
Rahul Gandhi Net Worth: Assets, Investments and Property ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ರಾಹುಲ್ ಗಾಂಧಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಗಾಂಧಿ ಕುಟುಂಬದ ಕುಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿ ಒಟ್ಟು ಎಷ್ಟು ಆಸ್ತಿ ಇದೆ? ಅವರು ಎಲ್ಲೆಲ್ಲಿ ಹಣ ಹೂಡಿಕೆ ಮಾಡಿದ್ದಾರೆ? ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.
2024ರ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ರಾಹುಲ್ ಗಾಂಧಿ ಒಟ್ಟು 20.39 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. 2019ರ ಚುನಾವಣೆಯಲ್ಲಿ ಅವರು 15.88 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಅಂದರೆ ಕೇವಲ ಐದು ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯ ಸುಮಾರು 4.5 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.
ರಾಹುಲ್ ಗಾಂಧಿ ತಮ್ಮ ಹೆಚ್ಚಿನ ಹಣವನ್ನು ಷೇರು ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ಬಳಿ 55 ಸಾವಿರ ರೂ. ನಗದು ಹಾಗೂ ಬ್ಯಾಂಕ್ ಖಾತೆಗಳಲ್ಲಿ 26.25 ಲಕ್ಷ ರೂ. ಠೇವಣಿ ಇದೆ. ವಿವಿಧ ಕಂಪನಿಗಳ ಷೇರುಗಳಲ್ಲಿ 4.33 ಕೋಟಿ ರೂ., 7 ಮ್ಯೂಚುವಲ್ ಫಂಡ್‌ಗಳಲ್ಲಿ 3.81 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಜೊತೆಗೆ 15 ಲಕ್ಷ ರೂ. ಮೌಲ್ಯದ ಗೋಲ್ಡ್ ಬಾಂಡ್, ಪಿಪಿಎಫ್ ಹಾಗೂ ವಿಮೆಯಲ್ಲಿ 61.52 ಲಕ್ಷ ರೂ. ಮತ್ತು 4.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಇವರ ಒಟ್ಟು ಚರಾಸ್ತಿ ಮೌಲ್ಯ 9.24 ಕೋಟಿ ರೂ.
ಹರಿಯಾಣದ ಗುರುಗ್ರಾಮದಲ್ಲಿ ರಾಹುಲ್ ಗಾಂಧಿ 5,538 ಚದರ ಅಡಿಯ ಬೃಹತ್ ಆಫೀಸ್ ಹೊಂದಿದ್ದಾರೆ. 2024ರ ಅಫಿಡವಿಟ್ ಪ್ರಕಾರ ಇದರ ಮೌಲ್ಯ 9.05 ಕೋಟಿ ರೂ. ದೆಹಲಿಯ ಮೆಹ್ರೌಲಿಯಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಜಂಟಿ ಒಡೆತನದ ಕೃಷಿ ಭೂಮಿ ಕೂಡ ಇದೆ. ಇವರ ಒಟ್ಟು ಸ್ಥಿರಾಸ್ತಿ ಮೌಲ್ಯ 11.15 ಕೋಟಿ ರೂ. ವಿಶೇಷವೆಂದರೆ, ರಾಹುಲ್ ಗಾಂಧಿ ಹೆಸರಿನಲ್ಲಿ ಸ್ವಂತ ಮನೆ ಅಥವಾ ಕಾರು ಇಲ್ಲ.
ರಾಹುಲ್ ಗಾಂಧಿ ಅವರ ಬಳಿ ಸುಮಾರು 333.3 ಗ್ರಾಮ್ ಚಿನ್ನಾಭರಣಗಳಿವೆ. ಅದರ ಈಗಿನ ಒಟ್ಟು ಮೌಲ್ಯ ಜಿಎಸ್‌ಟಿ ಹೊರತುಪಡಿಸಿ 46,04,540 ರುಪಾಯಿಗಳು. ಇದಷ್ಟೇ ಅಲ್ಲದೇ ಮಾಧ್ಯಮಗಳ ವರದಿಗಳ ಪ್ರಕಾರ, ರಾಹುಲ್ ಗಾಂಧಿ ವಾರ್ಷಿಕವಾಗಿ ಒಂದು ಕೋಟಿ ರುಪಾಯಿ ಸಂಪಾದಿಸುತ್ತಿದ್ದಾರೆ.
ಮೈನೇತಾಇನ್ಫೋ ವರದಿಯ ಪ್ರಕಾರ, ಚುನಾವಣಾ ಅಫಿಡೆವಿಟ್‌ನಲ್ಲಿ ದಾಖಲಾದಂತೆ ಈ ಕೆಳಗಿನಿಂತೆ ರಾಹುಲ್ ಗಾಂಧಿ ಅವರ ಆದಾಯ ಹೆಚ್ಚಾಗಿದೆ.
2004ರ ಲೋಕಸಭಾ ಚುನಾವಣೆ: ₹55.38 ಲಕ್ಷ
2009ರ ಲೋಕಸಭಾ ಚುನಾವಣೆ: ₹2.32 ಕೋಟಿ
2014ರ ಲೋಕಸಭಾ ಚುನಾವಣೆ: ₹9.40 ಕೋಟಿ
2019ರ ಲೋಕಸಭಾ ಚುನಾವಣೆ: ₹15.88 ಕೋಟಿ
2024ರ ಲೋಕಸಭಾ ಚುನಾವಣೆ: 20.40 ಕೋಟಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ