Ukraine Crisis ಉಕ್ರೇನ್‌ನಿಂದ ಭಾರತೀಯರ ರಕ್ಷಣೆ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಶಹಹಬ್ಬಾಸ್!

By Suvarna News  |  First Published Mar 4, 2022, 5:41 PM IST
  • ಯುದ್ಧ ನಾಡಿನಿಂದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ
  • ಆಪರೇಶನ್ ಗಂಗಾ ಮೂಲಕ ಕೇಂದ್ರ ಸರ್ಕಾರ ಕಾರ್ಯಾಚರಣೆ
  • ಕೇಂದ್ರ ಸರ್ಕಾರದ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ಮೆಚ್ಚುಗೆ

ನವದೆಹಲಿ(ಮಾ.04): ಉಕ್ರೇನ್ ಮೇಲಿನ ರಷ್ಯಾ ದಾಳಿ(Russia Ukraine war) ಮತ್ತಷ್ಟು ತೀವ್ರಗೊಂಡಿದೆ. ಯುದ್ಧ 9ನೇ ದಿನವೂ ಮುಂದುವರಿದಿದೆ. ಬಹುತೇಕ ಉಕ್ರೇನ್ ದ್ವಂಸಗೊಂಡಿದೆ. ಬಹುತೇಕ ಪ್ರದೇಶಗಳು ರಷ್ಯಾ ಕೈವಶವಾಗಿದೆ. ಆದರೆ ದಾಳಿ ಅಂತ್ಯಗೊಂಡಿಲ್ಲ. ಇದರ ನಡುವೆ ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಯನ್ನು(Indain Students Evacuation) ಕೇಂದ್ರ ಸರ್ಕಾರ ಆಪರೇಶನ ಗಂಗಾ ಮಿಶನ್ ಅಡಿ(Operation Ganga Mission) ಮಾಡುತ್ತಿದೆ. ಇದೀಗ ಕೇಂದ್ರ ಸರ್ಕಾರದ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ಶಹಬ್ಬಾಸ್‌ಗಿರಿ ನೀಡಿದೆ.

ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ಕುರಿತು ಎರಡು ಪಿಟೀಶನ್ ಸಲ್ಲಿಕೆಯಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್(Supreme Court) ಪೀಠ, ಕೇಂದ್ರದ ನಡೆಯನ್ನು ಶ್ಲಾಘಿಸಿದೆ. ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ಎನ್‌ವಿ ರಮಣ, ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿತು. ತ್ರಿಸದಸ್ಯ ಪೀಠದಲ್ಲಿ ಎಎಸ್ ಬೋಪಣ್ಣ ಹಾಗೂ ಹಿಮಾ ಕೊಹ್ಲಿ ವಿಚಾರಣೆ ನಡೆಸಿದರು.  ಈ ವೇಳೆ ಕೇಂದ್ರ ಸರ್ಕಾರದ ಕಾರ್ಯಾಚರಣೆ ಹಾಗೂ ರಕ್ಷಿಸಿದ ವಿದ್ಯಾರ್ಥಿಗಳ ಕುರಿತು ಮಾಹಿತಿಯನ್ನು ಸರ್ಕಾರದ ಪರ ವಕೀಲ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ನೀಡಿದರು.

Tap to resize

Latest Videos

Operation Ganga: ಭಾರತ ಸರ್ಕಾರ ಏನೂ ಮಾಡ್ತಿಲ್ಲ ಎಂದವರ ವಿರುದ್ಧ ಆಕ್ರೋಶ

ತೀವ್ರ ಸಂಕಷ್ಟದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ನಡಸುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಉಕ್ರೇನ್ ಯುದ್ಧ ಭೂಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಆತಂಕದ ಕುರಿತು ಕಾಳಜಿ ಇದೆ. ತಕ್ಷಣವೇ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಈ ಹಿಂದಿನ ಯುದ್ಧಗಳಿಂದ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ಯಾರು ಅರಿಯುತ್ತಿಲ್ಲ. ಈ ಕುರಿತು ನಾವು ಹೆಚ್ಚು ಹೇಳುವುದಿಲ್ಲ. ಆದರೆ ಪ್ರತಿಯೊಬ್ಬ ಭಾರತೀಯನ ರಕ್ಷಣೆ ಸುರಕ್ಷಿತವಾಗಿ ಆಗಬೇಕು ಎಂದು ಸುಪ್ರೀಂ ಕೋರ್ಟ್ ಬೆಂಚ್ ಹೇಳಿದೆ.

ಇದೇ ವೇಳೆ ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಕ್ಕೆ ಕೇಂದ್ರ ನಡೆಸುತ್ತಿರುವ ಪ್ರಯತ್ನ ಹಾಗೂ ಉಕ್ರೇನ್ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರಿಗೆ ಸ್ಪಷ್ಟ ಮಾಹಿತಿ ದೊರೆಯು ಸಹಾಯವಾಣಿ ಕುರಿತು ಮಾಹಿತಿಯನ್ನು ನೀಡಿ ಕೇಂದ್ರ ಸರ್ಕಾರಿ ಪರ ವಕೀಲ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್‌ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

Operation Ganga: ಉಕ್ರೇನ್‌ನಿಂದ ಒಂದೇ ದಿನ 3726 ಭಾರತೀಯರ ರಕ್ಷಣೆ: 63 ಕನ್ನಡಿಗರು ತಾಯ್ನಾಡಿಗೆ ವಾಪಸ್‌!

ಪ್ರಧಾನಿ ಮುಂದೆ ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು
ಯುದ್ಧ ಪೀಡಿತ ಉಕ್ರೇನ್‌ನಿಂದ ಉತ್ತರ ಪ್ರದೇಶಕ್ಕೆ ಹಿಂದಿರುಗಿದ ಕೆಲವು ವಿದ್ಯಾರ್ಥಿಗಳೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಮಾತುಕತೆ ನಡೆಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.

ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿನ ತಮ್ಮ ಅನುಭವವನ್ನು ಪ್ರಧಾನಿ ಅವರೊಂದಿಗೆ ಹಂಚಿಕೊಂಡರು ಎಂದು ಮೂಲಗಳು ತಿಳಿಸಿವೆ. ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಆಪರೇಶನ್‌ ಗಂಗಾ ಎಂಬ ಯೋಜನೆಯನ್ನು ಭಾರಯ ಆರಂಭಿಸಿದೆ. ಉಕ್ರೇನ್‌ ನೆರೆಯ ರಾಷ್ಟ್ರಗಳಿಂದ ಬರುವ ವಿಮಾನಗಳ ಮೇಲ್ವಿಚಾರಣೆ ನೋಡಿಕೊಳ್ಳಲು ನಾಲ್ವರು ಕೇಂದ್ರ ಸಚಿವರನ್ನು ಸಹ ನೇಮಕ ಮಾಡಲಾಗಿದೆ.

Ukraine Crisis: ನಮ್ಮ ನಾಗರಿಕರನ್ನೂ ಕರೆತನ್ನಿ, ಭಾರತಕ್ಕೆ ನೇಪಾಳ ಮನವಿ!

ಆಪರೇಶನ್‌ ಗಂಗಾ ಕಾರ್ಯಾಚರಣೆಯಲ್ಲಿ 42 ವಿಮಾನಗಳು
ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಆಪರೇಶನ್‌ ಗಂಗಾ ಹೆಸರಿನಲ್ಲಿ ಕಾರಾರ‍ಯಚರಣೆ ನಡೆಸಿದ್ದು, ಒಟ್ಟು 42 ವಿಮಾನಗಳನ್ನು ಕರೆತರಲು ವ್ಯವಸ್ಥೆ ಮಾಡಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‌ ದೇಶದ ಅಕ್ಕ ಪಕ್ಕದ ದೇಶದಲ್ಲಿ ನಮ್ಮ ದೇಶದ ವಿಮಾನಗಳು ಲ್ಯಾಂಡ್‌ ಆಗುತ್ತಿವೆ. ಅಲ್ಲಿನ ಭಾರತೀಯ ವಿದ್ಯಾರ್ಥಿಗಳಿಗೆ ಗಡಿಗೆ ಬರಲು ಹೇಳಲಾಗಿದೆ. ಹಾವೇರಿಯ ವಿದ್ಯಾರ್ಥಿ ನವೀನ್‌ ಸಾವಿನ ವಿಚಾರ ನಮಗೆ ದುಖಃ ತಂದಿದೆ. ಸಚಿವರು ನವೀನ್‌ ಮನೆಯವರ ಸಂಪರ್ಕದಲ್ಲಿದ್ದಾರೆ. ಅವರ ಮನೆಯವರಿಗೆ ಧೈರ್ಯ ಹೇಳಿದ್ದೇವೆ. ಯುದ್ದದ ಭೀತಿ ಜೋರಾಗಿದೆ. ಅಲ್ಲಿ ಹೆಣಗಳು ಬಿದ್ದ ಜಾಗಕ್ಕೆ ಹೋಗಲೂ ಆಗುತ್ತಿಲ್ಲ. ನವೀನ್‌ನ್ನು ಜೀವಂತ ತರಲು ಆಗಲಿಲ್ಲ. ಕಡೇ ಪಕ್ಷ ಮೃತದೇಹವನ್ನು ಮನೆಗೆ ತಂದು ಮನೆಯವರಿಗೆ ಮುಖ ತೋರಿಸುವುದು ನಮಗೆ ಸವಾಲಾಗಿದೆ ಎಂದರು.

click me!