ಅವಳಲ್ಲ ಅವನು: ಮದುವೆಗೆ ಮನೆಯವರಿಂದ ವಿರೋಧ, ಲಿಂಗ ಬದಲಾಯಿಸಿಕೊಂಡ ಯುವತಿ

By Anusha Kb  |  First Published Jun 27, 2022, 1:16 PM IST

ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರು ಸಂಬಂಧಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಯುವತಿಯೊಬ್ಬಳು ಲಿಂಗ ಬದಲಾವಣೆ ಮಾಡಿಸಿಕೊಂಡ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.


ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರು ಸಂಬಂಧಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಯುವತಿಯೊಬ್ಬಳು ಲಿಂಗ ಬದಲಾವಣೆ ಮಾಡಿಸಿಕೊಂಡ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಸಲಿಂಗಿಗಳಾದ ಈ ಜೋಡಿ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದು, ಜೀವನದುದ್ದಕ್ಕೂ ಜೊತೆಯಾಗಿ ಇರಲು ನಿರ್ಧರಿಸಿದ್ದಾರೆ. ಆದರೆ ಇವರಿಬ್ಬರ ಕುಟುಂಬದವರು ಅವರ ಸಂಬಂಧವನ್ನು ಒಪ್ಪಿಕೊಳ್ಳದಿದ್ದಾಗ, ಅವರಲ್ಲಿ ಒಬ್ಬರು ತನ್ನ ಲಿಂಗವನ್ನು ಬದಲಾಯಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ.  

ಮಹಿಳೆ, ತನ್ನ ಸಂಗಾತಿಯೊಂದಿಗೆ  ಪ್ರೀತಿಯಲ್ಲಿ ಹುಚ್ಚಳಾಗಿದ್ದು, ತಮ್ಮ ಸಂಬಂಧಕ್ಕೆ ಎದುರಾಗುವ ಯಾವುದೇ ಅಡಚಣೆಗಳನ್ನು ತಪ್ಪಿಸಲು ಮತ್ತು ತಮ್ಮ ಮಧ್ಯೆ ಇತರರ ಹಸ್ತಕ್ಷೇಪವನ್ನು ನಿಲ್ಲಿಸಲು ತನ್ನ ಲಿಂಗವನ್ನು ಬದಲಾಯಿಸಲು ನಿರ್ಧರಿಸಿದ್ದಾಳೆ. ಇದಕ್ಕೂ ಮೊದಲು ಈ ಮಹಿಳೆ ತನ್ನ ಕುಟುಂಬದ ಮನವೊಲಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾಳೆ. ಆದರೆ ಅದೆಲ್ಲವೂ ನೀರ ಮೇಲಿನ ಹೋಮದಂತಾಯಿತು. ಕೊನೆಗೆ ತಮ್ಮ ಸಂಬಂಧ ಮುಂದುವರಿಸಲು ಬೇರೆ ಯಾವುದೇ ದಾರಿ ಕಾಣದೇ ಹೋದಾಗ ಆಕೆ ತನ್ನ ಲಿಂಗವನ್ನೇ ಬದಲಾಯಿಸುವ ನಿರ್ಧಾರಕ್ಕೆ ಬಂದಳು. 

Tap to resize

Latest Videos

ನಾ ಮದ್ವೆಯಾದವ ಅವನಲ್ಲ ಅವಳು: 10 ತಿಂಗಳ ಬಳಿಕ ಬಯಲಾದ ಸತ್ಯ!

ಪ್ರಯಾಗ್‌ರಾಜ್‌ನಲ್ಲಿರುವ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಯ (Swaroop Rani Nehru Hospital) ವೈದ್ಯರ ತಂಡವು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಕೆ ಸಂಪೂರ್ಣ ಗಂಡಾಗಲು  1.5 ವರ್ಷಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಡಾ ಮೋಹಿತ್ ಜೈನ್ ಇಂಡಿಯಾ ಟುಡೇಗೆ ತಿಳಿಸಿದರು.

ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಮಾನ್ಯತೆ ಇಲ್ಲದಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಸಲಿಂಗಿಗಳು ಕುಟುಂಬದಿಂದ ಹೊರಗೆ ಬಂದು ಜೊತೆಯಾಗಿ ಬದುಕುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೇರಳದಲ್ಲಿ ಸಲಿಂಗಿಗಳ ಪ್ರಕರಣವೊಂದರಲ್ಲಿ ಕೇರಳ ಹೈಕೋರ್ಟ್‌ ಮಧ್ಯ ಪ್ರವೇಶಿಸಿ ಇಬ್ಬರು ಯುವತಿಯರಿಗೆ ಜೊತೆಯಾಗಿ ಜೀವಿಸಲು ಅವಕಾಶ ನೀಡಿತ್ತು. ಯುವತಿಯೊಬ್ಬಳು ತನ್ನ ಸಹಪಾಠಿಯೊಂದಿಗೆ ಸಲಿಂಗಿ ಸಂಬಂಧ ಹೊಂದಿರುವ ಬಗ್ಗೆ ಪೋಷಕರಿಗೆ ತಿಳಿದು ಅವರು ಆಕೆಯನ್ನು ಸಹಪಾಠಿಯಿಂದ ಬೇರ್ಪಡಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಕೇರಳ ಹೈಕೋರ್ಟ್ ಅವರಿಗೆ ಮತ್ತೆ ತನ್ನ ಗೆಳತಿಯೊಂದಿಗೆ ಬದುಕಲು ಅವಕಾಶ ನೀಡಿತ್ತು.

ಶಾರುಖ್‌ ಜೊತೆಯ ಲೈಂಗಿಕ ಸಂಬಂಧದ ವಂದತಿಗಳ ಬಗ್ಗೆ ಬಾಯಿಬಿಟ್ಟ ಕರಣ್‌ ಜೋಹರ್‌
 

ಕೇರಳದ ಎರ್ನಾಕುಲಂ (Ernakulam) ಜಿಲ್ಲೆಯ ಯುವ ಸಲಿಂಗಿ ಮಹಿಳೆ ತನ್ನ ಶಾಲಾ ಸಹಪಾಠಿಯೊಂದಿಗಿನ ತನ್ನ ಸಂಬಂಧ, ಅದಕ್ಕೆ ಪೋಷಕರ ವಿರೋಧ ಹಾಗೂ ನಂತರದಲ್ಲಿ ಆಕೆಯ ಸ್ನೇಹಿತೆಯನ್ನು ಆಕೆಯ ಪೋಷಕರು ಬಲವಂತವಾಗಿ ಕರೆದೊಯ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಸ್ತಾರವಾಗಿ ಬರೆದುಕೊಂಡಿದ್ದರು. ಅಲ್ಲದೇ ಪೊಲೀಸರು ಆಕೆಯನ್ನು ಕರೆ ತರಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದ್ದರು. 

ಈ ಇಬ್ಬರು ಯುವತಿಯರು  ಸೌದಿ ಅರೇಬಿಯಾದಲ್ಲಿ ಶಾಲೆಯೊಂದರಲ್ಲಿ 11 ನೇ ತರಗತಿಯಲ್ಲಿ ಓದುತ್ತಿದ್ದಾಗ ಪರಸ್ಪರ ಭೇಟಿಯಾಗಿದ್ದರು. ಆದರೆ ದ್ವಿತೀಯ ಪಿಯುಸಿ ತಲುಪಿದಾಗ ಅವರಿಬ್ಬರು ಸಲಿಂಗಿಗಳು ಹಾಗೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂಬುದನ್ನು ಅರಿತುಕೊಂಡರು. ಇವರ ಸಂಬಂಧದ ಬಗ್ಗೆ ಇವರ ಪೋಷಕರಿಗೆ ತಿಳಿದಾಗ, ಅವರು ಅದನ್ನು ನಿಲ್ಲಿಸುವುದಾಗಿ  ಹೇಳಿದರು. ಆದರೆ ಭಾರತಕ್ಕೆ ಹಿಂತಿರುಗಿ ಕಾಲೇಜಿಗೆ ಸೇರಿದ ನಂತರ ಈ ಇಬ್ಬರೂ  ತಮ್ಮ ಸಂಬಂಧವನ್ನು ಮುಂದುವರೆಸಿದರು ಎಂದು ತಿಳಿದು ಬಂದಿದೆ. 

ಈ ಪ್ರಕರಣದ ಇತ್ತೀಚಿನ ಬೆಳವಣಿಗೆಯಲ್ಲಿ ಈ ಸಲಿಂಗಿ ಜೋಡಿ ಒಟ್ಟಿಗೆ ವಾಸಿಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ. ಈ ಜೋಡಿಯಲ್ಲಿ ಒಬ್ಬರು ಕೇರಳ ಹೈಕೋರ್ಟ್‌ನಲ್ಲಿ ಪೊಲೀಸ್ ದೂರು ಮತ್ತು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ತಮ್ಮ ಸಂಗಾತಿಯ ನಾಪತ್ತೆ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ 5-6 ನಿಮಿಷ ವಿಚಾರಣೆ ನಡೆಸಿದ ನ್ಯಾಯಾಲಯ ಇವರಿಬ್ಬರಿಗೆ ಒಟ್ಟಿಗೆ ವಾಸಿಸಲು ಅನುಮತಿ ನೀಡಿದರು. ನ್ಯಾಯಾಧೀಶರು ಈ ಜೋಡಿಯನ್ನು ಒಟ್ಟಿಗೆ ವಾಸಿಸಲು ಬಯಸುತ್ತೀರಾ ಎಂದು ಕೇಳಿದಾಗ ಅವರು ಹೌದು ಎಂದಿದ್ದು, ನ್ಯಾಯಾಧೀಶರು ಅವರ ಪರವಾಗಿ ತೀರ್ಪು ನೀಡಿದರು ಮತ್ತು ಅವರು ಮತ್ತೆ ಒಂದಾಗಿದ್ದಾರೆ.

click me!