
ಲಖನೌ (ಅ.17): 2027ರಲ್ಲಿ ನಡೆಯುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಸಿಎಂ ಯೋಗಿ ಆದಿತ್ಯನಾಥ್ ಅವರು ನಿರಂತರ 3ನೇ ಅವಧಿಗೂ ಅದೇ ಹುದ್ದೆಯಲ್ಲಿ ಮುಂದುವರಿಯಲ್ಲಿದ್ದಾರೆ ಎಂದು ಪಿ-ವ್ಯಾಲ್ಯೂ ಅನಾಲಿಟಿಕ್ಸ್ ಜತೆಗೂಡಿ ನ್ಯೂಸ್18 ನಡೆಸಿದ ಸಮೀಕ್ಷೆ ಹೇಳಿದೆ.
ಸಮೀಕ್ಷೆ ಅನ್ವಯ, ಶೇ.66.6ರಷ್ಟು ಮಂದಿ ಬಿಜೆಪಿ ನೇತೃತ್ವದ ಎನ್ಡಿಎಗೆ, ಶೇ.26.4ರಷ್ಟು ಮಂದಿ ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮತ್ತು ಶೇ.5.4ರಷ್ಟು ಮಂದಿ ಬಿಎಸ್ಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ, ಶೇ.66.6ರಷ್ಟು ಜನ ಎನ್ಡಿಎ ಸರ್ಕಾರ ರಚಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಎಸ್ಪಿ-ಕಾಂಗ್ರೆಸ್ ಸರ್ಕಾರ ರಚಿಸಲಿವೆ ಎಂದು ಶೇ.26.5ರಷ್ಟು ಜನ ನಂಬಿದ್ದಾರೆ.
ಮುಂದಿನ ಚುನಾವಣೆ ವೇಳೆ ಮತದಾರರ ನಿರ್ಧಾರವನ್ನು ಪ್ರಭಾವಿಸಬಹುದಾದ 5 ಪ್ರಮುಖ ಅಂಶಗಳಲ್ಲಿ ಪ್ರಮುಖವಾಗಿದ್ದು ಕಾನೂನು ಸುವ್ಯವಸ್ಥೆಯಾಗಿದೆ. ಹೀಗೆಂದು ಶೇ.33.4 ಮಂದಿ ಹೇಳಿದ್ದಾರೆ. ಉಳಿದಂತೆ ಮತ ಚಲಾಯಿಸುವ ವೇಳೆ ಉದ್ಯೋಗ ಮತ್ತು ಉದ್ಯೋಗ ಸೃಷ್ಟಿಗೆ ಶೇ.21.4ರಷ್ಟು ಮತದಾರರು, ಹಣದುಬ್ಬರಕ್ಕೆ ಶೇ.19.2 ಮಂದಿ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಜೆನ್ ಝೀ ಪ್ರತಿಭಟನೆಗಳಿಗೆ ಶೇ.10.4 ಜನ, ರೈತರ ಪರಿಸ್ಥಿತಿಗೆ ಶೇ.5.1ರಷ್ಟು ಜನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ