿಬ್ಬಂದಿ ಜೊತೆ ಕಿತ್ತಾಡಿ ರೈಲು ನಿಲ್ಲುವಂತೆ ಮಾಡಿದ ಕಿಡಿಗೇಡಿ

Suvarna News   | Asianet News
Published : Dec 16, 2021, 02:45 PM IST
Bomb Hoax Call: ಎಂಥವ್ರೆಲ್ಲಾ ಇರ್ತಾರಪ್ಪ...  ಅಡುಗೆ ಸಿಬ್ಬಂದಿ ಜೊತೆ ಕಿತ್ತಾಡಿ ರೈಲು ನಿಲ್ಲುವಂತೆ ಮಾಡಿದ ಕಿಡಿಗೇಡಿ

ಸಾರಾಂಶ

ನವದೆಹಲಿ-ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್‌ ಇರುವುದಾಗಿ ಕರೆ ಅಡುಗೆ ಸಿಬ್ಬಂದಿಯೊಂದಿಗೆ ಅಸಮಾಧಾನಗೊಂಡ ವ್ಯಕ್ತಿಯಿಂದ ಕೃತ್ಯ ಪೊಲೀಸರಿಂದ ಹುಸಿ ಬಾಂಬ್‌ ಕರೆ ಮಾಡಿ ರೈಲು ನಿಲ್ಲಿಸಿದ ವ್ಯಕ್ತಿಯ ಬಂಧನ

ನವದೆಹಲಿ(ಡಿ.16): ಅಡುಗೆ ಸಿಬ್ಬಂದಿಯೊಂದಿಗೆ ಅಸಮಾಧಾನಗೊಂಡಿದ್ದಕ್ಕೆ ವ್ಯಕ್ತಿಯೊಬ್ಬ ಬಾಂಬ್ ಇರುವುದಾಗಿ ಹುಸಿ ಕರೆ ಮಾಡಿ ದೆಹಲಿ-ಬೆಂಗಳೂರು ರೈಲನ್ನು ನಿಲ್ಲಿಸಿದ ಘಟನೆ ನಡೆದಿದೆ. ಮಂಗಳವಾರ ರಾತ್ರಿ ನವದೆಹಲಿ-ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇರುವ ಕುರಿತು ಪೊಲೀಸರಿಗೆ ಕರೆ ಬಂದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. 
ಆದರೆ ರೈಲಿನಲ್ಲಿ ಬಾಂಬ್‌ ಇರುವ ಸುದ್ದಿ ತಿಳಿದ ರೈಲಿನಲ್ಲಿದ್ದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ರೈಲು ಪೂರ್ತಿ ಗಾಬರಿ ಮತ್ತು ಗದ್ದಲದಿಂದ ತುಂಬಿ ಹೋಗಿತ್ತು. ಆದರೆ ಅಚ್ಚರಿ ಎಂದರೆ ಈ ಸುದ್ದಿ ಸುಳ್ಳು ಎಂಬುವುದು ಆಮೇಲೆ ಗೊತ್ತಾಗಿದೆ. 

ಮಂಗಳವಾರ ಸಂಜೆ ಆಗ್ರಾದ ರೈಲ್ವೆ ನಿಯಂತ್ರಣ ಕೊಠಡಿಯಿಂದ ಕರ್ನಾಟಕದ ಸರ್ಕಾರಿ ರೈಲ್ವೆ ಪೊಲೀಸ್ (GRP)ಗೆ ರೈಲಿನಲ್ಲಿ ಬಾಂಬ್‌ ಇರುವ ಕುರಿತು ಕರೆ ಬಂದಿದೆ. ಮಾಧ್ಯಮವೊಂದರ ಪ್ರಕಾರ, ಕರೆ ಮಾಡಿದ ವ್ಯಕ್ತಿಯೂ ತನ್ನ ಪುರುಷ ಸಂಬಂಧಿಯೊಬ್ಬರು ರೈಲಿನಲ್ಲಿ ಸ್ಫೋಟಕಗಳನ್ನು ಇರಿಸಿದ್ದಾರೆ ಎಂದು ಹೇಳಿದ್ದಾನೆ. ಕರ್ನಾಟಕ ಎಕ್ಸ್‌ಪ್ರೆಸ್ ರಾಜ್ಯದ ಗಡಿ ಪ್ರವೇಶಿಸಿದ ತಕ್ಷಣ ಸ್ಫೋಟ ಸಂಭವಿಸಲಿದ್ದು, ಗರಿಷ್ಠ ಸಂಖ್ಯೆಯ ಪ್ರಯಾಣಿಕರು ಸಾವನ್ನಪ್ಪಲಿದ್ದಾರೆ ಎಂದು ಆ ವ್ಯಕ್ತಿ ಹೇಳಿದ್ದಾನೆ.

ಬೆಂಗಳೂರು-ದಿಲ್ಲಿ ವಿಮಾನದಲ್ಲಿ ಬೆತ್ತಲಾದ ಪಾನಮತ್ತ ಪ್ರಯಾಣಿಕ!

ಈ ಕರೆ ಬಂದ ಕೂಡಲೇ ರಾಜ್ಯದ ಬಾಂಬ್ ನಿಷ್ಕ್ರಿಯ ದಳ, ರೈಲ್ವೆ ರಕ್ಷಣಾ ಪಡೆ ಮತ್ತು ಜಿಆರ್‌ಪಿ ಸ್ನಿಫರ್ ಡಾಗ್‌ಗಳೊಂದಿಗೆ  (SWR)ನೈಋತ್ಯ ರೈಲ್ವೆ  ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಿಲ್ದಾಣವನ್ನು ತಲುಪಿದೆ. ಉನ್ನತ ರೈಲ್ವೇ ಮೂಲಗಳ ಪ್ರಕಾರ  ರೈಲನ್ನು ಅಲ್ಲಿ ಸಂಪೂರ್ಣವಾಗಿ ಪರಿಶೀಲಿಸಿದ್ದಲ್ಲದೇ ಆ ರೈಲು ಬರುವ ಮಾರ್ಗದ ಎಲ್ಲಾ ನಿಲ್ದಾಣಗಳಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ರೈಲು ನಂತರ ಆಂಧ್ರಪ್ರದೇಶ (Andhra pradesh)ವನ್ನು ಪ್ರವೇಶಿಸಿತ್ತು. ಮತ್ತು ಹಿಂದೂಪುರ (Hindupur)ದಲ್ಲಿ ಮತ್ತೆ ಕರ್ನಾಟಕವನ್ನು ಮರುಪ್ರವೇಶಿಸಿತ್ತು. ಹೀಗಾಗಿ ಹಿಂದೂಪುರ ನಿಲ್ದಾಣದಲ್ಲಿಯೂ ಭಾರೀ ತಪಾಸಣೆ ನಡೆಸಲಾಯಿತು. ಬುಧವಾರ ಮಧ್ಯಾಹ್ನ 1.40ಕ್ಕೆ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (Krantivira Sangolli Rayanna) ರೈಲ್ವೆ ನಿಲ್ದಾಣ ತಲುಪುವವರೆಗೂ ತಪಾಸಣೆ ಮುಂದುವರಿದಿತ್ತು.

ಇದಕ್ಕೂ ಮೊದಲು 12628 ಸಂಖ್ಯೆಯ ಈ ದೆಹಲಿ-ಕರ್ನಾಟಕ ಎಕ್ಸ್‌ಪ್ರೆಸ್ ರೈಲನ್ನು ರಾತ್ರಿ ಮಥುರಾ ಜಂಕ್ಷನ್‌ನಲ್ಲಿ 25 ನಿಮಿಷಗಳ ಕಾಲ ನಿಲ್ಲಿಸಿ ಕೂಲಂಕಷವಾಗಿ ಪರಿಶೀಲಿಸಲಾಯಿತು. ಅಲ್ಲಿ ಅನುಮಾನಾಸ್ಪದವಾಗಿರುವಂತದ್ದು ಏನೂ ಇಲ್ಲ ಎಂದು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಮನವರಿಕೆ ಮಾಡಿದ ನಂತರವೇ ಇದನ್ನು ಮುಂದೆ ಹೋಗಲು ಬಿಡಲಾಯಿತು. ಎಂದು ಮಥುರಾ (Mathura) ನಗರ ವ್ಯಾಪ್ತಿಯ ಪೊಲೀಸ್ ವರಿಷ್ಠಾಧಿಕಾರಿ  ಮಾರ್ತಾಂಡ್ ಪ್ರಕಾಶ್ ಸಿಂಗ್ (Martand Prakash Singh) ಬುಧವಾರ ಹೇಳಿದ್ದಾರೆ.

Indian Railway Service: ಗುಡ್ ನ್ಯೂಸ್ : ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು

ನಂತರ ಫೋನ್‌ ಬಂದ ಕರೆಯ ಜಾಡು ಹಿಡಿದು ಹೋದಾಗ ಆರೋಪಿ ಸತ್ಯಾನಂದ್ ಎಂಬಾತ ತನ್ನ ಸಹೋದರನೊಂದಿಗೆ ಅಡುಗೆ ಸಿಬ್ಬಂದಿಯ ವರ್ತನೆಯಿಂದ ಅಸಮಾಧಾನಗೊಂಡು ರೈಲ್ವೆ ಸಹಾಯವಾಣಿ 139(Railways Helpline 139) ಕ್ಕೆ ಫೋನ್ ಮಾಡಿದ್ದಾನೆ ಎಂದು ಪೊಲೀಸರಿಗೆ ನಂತರ ತಿಳಿದು ಬಂದಿದೆ. ಈ ಕರೆಯನ್ನು ರೈಲ್ವೇ ಸಂರಕ್ಷಣಾ ಪಡೆ ನಿಯಂತ್ರಣ ಕೊಠಡಿಗೆ ವರ್ಗಾಯಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಸಿಕ್ಕಿಬಿದ್ದ ವೇಳೆ ಸಂಪೂರ್ಣ ಪಾನಮತ್ತನಾಗಿದ್ದ ಕಾರಣ ಆತನನ್ನು ನಂತರ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಜಿಆರ್‌ಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿ (Delhi)ಯ ಅರುಣಾ ಅಸಫ್ ಅಲಿ ರಸ್ತೆ (Aruna Asaf Ali) ಯಲ್ಲಿರುವ ರಾತ್ರಿ ಉಳಿಯುವ ನಿವಾಸ ( night shelter home) ಆರೋಪಿ ಸತ್ಯಾನಂದ( Satyanand)ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬ ಗಾದೆಯಂತೆ ತನ್ನ ವೈಯಕ್ತಿಕ ವಿಚಾರಕ್ಕೆ ಸಾವಿರಾರು ಜನ ಪ್ರಯಾಣಿಸುವ ಒಂದು ರೈಲನ್ನು ನಿಲ್ಲಿಸಿ ಅಷ್ಟೂ ಜನರ ಸಮಯ ವ್ಯರ್ಥ ಮಾಡಿದ ಇಂತಹ ಕಿಡಿಗೇಡಿಗೆ ಕಠಿಣ ಶಿಕ್ಷೆಯಾಗಬೇಕಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ಸಮಸ್ಯೆ : ಏರ್‌ಲೈನ್‌ಗಳಿಗೆ ವಿಧಿಸಿದ್ದ ಕಠಿಣ ಆದೇಶ ರದ್ದು
ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌