ಹೊತ್ತಲ್ಲದ ಹೊತ್ತಲ್ಲಿ ವಿಚಾರಣೆ ಬೇಡ: ಅಧಿಕಾರಿಗಳಿಗೆ ಇ.ಡಿ. ಸೂಚನೆ

By Kannadaprabha NewsFirst Published Oct 20, 2024, 8:27 AM IST
Highlights

ಹೊತ್ತಲ್ಲದ ಹೊತ್ತಲ್ಲಿ ವಿಚಾರಣೆ ನಡೆಸದಂತೆ ಹಾಗೂ ಕಚೇರಿಗಳಲ್ಲಿ ಗಂಟೆಗಟ್ಟಲೆ ಕಾಯಿಸದಂತೆ ತನ್ನ ತನಿಖಾಧಿಕಾರಿಗಳಿಗೆ ಸೂಚನೆ ನೀಡಿ ಜಾರಿ ನಿರ್ದೇಶನಾಲಯ (ಇ.ಡಿ.) ಸುತ್ತೋಲೆಯೊಂದನ್ನು ಹೊರಡಿಸಿದೆ.

ನವದೆಹಲಿ: ಸಮನ್ಸ್‌ ಕೊಟ್ಟು ವಿಚಾರಣೆಗೆ ಕರೆಸಿದ ವ್ಯಕ್ತಿಗಳನ್ನು ಹೊತ್ತಲ್ಲದ ಹೊತ್ತಲ್ಲಿ ವಿಚಾರಣೆ ನಡೆಸದಂತೆ ಹಾಗೂ ಕಚೇರಿಗಳಲ್ಲಿ ಗಂಟೆಗಟ್ಟಲೆ ಕಾಯಿಸದಂತೆ ತನ್ನ ತನಿಖಾಧಿಕಾರಿಗಳಿಗೆ ಸೂಚನೆ ನೀಡಿ ಜಾರಿ ನಿರ್ದೇಶನಾಲಯ (ಇ.ಡಿ.) ಸುತ್ತೋಲೆಯೊಂದನ್ನು ಹೊರಡಿಸಿದೆ.

ತಮ್ಮನ್ನು ವಿಚಾರಣೆಗೆ ಕರೆಸಿದ ಇ.ಡಿ. ಅಧಿಕಾರಿಗಳು ಇಡೀ ರಾತ್ರಿ ವಶದಲ್ಲಿಟ್ಟುಕೊಂಡು, ಪ್ರಶ್ನೆ ಕೇಳಿದ್ದರು. ಮಧ್ಯರಾತ್ರಿ ಬಳಿಕ ಕಾಯಲು ಕೂರಿಸಿದ್ದರು ಎಂದು 64 ವರ್ಷದ ವ್ಯಕ್ತಿಯೊಬ್ಬರು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ರೀತಿ ಮಾಡುವುದರಿಂದ ವಿಚಾರಣೆ ಬಂದ ವ್ಯಕ್ತಿ ನಿದ್ರೆಯಿಂದ ವಂಚಿತನಾಗುತ್ತಾನೆ. ಅದು ಕನಿಷ್ಠ ಮಾನವೀಯ ವೈಯಕ್ತಿಕ ಹಕ್ಕು ಎಂದು ಕೋರ್ಟ್‌ ಹೇಳಿತ್ತು. ಅಲ್ಲದೆ ಈ ಕುರಿತು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡುವಂತೆ ಬಾಂಬೆ ಹೈಕೋರ್ಟ್‌ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅ.11ರಂದು ಸುತ್ತೋಲೆಯನ್ನು ಹೊರಡಿಸಿದೆ.

Latest Videos

click me!