Tharoor Meets Sandhu: ಇದಪ್ಪಾ ಟ್ಯಾಲೆಂಟ್, ಸ್ವಲ್ಪ ನಮ್ಗೂ ಹೇಳ್ಕೊಡಿ ಸಾರ್ ಎಂದ ನೆಟ್ಟಿಗರು!

By Suvarna News  |  First Published Dec 16, 2021, 1:38 PM IST

ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ಇಂಗ್ಲಿಷ್ ಪದಬಳಕೆ ಹಾಗೂ ಹುಡುಗಿಯರ ವಿಚಾರಕ್ಕಾಗಿ ಸದಾ ಸುದ್ದಿಯಾಗುತ್ತಿರುತ್ತಾರೆ. ಈ ಬಾರಿ ಕೂಡಾ ಮಿಸ್ ಯೂನಿವರ್ಸ್ ಹರ್ನಾಜ್ ಭೇಟಿಯಾಗಿ ನೆಟ್ಟಿಗರಿಂದ ಮಾತಿನ ಧರ್ಮದೇಟು ತಿನ್ನುತ್ತಿದ್ದಾರೆ!


ಭಾರತದ ಹರ್ನಾಜ್ ಕೌರ್ ಸಂಧು(Harnaaz Kour Sandhu) ಮಿಸ್ ಯೂನಿವರ್ಸ್(Miss Universe) ಪಟ್ಟ ಗೆದ್ದು ಭಾರತಕ್ಕೆ ಹಿಂದಿರುಗಿದ ಕೂಡಲೇ ಕಾಂಗ್ರೆಸ್ ಸಂಸದ(Congress MP) ಶಶಿ ತರೂರ್(Shashi Taroor) ಆಕೆಯನ್ನು ಭೇಟಿ ಅಭಿನಂದನೆ ಹೇಳಿದ್ದಾರೆ. ತಮ್ಮ ಈ ಭೇಟಿಯ ಬಗ್ಗೆ ಅತ್ಯುತ್ಸಾಹದಿಂದ ಟ್ವಿಟ್ಟರ್‌(Twitter)ನಲ್ಲಿ ಬರೆದುಕೊಂಡಿರುವ ತರೂರ್, ಸಂಧುವಿನ ಜೊತೆ ತೆಗೆದುಕೊಂಡ ಸೆಲ್ಫೀಗಳೆರಡನ್ನು ಕೂಡಾ ಪೋಸ್ಟ್ ಮಾಡಿದ್ದಾರೆ. 

'ಮಿಸ್ ಯೂಮಿವರ್ಸ್ ಹರ್ನಾಜ್ ಕೌರ್ ಸಂಧುಗೆ ಅಭಿನಂದಿಸಿ ಖುಷಿಯಾಗಿದೆ. ಹೊಸ ವರ್ಷ(new year)ವನ್ನು ಭಾರತದಲ್ಲಿ ಆಚರಿಸಲು ಹಿಂದಿರುಗಿದ ಆಕೆ ಗೆದ್ದ ಉತ್ಸಾಹದಲ್ಲಿದ್ದಳು. ಭಾರತ(India) ಕೂಡಾ ಆಕೆಯನ್ನು ಸ್ವಾಗತಿಸಲು ಹೆಮ್ಮೆ ಪಡುತ್ತಿದೆ. ವೇದಿಕೆಯಲ್ಲಿ ಕಂಡಷ್ಟೇ ಮನೋಹಾರಿ ವ್ಯಕ್ತಿತ್ವ ಆಕೆಯದು' ಎಂದು ತರೂರ್ ಬರೆದಿದ್ದರು. 

Latest Videos

undefined

ಸಂಧುವಿನ ಗೆಲುವಿಗೆ ಭಾರತವೇ ಸಂಭ್ರಮಿಸಿದೆ. ಆದರೆ, ಏಕೋ ತರೂರ್ ಸಂಭ್ರಮಿಸಿದ್ದು ಮಾತ್ರ ನೆಟ್ಟಿಗರಿಗೆ ಇಷ್ಟವಾದಂತಿಲ್ಲ. ತರೂರ್ ಹಾಕಿದ ಈ ಪೋಸ್ಟ್‌ಗೆ ನೆಟ್ಟಿಗರು(Netizens) ಹಾಕಿದ ಕಾಮೆಂಟ್‌ಗಳಲ್ಲಿ ಸಲಹೆ ಸೂಚನೆ, ವ್ಯಂಗ್ಯ, ಹಾಸ್ಯವೇ ತುಂಬಿದೆ. ಸಂಧು ಜೊತೆಗಿನ ತರೂರ್ ಫೋಟೋ(Photo)ಕ್ಕಿಂತ ಅದಕ್ಕೆ ಬಂದ ನೆಟ್ಟಿಗರ ಪ್ರತಿಕ್ರಿಯೆಗಳೇ ಹೆಚ್ಚು ಸದ್ದು ಮಾಡುತ್ತಿವೆ ಎಂಬುದು ವಿಪರ್ಯಾಸ. 

Winter Session: ವಿವಾದದ ಬಳಿಕ ಪುರುಷ ಸಂಸದರೊಂದಿಗೆ ತರೂರ್ ಸೆಲ್ಫೀ, ಜೊತೆಗೊಂದು ನೋಟ್!

ನೆಟ್ಟಿಗರೊಬ್ಬರು ಸಂಧು ಭಾರತಕ್ಕೆ ಹಿಂದಿರುಗಿದ 24 ಗಂಟೆಗಳೊಳಗೆ ಭೇಟಿಯಾದ ತರೂರ್ ಅತ್ಯುತ್ಸಾಹವನ್ನು ಪ್ರಶ್ನಿಸಿದ್ದಾರೆ. ಪ್ರಯಾಗ್ ತಿವಾರಿ ಎಂಬವರು, 'ನಿಮ್ಮ ಕೆಲಸದ ಮೇಲೆ ನಿಮಗಿರುವ ಬದ್ಧತೆ ಬಹಳ ಪ್ರೇರಣಾದಾಯಕವಾಗಿದೆ ಸರ್. ನೆಹರೂವಿನ ಕನಸಿನ ಭಾರತವನ್ನು ನೀವು ನಿಜವಾಗಿಸುತ್ತಿದ್ದೀರಿ' ಎಂದು ವ್ಯಂಗ್ಯವಾಡಿದ್ದಾರೆ. 

'ಮಾನುಷಿ ಚಿಲ್ಲರ್(Manushi Chillar) ಜೊತೆ ಕೂಡಾ ನೀವು ನಡೆದುಕೊಂಡ ರೀತಿ ನೆನಪಿದೆ. ನಿಮ್ಮಿಂದ ಕಲಿಯಲು ಸಾಕಷ್ಟಿದೆ ಸರ್. ಆದರೇನು ಮಾಡಲಿ, ನನಗೀಗಾಲೇ ವಿವಾಹವಾಗಿದೆ. ಮುಂದಿನ ಜನ್ಮದಲ್ಲಾದರೂ ಕಲಿಯುತ್ತೇನೆ' ಎಂದು ಪಾಪನ್ ದತ್ತಾ ಎಂಬವರು ಪ್ರತಿಕ್ರಿಯಿಸಿದ್ದಾರೆ. 

'ನಿಜವಾದ ಸ್ಪೂರ್ತಿಯೆಂದರೆ ಸಂಧುವಲ್ಲ, ನೀವೇ. ನಿಮ್ಮ ಜಾದೂ ಸಾಮರ್ಥ್ಯದಿಂದ ಸದಾ ಸುಂದರವಾಗಿರುವವರ ನಡುವೆಯೇ ಇರುತ್ತೀರಿ' ಎಂದು ಕೆಣಕಿದ್ದಾರೆ ಮತ್ತೊಬ್ಬರು. 

Winter Session: ಲೋಕಸಭೆ ಮನಮೋಹಕ ಜಾಗ; ಯಾಕಂತೆ? ಶಶಿ ತರೂರ್ ಕೇಳಿ, ತಿಳಿಯಿರಿ!

'ಮಿಸ್ ಯೂನಿವರ್ಸ್ ವಿತ್ ಮಿಸ್ಟರ್ ಆಕ್ಸ್‌ಫರ್ಡ್ ಡಿಕ್ಷ್‌ನರಿ' ಎಂದು ಶಶಿಯ ಇಂಗ್ಲಿಷ್(English) ಪದಬಳಕೆಯ ಸಾಮರ್ಥ್ಯವನ್ನೂ ಟ್ರೋಲ್ ಮಾಡಿದ್ದಾರೆ ಮತ್ತೆ ಕೆಲವರು.  

'ಯಬ್ಬಾ, ಈ ರಣ ರಣ ಬೇಟೆಗಾರ ಮಾರಾಯ, ವಶೀಕರಣ ವಿದ್ಯೆಯಲ್ಲಿ ಕೇರಳಿಗರು ನಂ.1 ಎಂದು ಮತ್ತೆ ನಿರೂಪಿಸಿದ್ದಾರೆ' ಎಂದು ಕೆಲ ಫೇಸ್ಬುಕ್ ಬಳಕೆದಾರರು ಚಾಟಿ ಬೀಸಿದ್ದಾರೆ. 

ರಾಮಾನುಜನ್ ಅವಾರ್ಡ್ ಪಡೆದ ಗಣಿತಜ್ಞೆ ನೀನಾ ಗುಪ್ತಾಗೆ ಶಶಿ ತರೂರ್ ಅಭಿನಂದಿಸಿದ್ದರೇ ಎಂದು ಒಬ್ಬರು ಪ್ರಶ್ನಿಸಿದ್ದರೆ, ಇನ್ನೊಬ್ಬ ನೆಟ್ಟಿಗರು ಸಂಧುವಿಗೆ ಎಚ್ಚರಿಕೆ ಹೇಳುತ್ತಾ, 'ತಂಗೀ, ಈ ಮನುಷ್ಯನ ವಿಷಯದಲ್ಲಿ ಸ್ವಲ್ಪ ಜಾಗರೂಕರಾಗಿರಿ' ಎಂದಿದ್ದಾರೆ. 

ಈ ಹಿಂದೆ 6 ಜನ ಮಹಿಳಾ ಸಂಸದೆಯರೊಂದಿಗೆ ಫೋಟೋ(photo) ತೆಗೆಸಿಕೊಂಡಾಗ ಕೂಡಾ ಶಶಿ ತರೂರ್‌ಗೆ ಇಂಥದೇ ಮಾತುಗಳು ಕೇಳಿಬಂದಿದ್ದವು. ಹೆಂಡತಿಯ ಸಾವು, ಚೆಂದದ ಹುಡುಗಿಯರ ನಡುವೆ ಕಾಣಿಸಿಕೊಳ್ಳುವುದು, ಕ್ಲಿಷ್ಟ ಇಂಗ್ಲಿಷ್ ಪದ ಬಳಕೆಗಳಿಗಾಗಿಯೇ ತರೂರ್ ಸದಾ ಸುದ್ದಿಯಲ್ಲಿರುತ್ತಾರೆ.

21 ವರ್ಷದ ಹರ್ನಾಜ್ ಅವರು ಫೈನಲ್ ತಲುಪ್ದಿದ್ ಪರಾಗ್ವೆಯ ನಾಡಿಯಾ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಾಲೆಲಾ ಮಸ್ವಾನೆ ಅವರನ್ನು ಸೋಲಿಸಿ ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯೂಮಿವರ್ಸ್ ಕಿರೀಟ ಗಳಿಸಿ ಕೊಟ್ಟಿದ್ದಾರೆ. ಹರ್ನಾಜ್ ಸಂಧು ಪ್ರಸ್ತುತ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಮಾಡೆಲಿಂಗ್‌ನ ಹೊರತಾಗಿ, ಅವರು ಚಲನಚಿತ್ರಗಳತ್ತ ಒಲವು ಹೊಂದಿದ್ದಾರೆ. ಹರ್ನಾಜ್‌ಗೆ ಕುದುರೆ ಸವಾರಿ, ಈಜು, ನಟನೆ, ನೃತ್ಯ ಮತ್ತು ಪ್ರವಾಸ ತುಂಬಾ ಇಷ್ಟ.  2017 ರಲ್ಲಿ, ಅವರು ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ ಪ್ರಶಸ್ತಿ ಗೆದಿದ್ದರು.

click me!