ಉಪಗ್ರಹ ಇಂಟರ್ನೆಟ್ ಸಮರ: ಎಲಾನ್ ಮಸ್ಕ್‌ ಟೀಕೆಗೆ ಅಂಬಾನಿ ಕೊಟ್ಟ ಖಡಕ್ ಎಚ್ಚರಿಕೆ ಏನು?

Published : Oct 17, 2026, 07:05 AM IST
Mukesh Ambani Elon Musk

ಸಾರಾಂಶ

ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಕುರಿತು ಎಲಾನ್ ಮಸ್ಕ್ ಅವರ ಟೀಕೆಗಳಿಗೆ ರಿಲಯನ್ಸ್ ಜಿಯೋ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಸ್ಟಾರ್‌ಲಿಂಕ್ ಸೇರಿದಂತೆ ಎಲ್ಲರ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ಹೇಳಿರುವ ಜಿಯೋ, ಪ್ರತಿಯೊಬ್ಬರೂ ಭಾರತೀಯ ಕಾನೂನುಗಳಿಗೆ ಬದ್ಧವಾಗಿರಬೇಕು ಎಂದು ಸ್ಪಷ್ಟಪಡಿಸಿದೆ.

ನವದೆಹಲಿ: ಉಪಗ್ರಹ ಆಧಾರಿತ ಇಂಟರ್ನೆಟ್‌ ಸೇವೆಗೆ ಅನುಮತಿ ವಿಚಾರವಾಗಿ ಉದ್ಯಮಿ ಎಲಾನ್ ಮಸ್ಕ್‌ ಅವರು ಕಳೆದ ಕೆಲವು ದಿನಗಳಿಂದ ಮಾಡುತ್ತಿರುವ ಟೀಕೆಗಳಿಗೆ ರಿಲಯನ್ಸ್‌ ಜಿಯೋ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದೆ. ಗ್ರಾಹಕರಿಗೆ ಯಾರು ಉತ್ತಮ ಸೇವೆ ಒದಗಿಸುತ್ತಾರೆ ಎಂಬುದಕ್ಕೆ ಸ್ಪರ್ಧಾತ್ಮಕ ಮಾರುಕಟ್ಟೆಯು ನಿಜವಾದ ಪರೀಕ್ಷೆ ಎಂದು ಭಾವಿಸಿದ್ದು, ಸ್ಟಾರ್‌ ಲಿಂಕ್‌ ಸೇರಿ ಎಲ್ಲರಿಂದಲೂ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ಹೇಳಿದೆ. ಆದರೆ, ಪ್ರತಿಯೊಬ್ಬ ಸೇವಾದಾರನೂ ಭಾರತೀಯ ಕಾನೂನು, ನೀತಿಗಳಿಗೆ ಬದ್ಧವಾಗಿರುವುದು ಅತ್ಯಗತ್ಯ ಎಂದು ತಿಳಿಸಿದೆ.

ಯಾವುದೇ ಸ್ಪರ್ಧೆಗೆ ಹೆದರಿಲ್ಲ

ಉಪಗ್ರಹ ಆಧಾರಿತ ಇಂಟರ್ನೆಟ್‌ ಸೇವೆಯಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಮಸ್ಕ್‌ ಹೇಳಿಕೊಂಡಿದ್ದರು. ಇದಕ್ಕೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ರಿಲಯನ್ಸ್‌, ಸದ್ಯ ರಿಲಯನ್ಸ್‌ ಯಾವುದೇ ಸ್ಪರ್ಧೆಗೆ ಹೆದರಿಲ್ಲ ಎಂದಿದೆ.

ವಿಶ್ವದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಡೇಟಾ

ಜಿಯೋ 2016ರಲ್ಲಿ ಹೊಸ ಟೆಲಿಕಾಂ ಸೇವಾದಾರನಾಗಿ ಭಾರತದ ಭಾರೀ ಸ್ಪರ್ಧಾತ್ಮಕತೆಯ ಮಾರುಕಟ್ಟೆಗೆ ಪ್ರವೇಶಿಸಿತು. ಈ ಕ್ಷೇತ್ರಕ್ಕೆ ಕಾಲಿಡುವಾಗ ಸಂಸ್ಥೆ ಬಳಿ ಒಬ್ಬನೇ ಒಬ್ಬ ಸೇವಾದಾರನೂ ಇರಲಿಲ್ಲ, ಇದಾಗಿ 10 ವರ್ಷಗಳಲ್ಲಿ ಕಂಪನಿ 53 ಕೋಟಿ ಗ್ರಾಹಕರನ್ನು ಹೊಂದಿದೆ. ಭಾರತೀಯರಿಗೆ ಅತ್ಯುತ್ತಮ ಡಿಜಿಟಲ್‌ ಮೂಲಸೌಕರ್ಯ ಮತ್ತು ವಿಶ್ವದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಡೇಟಾ ಒದಗಿಸುತ್ತಿದೆ ಎಂದು ಹೇಳಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಉಪಗ್ರಹ ಇಂಟರ್ನೆಟ್ ಸಮರ - ಎಲಾನ್ ಮಸ್ಕ್‌ ಟೀಕೆಗೆ ಅಂಬಾನಿ ಕೊಟ್ಟ ಖಡಕ್ ಎಚ್ಚರಿಕೆ ಏನು?
ಬುಕಿಂಗ್ ಆದ 3 ಗಂಟೆಯಲ್ಲೇ ವಿಲ್ಲಾ ಖಾಲಿ ಮಾಡಿಸಿದ್ದ ಕಂಪನಿ, ₹1.40 ಲಕ್ಷ ಗೆದ್ದ ನಾಲ್ವರು ಮಹಿಳೆಯರು