
ನವದೆಹಲಿ (ಅ.9): ಅ.15ರಿಂದ 2000 ರು. ಮೇಲ್ಪಟ್ಟ ಯುಪಿಐ ಪಾವತಿಗಳ ಮೇಲೆ ಶೇ.0.4 ರಷ್ಟು ಎಂಡಿಆರ್ ಶುಲ್ಕ ವಿಧಿಸಲು ಮುಂದಾಗಿದ್ದ ಸರ್ಕಾರ, ಜಾರಿ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿದೆ. ಮುಂದಿನ ವರ್ಷ ಜ.1ರಿಂದ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಬಹುದು ಎಂದು ವರದಿಗಳು ಹೇಳಿವೆ.
ವರದಿಗಳ ಪ್ರಕಾರ, ಹಬ್ಬದ ಋತುವಿನಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಿರುವುದರಿಂದ ವ್ಯಾಪಾರಿಗಳು ಮತ್ತು ಪಾವತಿದಾರರಿಗೆ ಹೆಚ್ಚಿನ ಸಮಯವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರಗೊಂಡಿದೆ ಎನ್ನಲಾಗಿದೆ. ಆದರೆ ದಿನಾಂಕವನ್ನು ಹೊರತುಪಡಿಸಿ ಈಗಾಗಲೇ ಘೋಷಣೆಯಾಗಿರುವ ಎಂಡಿಆರ್ ಶುಲ್ಕದ ನಿಯಮದಲ್ಲಿ ಯಾವುದೇ ಬದಲಿಲ್ಲ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: UPI ಬಳಕೆದಾರರಿಗೆ ಬಿಗ್ ಅಪ್‌ಡೇಟ್: MDR ಸದ್ಯದಲ್ಲೇ ಜಾರಿ, ನೀವು ಈ ವಿಷಯ ತಿಳ್ಕೊಳ್ಳಿ!
ಶೇ.0.4 ಎಂಡಿಆರ್ ಶುಲ್ಕ
ಎಂಡಿಆರ್ ಶುಲ್ಕ ನಿಯಮದಲ್ಲಿ 2000 ರು, ಮೇಲ್ಪಟ್ಟ ಮರ್ಚೆಂಟ್ ಪಾವತಿಗೆ ಶೇ.0.4 ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ. 75,000 ರು. ಅಥವಾ ಮೇಲ್ಪಟ್ಟ ಪಾವತಿಯಲ್ಲಿ 300 ರು.ಗೆ ಅದನ್ನು ಮಿತಿಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ