ಉ.ಪ್ರದೇಶದ ಕಿವುಡ, ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ; ಇಬ್ಬರು ಪಾಕ್ ISI ಎಜೆಂಟ್ ಅರೆಸ್ಟ್!

Published : Jun 21, 2021, 03:06 PM ISTUpdated : Jun 21, 2021, 05:59 PM IST
ಉ.ಪ್ರದೇಶದ ಕಿವುಡ, ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ; ಇಬ್ಬರು ಪಾಕ್ ISI ಎಜೆಂಟ್ ಅರೆಸ್ಟ್!

ಸಾರಾಂಶ

ಪಾಕಿಸ್ತಾನದ ISI ಎಜೆಂಟ್ ಇಬ್ಬರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್ ಅರೆಸ್ಟ್ ಆದ ಇಬ್ಬರು ಕಿವುಡ, ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ ಬಲತ್ಕಾರವಾಗಿ ಮತಾಂತರ, ಭಾರತದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ

ಲಖನೌ(ಜೂ.21): ಉತ್ತರ ಪ್ರದೇಶದ, ದೆಹಲಿ ಸೇರಿದಂತೆ ದೇಶದ ಹಲವೆಡೆ ಕಿವುಡ, ಮೂಕ ಮಕ್ಕಳನ್ನು ಅಸಾಹಾಯಕರನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಇಬ್ಬರನ್ನು  ಭಯೋತ್ರಾದಕ ನಿಗ್ರಹ ದಳ (ATS) ಬಂಧಿಸಿದೆ. ಬಂಧಿತ ಇಬ್ಬರು ಪಾಕಿಸ್ತಾನ ISI ಎಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಅನ್ನೋದು ವಿಚಾರಣೆಯಿಂದ ಬಹಿರಂಗವಾಗಿದೆ.

ಸಿಖ್ ಮಹಿಳೆ, ಇಬ್ಬರು ಮಕ್ಕಳನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರ; ನಾಲ್ವರ ಬಂಧನ!

ಬಂಧಿತರನ್ನು ಜಂಹಗೀರ್ ಹಾಗೂ ಉಮರ್ ಗೌತಮ್ ಎಂದು ಗುರುತಿಸಲಾಗಿದೆ. ಉಮರ್ ಗೌತಮ್ ಬಾಟ್ಲಾ ಹೌಸ್ ಜಾಮಿಯಾ ನಗರ ನಿವಾಸಿಯಾಗಿದ್ದು ಈಗಾಗಲೇ 1,000 ಹೆಚ್ಚು ಮಂದಿಯನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರಿಸಿದ್ದಾನೆ. ವಿಚಾರಣೆ ವೇಳೆ ಈತ ಪಾಕಿಸ್ತಾನ ISI ನಿರ್ದೇಶನದ ಮೇರೆಗೆ ಭಾರತದಲ್ಲಿ ಮತಾಂತರ ಮಾಡುತ್ತಿದ್ದ ಅನ್ನೋದು ಬಯಲಾಗಿದೆ.

ಮುಸ್ಲಿಂ ವೃದ್ಧನಿಗೆ ಥಳಿತ: ಸುಳ್ಳು ಕತೆ ಹೆಣೆದ SP ನಾಯಕ ಉಮ್ಮೇದ್ ಅರೆಸ್ಟ್!

ಕಿವುಡ, ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಈ ಇಬ್ಬರು, ಭಾರತದ ಹಲವು ಮಾಹಿತಿಗಳನ್ನು ಪಾಕಿಸ್ತಾನ ISIಗೆ ರವಾನೆ ಮಾಡುತ್ತಿದ್ದ ಆರೋಪವೂ ಇದೆ. ಜಗತ್ತಿನಲ್ಲಿ ಇಸ್ಲಾಂ ಮಾತ್ರ ಅತ್ಯಂತ ಶ್ರೇಷ್ಠ ಧರ್ಮ. ಇಸ್ಲಾಂಗೆ ಮತಾಂತರಗೊಂಡರೆ ಹಲವು ಸವಲತ್ತುಗಳು, ತಿಂಗಳ ಮಾಸಾಶನ ಸೇರಿದಂತೆ ಸೌಲಭ್ಯಗಳಿವೆ. ನಿರಾಕರಿಸಿದರೆ ಜೀವ ಬೆದರಿಕೆ ಒಡ್ಡುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು