ರಮೇಶ್ ಜಾರಕಿಹೊಳಿ ಸಿಡಿ ಕೇಸ್‌ನಲ್ಲಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಎಂಟ್ರಿ!

By Suvarna News  |  First Published Jun 21, 2021, 2:31 PM IST

* ದೇಶಾದ್ಯಂತ ಸದ್ದು ಮಾಡಿದ್ದ ಕರ್ನಾಟಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

* ಡಿಸಿ ಪ್ರಕರಣಕ್ಕೆ ಎಂಟ್ರಿ ಕೊಟ್ಟ ಹಿರಿಯ ವಕೀಲೆ ಇಂದಿರಾ ಜೈಸಿಂಗ್

* ಪ್ರಕರಣದಲ್ಲಿ ಸಂತ್ರಸ್ತ ಯುವತಿ ಪರ ವಕಾಲತ್ತು ನಡೆಸಲಿದ್ದಾರೆ ಇಂದಿರಾ ಜೈಸಿಂಗ್


ಬೆಂಗಳೂರು(ಜೂ.21): ದೇಶಾದ್ಯಂತ ಸದ್ದು ಮಾಡಿದ್ದ ಕರ್ನಾಟಕದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಪದ್ಮಶ್ರೀ ಪುರಸ್ಕೃತ ವಕೀಲೆ ಇಂದಿರಾ ಜೈಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಲಿಂಗ ಅಸಮಾನತೆ ಹಾಗೂ ಮಾನವ ಹಕ್ಕುಗಳ ಹೋರಾಟ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಇಂದಿರಾ ಜೈಸಿಂಗ್ ಈ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಪರ ವಕಾಲತ್ತು ವಹಿಸಲಿದ್ದಾರೆ.

ಹೌದು ನಿರ್ಭಯಾ ಅತ್ಯಾಚಾರ ನಡೆಸಿದ ದೋಷಿಗಳನ್ನು ಕ್ಷಮಿಸಿ ಎಂದು ಸಂತ್ರಸ್ತೆಯ ತಾಯಿಗೆ ಸಲಹೆ ನೀಡಿ ಸದ್ದು ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಇಂದಿರಾ ಜೈಸಿಂಗ್ ಈಗ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯುವತಿ ಪರ ವಕಾಲತ್ತು ನಡೆಸುವುದು ಖಚಿತವಾಗಿದೆ. ಹೀಗಿರುವಾಗ ಈ ವಿಚಾರ ಕೊಟ್ಟಿರುವ ವಿಚಾರ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಅಲ್ಲದೇ ಎಸ್ಐಟಿ ತನಿಖೆ ನಿರ್ಣಾಯಕ ಹಂತ ತಲುಪಿರುವ ಸಂದರ್ಭದಲ್ಲಿ ಇಂದಿರಾರವರು ಈ ಪ್ರಕರಣದ ವಕಾಲತ್ತು ನಡೆಸಲು ಮುಂದಾಗಿರುವುದು ಭಾರೀ ಕುತೂಹಲ ಕೆರಳಿಸಿದೆ. 

Latest Videos

undefined

ಸೋನಿಯಾರಂತೆ ದೋಷಿಗಳನ್ನು ಕ್ಷಮಿಸಿ: ನಿರ್ಭಯಾ ತಾಯಿಗೆ ವಕೀಲೆಯ ಸಲಹೆ

ಇಂತಹ ಸಂದರ್ಭದಲ್ಲಿ ಜೂನ್ 23 ರಂದು ಈ ಪ್ರಕರಣ ಯಾವ ಸ್ವರೂಪ ಪಡೆಯಲಿದೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಯಾಕೆಂದರೆ ಎಸ್ಐಟಿ ಅಧಿಕಾರಿಗಳ ತನಿಖೆ ಬಗ್ಗೆ ನನಗೆ ನಂಬಿಕೆ ಇಲ್ಲ. ಹೀಗಾಗಿ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ನನ್ನ ವಾದವನ್ನು ಆಲಿಸಿ ಎಂದು ಸಂತ್ರಸ್ತ ಯುವತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಿರುವಾಗ ಸಂತ್ರಸ್ತ ಯುವತಿ ಪರ ವಕೀಲೆ ಇಂದಿರಾರವರು ವಾದ ನಡೆಸಲಿದ್ದಾರೆ. 

ಇನ್ನು ಇಂದಿರಾರವರ ಬಳಿ ತನ್ನ ಪ್ರಕರಣದಲ್ಲಿ ವಕಾಲತ್ತು ನಡೆಸಲು ಯುವತಿ ಮನವಿ ಮಾಡಿಕೊಂಡರೇ ಅಥವಾ ವಕೀಲೆ ಖುದ್ದು ಈ ಪ್ರಕರಣದಲ್ಲಿ ಯುವತಿಗೆ ನ್ಯಾಯ ಕೊಡಿಸಲು ಮುಂದಾಗಿದ್ದಾರೆಯೇ? ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಅದೇನಿದ್ದರೂ ಮಾನವ ಹಕ್ಕುಗಳ ಹೋರಾಟ ಹಾಗೂ ರಕ್ಷಣೆ ವಿಚಾರದಲ್ಲಿ ಖ್ಯಾತಿ ಗಳಿಸಿರುವ ಇಂದಿರಾ ಜೈಸಿಂಗ್, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ಪ್ರಕರಣಕ್ಕೆ ಎಂಟ್ರಿ ಕೊಟ್ಟಿರುವುದು ಅನೇಕರನ್ನು ಅಚ್ಚರಿಗೀಡು ಮಾಡಿದೆ.

ಯಾರು ಈ ಇಂದಿರಾ ಜೈಸಿಂಗ್?

ಇಂದಿರಾ ಜೈಸಿಂಗ್ ಲಿಂಗ ಅಸಮಾನತೆ ಹಾಗೂ ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುವಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಇಂದಿರಾ ಜೈಸಿಂಗ್ ಅವರ ಸೇವೆ ಗುರುತಿಸಿ 2005ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2018ರಲ್ಲಿ ಫಾರ್ಚ್ಯೂನ್ ಮ್ಯಾಗಝೀನ್ ಪ್ರಕಟಿಸಿದ ವಿಶ್ವದ 50 ಪ್ರಭಾವಿಗಳ ಪಟ್ಟಿಯಲ್ಲಿ ಇಂದಿರಾ ಜೈಸಿಂಗ್ ಕೂಡ ಒಬ್ಬರಾಗಿದ್ದರು. ಮಾನವ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಅವರು ಮಾಡಿರುವ ಕಾನೂನು ಸಮರ ಮಹತ್ವದ್ದು. ಇದೆಲ್ಲವನ್ನೂ ಹೊರತುಪಡಿಸಿ ಅಡಿಷನಲ್ ಸಾಲಿಸಟರ್ ಜನರಲ್ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳಾ ವಕೀಲೆ ಎಂಬ ಕೀರ್ತಿ ಜೈಸಿಂಗ್ ಅವರದ್ದಾಗಿದೆ.

ನಿಮಗೆಷ್ಟು ಧೈರ್ಯ?: ತಾಯಿಯ ಕೋಪದ ಕಂಗಳಲ್ಲಿ ಕಂಡಳು ನಿರ್ಭಯಾ!

ಜೈಸಿಂಗ್ ಅವರು ಈ ಹಿಂದೆ ನಿರ್ಭಯಾ ಪ್ರಕರಣದ ದೋಷಿಗಳನ್ನು ಕ್ಷಮಿಸುವಂತೆ, ಸಂತ್ರಸ್ತೆಯ ತಾಯಿ ಆಶಾ ದೇವಿ ಬಳಿ ಮನವಿ ಮಾಡಿಕೊಂಡಿದ್ದರು.  'ಆಶಾ ದೇವಿ ನೋವು ಏನೆಂದು ನನಗೆ ತಿಳಿದಿದೆ. ಆದರೂ ರಾಜೀವ್ ಹಂತಕಿ ನಳಿನಿಯನ್ನು ಕ್ಷಮಿಸಿ, ಮೃತ್ಯುದಂಡ ನೀಡುವುದು ಬೇಡ ಎಂದಿದ್ದ  ಸೋನಿಯಾ ಗಾಂಧಿ ಉದಾಹರಣೆಯನ್ನು ಅನುಸರಿಸಬೇಕೆಂದು ಆಶಾ ಸಿಂಗ್ ಬಳಿ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಾನು ನಿಮ್ಮೊಂದಿಗಿದ್ದೇನೆ, ಆದರೆ ಗಲ್ಲು ಶಿಕ್ಷೆ ವಿರೋಧಿಸುತ್ತೇನೆ' ಎಂದಿದ್ದರು. ಅವರ ಈ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅತ್ತ ನಿರ್ಭಯಾ ತಾಯಿ ಆಶಾ ದೇವಿ ಕೂಡಾ ಮಗಳನ್ನು ಅತ್ಯಾಚಾರಗೈದ ಅಪರಾಧಿಗಳನ್ನು ಕ್ಷಮಿಸಿ ಎನ್ನಲು ಅವರಿಗೆಷ್ಟು ಧೈರ್ಯ ಎಂದು ಸಿಡಿದಿದ್ದರು. 

click me!