2023ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಾವು ಪ್ರಮಾಣದಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 5ನೇ ಸ್ಥಾನ ಲಭಿಸಿದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. 12,321 ಸಾವುಗಳು ಕರ್ನಾಟಕದಲ್ಲಿ ಕಳೆದ ವರ್ಷ ಸಂಭವಿಸಿವೆ.
ನವದೆಹಲಿ (ಅ.20): 2023ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಾವು ಪ್ರಮಾಣದಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 5ನೇ ಸ್ಥಾನ ಲಭಿಸಿದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. 12,321 ಸಾವುಗಳು ಕರ್ನಾಟಕದಲ್ಲಿ ಕಳೆದ ವರ್ಷ ಸಂಭವಿಸಿವೆ. ಇನ್ನು ದೇಶದಲ್ಲಿ 1.73 ಲಕ್ಷ ಜನ ಸಾವನ್ನಪ್ಪಿದ್ದಾರೆ. ಅಂದರೆ ದಿನವೊಂದಕ್ಕೆ ಸರಾಸರಿ 474 ಜನ ಹಾಗೂ 3 ನಿಮಿಷಕ್ಕೆ ಒಂದು ಜೀವ ಬಲಿಯಾದಂತಾಗಿದೆ.
ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಅಂಕಿ-ಅಂಶ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶ (23,652 ಸಾವುಗಳು) ಮೊದಲ ಸ್ಥಾನದಲ್ಲಿದ್ದು, ತಮಿಳುನಾಡು (18,347 ಸಾವು), ಮಹಾರಾಷ್ಟ್ರ (15,366 ಸಾವು), ಮಧ್ಯಪ್ರದೇಶ (13,798 ಸಾವು), ಕರ್ನಾಟಕ (12,321 ಸಾವು) ಕ್ರಮವಾಗಿ ನಂತರದ ಸ್ಥಾನ ಪಡೆದುಕೊಂಡಿವೆ.
ಬಿಜೆಪಿ ಲೋಕಸಭಾ ಟಿಕೆಟ್ ಕೊಡಿಸುವುದಾಗಿ 2 ಕೋಟಿ ವಂಚನೆ: ಪ್ರಲ್ಹಾದ್ ಜೋಶಿ ಸಹೋದರನ ಬಂಧನ
ಕೇಂದ್ರ ಈ ಕುರಿತ ಅಂಕಿಅಂಶಗಳನ್ನು ಸಂಗ್ರಹಿಸಲು ತೊಡಗಿದಾಗಿನಿಂದ 2023ರಲ್ಲಿ ಅತಿಹೆಚ್ಚು ಅಪಘಾತಗಳು ವರದಿಯಾಗಿವೆ. ಕಳೆದ ವರ್ಷ ಗರಿಷ್ಠ 4.63 ಲಕ್ಷ ಜನ ಅಪಘಾತಗಳಲ್ಲಿ ಗಾಯಗೊಂಡಿದ್ದು, ಇದು 2022ಕ್ಕಿಂತ ಶೇ.4ರಷ್ಟು ಅಧಿಕ. ರಸ್ತೆ ಸಾರಿಗೆ ಸಚಿವಾಲಯ ಸಂಗ್ರಹಿಸಿರುವ ಅಂಕಿಅಂಶಗಳ ಪ್ರಕಾರ 2022ರಲ್ಲಿ ರಸ್ತೆ ಅಪಘಾತಗಳಲ್ಲಿ 1.68 ಲಕ್ಷ ಸಾವುಗಳು ಸಂಭವಿಸಿದ್ದರೆ, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಪ್ರಕಾರ ಈ ಸಂಖ್ಯೆ 1.71 ಲಕ್ಷದಷ್ಟಿದೆ.