ಕೋತಿಗೆಂದು ಅಪ್ಪ ಎಸೆದ ಕೊಡಲಿ ಮಗನ ಕತ್ತು ಸೀಳಿತು: ಕೊಲೆ ಆರೋಪ

Published : Jun 05, 2025, 03:05 PM IST
baby death

ಸಾರಾಂಶ

ಮೊರಾದಾಬಾದ್‌ನಲ್ಲಿ ಕೋತಿಗಳನ್ನು ಓಡಿಸಲು ತಂದೆ ಬೀಸಿದ ಕೊಡಲಿಯಿಂದ ಮಗುವೊಂದು ಸಾವನ್ನಪ್ಪಿದೆ. 

ಮೊರದಾಬಾದ್‌: ಕೋತಿಗಳನ್ನು ಓಡಿಸಲು ಎಂದು ಅಪ್ಪ ಬೀಸಿದ ಕೊಡಲಿಯೊಂದು ಸೀದಾ ಹೋಗಿ ಪುಟ್ಟ ಮಗನ ಕತ್ತು ಸೀಳಿದ ಪರಿಣಾಮ ಮಗ ಸಾವನ್ನಪ್ಪಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ. ತಂದೆ ಕೋತಿಗಳನ್ನು ಓಡಿಸಲು ಅವುಗಳ ಗುಂಪಿನತ್ತ ಕೊಡಲಿ ಬೀಸಿದ್ದಾರೆ. ಈ ವೇಳೆ ಈ ಕೊಡಲಿ ಕೋತಿಗಳಿಗೆ ತಾಗುವ ಬದಲು ಕೊಡಲಿ ಬೀಸಿದ ವ್ಯಕ್ತಿಯ ಮಗನಿಗೆ ತಾಗಿ ಆ ಮಗು ಸಾವನ್ನಪ್ಪಿದೆ.

ಎರಡು ವರ್ಷದ ಮಗು ಅರವ್ ತನ್ನ ಮನೆಯಲ್ಲೇ ಆಟವಾಡುತ್ತಿದ್ದ. ಈ ವೇಳೆ ಮಂಗಗಳ ಗುಂಪೊಂದು ಅಲ್ಲಿಗೆ ಬಂದಿದೆ. ಈ ವೇಳೆ ಮಗುವಿನ ತಂದೆ ಲಖನ್ ಸಿಂಗ್ ಈ ಕೋತಿಗಳು ತನ್ನ ಮಗುವಿನ ಮೇಲೆ ದಾಳಿ ಮಾಡಬಹುದು ಎಂಬ ಭಯದಿಂದ ಕೊಡಲಿ ಬೀಸಿದ್ದಾನೆ. ಈ ವೇಳೆ ಕೊಡಲಿ ಮಗುವಿನ ಕತ್ತು ಸೀಳಿ ದುರಂತ ನಡೆದಿದೆ.

ಮಗುವಿನ ಮೇಲೆ ಕೋತಿ ದಾಳಿ ಮಾಡಬಹುದು ಎಂಬ ಭಯದಿಂದ ಲಖನ್ ಸಿಂಗ್ ಮನೆಯ ತಾರಸಿ ಮೇಲೆ ಕೊಡಲಿ ಎತ್ತಿಕೊಂಡು ಹೋಗಿದ್ದಾನೆ. ಆದರೆ ಅಲ್ಲಿಂದ ಆತ ಬೀಸಿದ ಕೊಡಲಿ ಮಗುವಿಗೆ ತಾಗಿ ಮಗು ಸಾವನ್ನಪ್ಪಿದೆ. ಘಟನೆಯ ದೃಶ್ಯಾವಳಿಯಲ್ಲಿ ಕೊಡಲಿ ತಾಗಿದ ರಭಸಕ್ಕೆ ಅದು ಮಗುವಿನ ಕತ್ತನ್ನು ಸೀಳಿ ರಕ್ತ ಗೋಡೆಯ ಮೇಲೆ ಚಿಮ್ಮಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.

ಕೊಡಲಿ ತಾಗಿದ ಕೂಡಲೇ ಮಗುವಿನ ಚೀರಾಟ ಕೇಳಿ ಕುಟುಂಬದವು ಓಡಿ ಬಂದು ಕೂಡಲೇ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಮಗು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಇದಾದ ನಂತರ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದೇ ಮಗುವಿನ ಶವವನ್ನು ಸಮಾಧಿ ಮಾಡಿದ್ದಾರೆ. ಇದು ಸಂಬಂಧಿಗಳಲ್ಲಿ ಅನುಮಾನ ಮೂಡಿಸಿದೆ. ಇದು ಆಕಸ್ಮಿಕ ಘಟನೆ ಅಲ್ಲ, ಇದೊಂದು ಕೊಲೆ, ಲಖನ್ ಸಿಂಗ್ ತನ್ನ ಹೆಂಡತಿ ಅನಿತಾ ಜೊತೆ ಕಿತ್ತಾಟ ನಡೆಸಿ ಸಿಟ್ಟಿನಲ್ಲಿ ಮಗುವನ್ನು ಕೊಂದಿದ್ದಾನೆ ಎಂದು ಘಟನೆಗೆ ಸಂಬಂಧಿಸಿದಂತೆ ಲಖನ್ ಭಾಮೈದ ಜಿತೇಂದ್ರ ಸಿಂಗ್ ಆರೋಪಿಸಿದ್ದಾರೆ.

ಸೋಮವಾರ ರಾತ್ರಿ ಲಖನ್ ಸಿಂಗ್ ಪತ್ನಿ ಅನಿತಾ ಜೊತೆ ಜಗಳವಾಡಿದ್ದ, ನಂತರ ಆತನನ್ನು ಕೋಣೆಯಲ್ಲಿ ಕೂಡಿ ಹಾಕಿ ಹೊಡೆದಿದ್ದ. ಇದಾದ ನಂತರ ರಾತ್ರಿಯ ಹೊತ್ತಿಗೆ ಜಗಳ ಕಡಿಮೆಯಾಗಿತ್ತು, ಆದರೆ ಮಂಗಳವಾರ ಬೆಳಗ್ಗೆ ಅದು ಮತ್ತೆ ಭುಗಿಲೆದ್ದಿತು. ಗಂಡ ಹೆಂಡತಿ ಜಗಳವಾಡುತ್ತಿದ್ದಾಗ, ಮಗು ಆರವ್ ತನ್ನ ಅಜ್ಜ ರಾಮಚಂದ್ರನ ಮಡಿಲಲ್ಲಿದ್ದನು. ಜಗಳದ ಸಮಯದಲ್ಲಿ, ಲಖನ್ ಸಿಂಗ್‌ ಆರವ್‌ನನ್ನು ಕಸಿದುಕೊಂಡು, ಕೊಡಲಿಯಿಂದ ಆತನನ್ನು ಕೊಂದಿದ್ದಾನೆ ಎಂದು ಲಖನ್ ಸಿಂಗ್ ಭಾವ ಆರೋಪಿಸಿದ್ದಾರೆ.

ಲಖನ್ ತನ್ನ ಹೆಂಡತಿಯನ್ನು ಹೆದರಿಸಲು ಕೊಡಲಿಯನ್ನು ಎತ್ತಿ ಮಗುವಿನ ಕುತ್ತಿಗೆಗೆ ತಿರುಗಿಸಿರಬಹುದು ಎಂದು ಅವರು ಆರೋಪಿಸಿದ್ದಾರೆ. ಅವನು ಈ ಹಿಂದೆಯೂ ಸಹ ಹೀಗೆ ಮಾಡಿದ್ದ. ಆದರೆ, ಈ ಬಾರಿ ಅದು ಆತನ ಮಗನನ್ನೇ ಕೊಂದಿತು ಎಂದು ಅವರು ಹೇಳಿದರು.

ಜಿತೇಂದ್ರ ಅವರ ಪ್ರಕಾರ, ಅವರ ಭಾವ ತಮ್ಮ ಸಹೋದರಿಯನ್ನು ನಿರಂತರವಾಗಿ ಹೊಡೆಯುತ್ತಿದ್ದರು. ಈ ನಡುವೆ ಘಟನೆಯ ಬಗ್ಗೆ ಗ್ರಾಮಸ್ಥರೊಬ್ಬರು ಬೇರೆಯದೇ ಕಥೆಯನ್ನು ಹೇಳಿದಾಗ ಕುಟುಂಬದವರ ಕೊಲೆಯ ಅನುಮಾನ ಮತ್ತಷ್ಟು ಹೆಚ್ಚಾಯಿತು. ಇಲ್ಲಿನ ಜಿಲ್ಲಾ ಪಂಚಾಯತ್ ಸದಸ್ಯರಾಗಿರುವ ಲಖನ್‌ನ ದೊಡ್ಡಪ್ಪನ ಮಗ ಜಗತ್ ಸಿಂಗ್ ಸೈನಿ ಮಾತನಾಡಿ, ಕೋತಿಗಳು ಛಾವಣಿಯಿಂದ ಕಬ್ಬಿಣದ ಸರಳುಗಳನ್ನು ಬೀಳಿಸಿವೆ, ಅದು ಮಗುವಿನ ತಲೆಗೆ ಹೊಡೆದಿದೆ ಎಂದು ಹೇಳಿದ್ದಾರೆ.

ಲಖನ್ ಅವರ ಮನೆಯಲ್ಲಿ ಇತ್ತೀಚೆಗೆ ಟೆಂಟ್ ಕೆಲಸ ಮಾಡಲಾಗಿತ್ತು, ನಂತರ ಛಾವಣಿಯ ಮೇಲೆ ಕಬ್ಬಿಣದ ಸರಳುಗಳನ್ನು ಇರಿಸಲಾಗಿತ್ತು. ಕೋತಿಗಳ ಗುಂಪೊಂದು ಅವುಗಳನ್ನು ಬೀಳಿಸಿತು ಅದು ಮಗುವಿನ ತಲೆಗೆ ಬಡಿದು ರಕ್ತಸ್ರಾವವಾಗಲು ಪ್ರಾರಂಭಿಸಿತು. ಕೂಡಲೇ ಮಗುವನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು, ಆದರೆ ಅವರು ಸಾವನ್ನಪ್ಪಿದ್ದಾರೆ ವೈದ್ಯರು ಘೋಷಿಸಿದರು ಎಂದು ಸೈನಿ ಹೇಳಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..