ಲಖ್ನೋ(ಮಾ.4): ಪೋಲೀಸ್ ಅಧಿಕಾರಿಯೊಬ್ಬರು ವೃದ್ಧ ಮಹಿಳೆಯನ್ನು ಮತಗಟ್ಟೆಗೆ ಹೊತ್ತೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಗೋರಖ್‌ಪುರ (Gorakhpur) ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯುಪಿ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಹೀಗೆ ಮಹಿಳೆಯನ್ನು ಹೊತ್ತುಕೊಂಡು ಹೋಗುತ್ತಿರುವ ಪೊಲೀಸ್ ಪೇದೆಯನ್ನು ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಉತ್ತರಪ್ರದೇಶದಲ್ಲಿ(Uttar Pradesh) ಗುರುವಾರ ನಡೆದ 6ನೇ ಹಂತದ ಮತದಾನ ವೇಳೆ ಉತ್ತರಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ವಯಸ್ಸಾದ ಮಹಿಳೆಯನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಮತದಾನ ಕೇಂದ್ರಕ್ಕೆ ಕರೆದುಕೊಂಡು ಬಂದ ದೃಶ್ಯ ಕಂಡು ಬಂತು.
ಭುಜದ ಮೇಲೆ ಬಂದೂಕು ಮತ್ತು ಮಡಿಲಲ್ಲಿ ತಾಯಿ. ಅದಕ್ಕಾಗಿಯೇ ನಾವು ಖಾಕಿ ಸಮವಸ್ತ್ರದ ಬಗ್ಗೆ ಹೆಮ್ಮೆಪಡುತ್ತೇವೆ. ಗೋರಖ್‌ಪುರ ಜಿಲ್ಲೆಯಲ್ಲಿ ಕಾನ್ಸ್‌ಟೇಬಲ್ ಪವನ್‌ಕುಮಾರ್ (Pawan Kumar) ಅವರು ಬಾದಲ್‌ಗಂಜ್ (Badhalganj) ಪೊಲೀಸ್ ಠಾಣೆಯ ಮತದಾನ ಸ್ಥಳದಲ್ಲಿ ವೃದ್ಧ ಮಹಿಳೆಯೊಬ್ಬರಿಗೆ ಸಹಾಯ ಮಾಡುವ ಮೂಲಕ ಪ್ರಜಾಪ್ರಭುತ್ವದ ನಿಜವಾದ ಕಾವಲು ನಾಯಿಯ ಪಾತ್ರ ವಹಿಸಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ ಪವನ್ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ಮೊದಲನೇ ಹಂತದ ಮತದಾನ ಫೆಬ್ರವರಿ 10ರಂದು ನಡೆಯಿತು. 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಆರು ಹಂತಗಳ ಮತದಾನ ಈಗಾಗಲೇ ಮುಗಿದ್ದಿದ್ದು, ಕೊನೆಯ ಹಂತ ಮಾತ್ರ ಬಾಕಿ ಇದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ಅಖಾಡದಲ್ಲಿ ರಾಜಕೀಯ ಕೆಸರೆರಚಾಟಗಳು ಮಾಮೂಲಿಯಾಗಿವೆ. 2022 ರ ವಿಧಾನಸಭಾ ಚುನಾವಣೆಗೂ ಮುನ್ನ, ಪಡಿತರ ಹಂಚಿಕೆ ಯೋಜನೆ ಅಡಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಾರಣಾಸಿ ಭಾಗದಲ್ಲಿ ಅತೀ ಹೆಚ್ಚು ಉಪ್ಪನ್ನು ನೀಡಿದ್ದವು. ಆ ಯೋಜನೆಯನ್ನು ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. 'ಆ ಉಪ್ಪನ್ನು ನೀವು ಇಟ್ಟುಕೊಳ್ಳಿ. ಮಾರ್ಚ್ 10 ರಂದು ಪ್ರಧಾನಿ ಮೋದಿ, ಸಿಎಂ ಯೋಗಿ ಸಮಾಧಿ ಮಾಡುತ್ತೇವೆ. ಅದರ ಮೇಲೆ ಚೆಲ್ಲಿ' ಎಂದು ವಿವಾದಾತ್ಮಕ ಹೇಳಿಕೆ ನೀಡಿ, ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಮೇಲೆ ದೂರು ದಾಖಲಾಗಿದೆ.
UP Elections 2022: ವಾರಾಣಸಿಯಲ್ಲಿ 2 ದಿನ ಪ್ರಧಾನಿ ಮೋದಿ ಪ್ರಚಾರ, ರೋಡ್ ಶೋ
ಜೈ ಶ್ರೀರಾಮ್ ಘೋಷಣೆಗೆ ಉರಿದು ಬಿದ್ದು ಭಾರಿ ವಿವಾದಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕೆಲ ದಿನಗಳ ಹಿಂದೆ ವಾರಣಾಸಿ ಜನ ಜೈಶ್ರೀರಾಮ್ ಘೋಷಣೆ, ಮೋದಿ ಮೋದಿ ಘೋಷಣೆ ಮೂಲಕ ಸ್ವಾಗತ ಕೋರಿದ್ದರು. ಉತ್ತರ ಪ್ರದೇಶ ಚುನಾವಣೆ ಪ್ರಯುಕ್ತ ವಾರಣಾಸಿಗೆ ಆಗಮಿಸಿದ ಮಮತಾ ಬ್ಯಾನರ್ಜಿಗೆ ಈ ಘಟನೆ ಇರಿಸು ಮುರಿಸು ತಂದಿದೆ. ಮಮತಾ ಬ್ಯಾನರ್ಜಿ ವಾರಣಾಸಿ ನಗರಕ್ಕೆ ಪ್ರವೇಶಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆಗಳು ಮೊಳಗಿತು. ಮಮತಾ ಬೆಂಗಾವಲು ವಾಹನ ಬರುತ್ತಿದ್ದಂತೆ ಜೈಶ್ರೀರಾಮ್, ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಕಾಶೀ ವಿಶ್ವನಾಥ ಮಂದಿರಕ್ಕೆ ಬೇಟಿ ನೀಡಿದ ವೇಳೆ ಮಮತಾ ಬೆಂಬಲಿಗರು ಮಮತಾ ಮಮತಾ ಘೋಷಣೆ ಕೂಗಿದ್ದರೆ, ಇತ್ತ ಮೋದಿ ಮೋದಿ ಘೋಷಣೆಗಳು ಮೊಳಗಿತ್ತು.
UP Elections: 676 ಅಭ್ಯರ್ಥಿಗಳು ಕಣದಲ್ಲಿ, ಪ್ರತಿ ಮೂವರಲ್ಲಿ ಒಬ್ಬ ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಪ್ರಕರಣ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ