
ಮಥುರಾ[ಜ.26]: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಪೊಲೀಸರು ವೃಂದಾವನದಲ್ಲಿ ಕಳೆದ ಹಲವಾರು ವರ್ಷಗಳಿಂದ ಇಬ್ಬರು ಬಾಂಗ್ಲಾ ನಿವಾಸಿಗರನ್ನು ಅರೆಸ್ಟ್ ಮಾಡಿದ್ದಾರೆ. ಇವರು ಕೃಷ್ಣ ನಗರಿಯಲ್ಲಿ ಸಾಧುಗಳಾಗಿ ಕೀರ್ತನೆ, ಭಜನೆ ಹಾಡಿಕೊಂಡಿದ್ದರು.ಇನ್ನು ಇವರಲ್ಲಿ ಒಬ್ಬನ ಬಳಿ ಇದ್ದ ಪಾಸ್ ಪೋರ್ಟ್ ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಅನ್ವಯ ಅರೆಸ್ಟ್ ಮಾಡಲಾದ ವಿದೇಶೀ ನಾಗರಿಕರಲ್ಲಿ ಒಬ್ಬನ ಹೆಸರು ಮಾನವ್ ಆಗಿದ್ದು, ಈತ ಮಥುರಾದಲ್ಲಿ ಕಳೆದ 8 ವರ್ಷಗಳಿಂದ ವಾಸಿಸುತ್ತಿದ್ದಾನೆನ್ನಲಾಗಿದೆ. ಇನ್ನು ಎರಡನೆಯವನಾತನ ಹೆಸರು ಕೇಶವ್ ಆಗಿದ್ದು, ಆತ ಕಳೆದ 7 ವರ್ಷಗಳಿಂದ ಇಲ್ಲೇ ಇದ್ದಾನೆ.
ಇದಕ್ಕೂ ಮುನ್ನ ಅವರು ಬಾಲ್ಯದಲ್ಲಿ 20 ವರ್ಷದ ಹಿಂದೆ ಮಥುರಾಗೆ ಬಂದಿದ್ದರು. ಆದರೆ 7 ವರ್ಷದಿಂದ ವರು ತಮ್ಮ ದೇಶಕ್ಕೆ ತೆರಳದೇ ಇಕಲ್ಲೇ ಸಾಧುಗಳಾಗಿ ಉಳಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರನ್ನೂ ಗೌಪ್ಯ ಮಾಹಿತಿ ಮೇರೆಗೆ ಬಂಧಿಸಿದ್ದು, ಈಗಾಗಲೇ ಇವರು ಗುರುತು ಇಲ್ಲಿ ಉಳಿದುಕೊಳ್ಳಲು ಬೇಕಾಗಿರುವ ಆಧಾರ್ ಕಾರ್ಡ್ ಮೊದಲಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಇಬ್ಬರನ್ನೂ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿದ ಬಳಿಕ ಜೈಲಿಗೆ ಕಳುಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ