ಸಚಿವರ ಮನೆಯಲ್ಲಿ ಪ್ರಿಪೇಯ್ಡ್ ವಿದ್ಯುತ್ ಮೀಟರ್: ನೋಡಿದವರೆಲ್ಲಾ ಅಂತಿದ್ದಾರೆ ಸೂಪರ್!

By Web DeskFirst Published Nov 16, 2019, 5:40 PM IST
Highlights

ಮನೆಯಲ್ಲಿ ಪ್ರೀಪೇಯ್ಡ್ ವಿದ್ಯುತ್ ಮಾಪಕ ಇಂಧನ ಸಚಿವ| ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ|  ಮಿತಿ ಮುಕ್ತಾಯಗೊಂಡರೆ ಸ್ವಯಂಚಾಲಿತವಾಗಿ ವಿದ್ಯುತ್ ಪೂರೈಕೆ ಸ್ಥಗಿತ| ಪ್ರೀಪೇಯ್ಡ್ ಮೀಟರ್ ಅಳವಡಿಸಿ ಇತರರಿಗೆ ಮಾದರಿಯಾದ ಸಚಿವ| ಪ್ರೀಪೇಯ್ಡ್ ಮೀಟರ್ ಅಳವಡಿಸಿಕೊಳ್ಳುವಂತೆ ಜನತೆಗೆ ಕರೆ|

ಲಕ್ನೋ(ನ.16): ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ತಮ್ಮ ಮನೆಯಲ್ಲಿ ಪ್ರೀಪೇಯ್ಡ್ ವಿದ್ಯುತ್ ಮಾಪಕವನ್ನು ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.  

25 KV ಸಾಮರ್ಥ್ಯ ಹೊಂದಿರುವ ಪ್ರೀಪೇಯ್ಡ್ ಮಾಪಕವನ್ನು ಶ್ರೀಕಾಂತ್ ಶರ್ಮಾ ಕಾಳಿದಾಸ ಮಾರ್ಗ್ ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಅಳವಡಿಸಿಕೊಂಡಿದ್ದಾರೆ. ಪ್ರೀಪೇಯ್ಡ್ ಮಾಪಕದಲ್ಲಿರುವ ಮಿತಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ವಿದ್ಯುತ್ ಪೂರೈಕೆ ಸ್ವಯಂಚಾಲಿತವಾಗಿ ತಾನಾಗಿಯೇ ಕಡಿತಗೊಳ್ಳುವುದು ಈ ಮಾಪಕದ ವಿಶೇಷತೆಯಾಗಿದೆ.

ಉದ್ಧಾರ! ಸಚಿವರು, ಅಧಿಕಾರಿಗಳ 13000 ಕೋಟಿ ವಿದ್ಯುತ್‌ ಬಿಲ್‌ ಬಾಕಿ

सबको बिजली, पर्याप्त बिजली, निर्बाध बिजली, स्वच्छ और सस्ती बिजली मिले यह सरकार का संकल्प है। इसके लिए समय से बिजली के बिलों का भुगतान जरूरी है। आज अपने सरकारी निवास पर स्मार्ट प्रीपेड मीटर लगाकर अभियान की शुरुआत की। pic.twitter.com/hYKhdhGeuS

— Shrikant Sharma (@ptshrikant)

ಈ ಕುರಿತು ಮಾತನಾಡಿರುವ ಶ್ರೀಕಾಂತ್ ಶರ್ಮಾ, ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ವಿದ್ಯುತ್ ಬಾಕಿಯನ್ನು ಪಾವತಿ ಮಾಡುವುದಿಲ್ಲ ಎಂಬ ಆರೋಪವನ್ನು ಅಳಿಸಲು ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.

ನೆಲದಡಿಯೇ ಇನ್ನು ವಿದ್ಯುತ್‌ ಕೇಬಲ್‌

ಎಲ್ಲಾ ಸರ್ಕಾರಿ ಅಧಿಕಾರಿಗಳು, ಸಚಿವರು, ರಾಜಕಾರಣಿಗಳ ಮನೆಗಳಿಗೆ ಪ್ರೀಪೇಯ್ಡ್ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಬೇಕೆಂಬ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಈಗ ಸ್ವತಃ ಇಂಧನ ಸಚಿವರೇ ಪ್ರಿಪೇಯ್ಡ್ ಮೀಟರ್ ಅಳವಡಿಸಿಕೊಂಡಿದ್ದು, ಈ ಪ್ರೀಪೇಯ್ಡ್ ಮೀಟರ್ ಅಳವಡಿಸಿಕೊಳ್ಳುವಂತೆ ಜನತೆಗೆ ಕರೆ ನೀಡಿದ್ದಾರೆ.

click me!