ಫೋಟೋ ಶೂಟ್‌ನಲ್ಲಿ ವ್ಯಸ್ತರಾದ ವಧು ವರ| ಹಿಂದಿನಿಂದ ಬಂದ ಕಳ್ಳ ಹಣದ ಚೀಲದೊಂದಿಗೆ ಪರಾರಿ| 5 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ನಿಮಿಷದಲ್ಲಿ ಮಾಯ
ನವದೆಹಲಿ[ನ.16]: ಮದುವೆ ಸಮಾರಂಭದಲ್ಲಿ ಕಳ್ಳತನವಾಗುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಿರುವಾಗ ದೆಹಲಿಯಲ್ಲಿ ನಡೆದ ಕಳ್ಳತನದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಬಾರೀ ವೈರಲ್ ಆಗಿದೆ. ಅತ್ತ ವೇದಿಕೆಯಲ್ಲಿದ್ದ ನವ ದಂಪತಿ ಫೋಟೋಗೆ ಫೋಸ್ ಕೊಡುವಲ್ಲಿ ಬ್ಯೂಸಿಯಾಗಿದ್ದರೆ, ಇತ್ತ ಸೂಟು ಬೂಟು ಧರಿಸಿ ಬಂದಿದ್ದ ಕಳ್ಳ ಹಣದಿಂದ ತುಂಬಿದ ಚೀಲದೊಂದಿಗೆ ಪರಾರಿಯಾಗಿದ್ದಾನೆ.
ಕಳ್ಳತನದ ದೂರು ಪಡೆದ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಹಾಗೂ ಕಳ್ಳನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕಳ್ಳತನವಾದ ಚೀಲದಲ್ಲಿ ಸುಮಾರು 5 ಲಕ್ಷ ರೂಪಾಯಿ ಹಣವಿತ್ತೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮದುವೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಘಿದ್ದು, ಇದರಲ್ಲಿ ವಧು ವರರು ಫೋಟೋಗೆ ಫೋಸ್ ನೀಡುತ್ತಾ, ಸಂಬಂಧಿಕರೊಂದಿಗೆ ಮಾತನಾಡುವುದರಲ್ಲಿ ಬ್ಯೂಸಿಯಾಗಿರುವುದನ್ನು ನೋಡಬಹುದಾಗಿದೆ. ಈ ಅವಕಾಶವನ್ನು ಬಳಸಿಕೊಂಡ ಸುಮಾರು 14 ರಿಂದ 15 ವರ್ಷ ಹರೆಯದ ಸೂಟು ಬೂಟು ಧರಿಸಿದ ಬಾಲಕ ವೇದಿಕೆಯಲ್ಲಿದ್ದ ಹಣದ ಚೀಲವನ್ನು ಎಗರಿಸಿ ಓಡಿ ಹೋಗಿದ್ದಾನೆ.
कडकड़कूमा कोर्ट के पास शादी में सूट बूट में आया चोर,लोग दूल्हा दुल्हन के साथ फोटो खिंचाते रहे और चोर उड़ा ले गया 5 लाख रुपये से भरा बैग pic.twitter.com/RbsgVfj8h7
— Mukesh singh sengar (@mukeshmukeshs)ರಾಷ್ಟ್ರರಾಜಧಾನಿಯಲ್ಲಿ ಇಂತಹ ಘಟನೆ ನಡೆದಿರುವುದು ಇದು ಮೊದಲಲ್ಲ. ಇದಕ್ಕೂ ಮುನ್ನ ಗುರುಗ್ರಾಮ-ದೆಹಲಿ ಎಕ್ಸ್ ಪ್ರೆಸ್ ಬಳಿ ಹೋಟೆಲ್ ಒಂದರಲ್ಲಿಯೂ ಕಳ್ಳತನ ನಡೆದಿತ್ತು. ಇಲ್ಲಿ ಆಯೋಜಿಸಲಾಗಿದ್ದ ವಿವಾಹ ಸಮಾರಂಭದಲ್ಲಿ, ಕಳ್ಳನೊಬ್ಬ ಮದುಮಗಳ ಸುಮಾರು 80ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಹಾಗೂ ವಜ್ರದ ಆಭರಣಗಳಿದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇನ್ನು ಹೋಟೆಲ್‌ನಲದಲಿದ್ದ ಹಲವಾರು ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ವಿಚಾರ ತನಿಖೆ ವೇಳೆ ಬಯಲಾಗಿತ್ತು
ನವೆಂಬರ್ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: