ಗೆಳತಿಯರು ಟಿಫೀನ್‌ಗೆ ಹೋಗಿದ್ದಾಗ ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ, ಪೊಲೀಸರು ಸಿಸಿಟಿವಿ ಪರಿಶಿಲಿಸಿದಾಗ ಶಾಕ್!

Published : Oct 30, 2026, 09:36 AM IST
Nursing students dead in Up

ಸಾರಾಂಶ

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ 18 ವರ್ಷದ ಜಿಎನ್‌ಎಂ ನರ್ಸಿಂಗ್ ವಿದ್ಯಾರ್ಥಿನಿ ಪ್ರೀತಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಧ್ಯರಾತ್ರಿ ಹಾಸ್ಟೆಲ್ ಗೋಡೆ ಹಾರಿ ಹೊರಹೋಗಿದ್ದ ಈಕೆಯ ಕೊಲೆಗೆ ಕಾಲೇಜು ಪ್ರಾಂಶುಪಾಲ ಮತ್ತು ಅವರ ಮಗನೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಫಿರೋಜಾಬಾದ್ (ಅ.30): ಉತ್ತರ ಪ್ರದೇಶ ಪೊಲೀಸ್ ವ್ಯವಸ್ಥೆ ಕಠಿಣವಾಗಿದ್ದರೂ ಕ್ರಿಮಿನಲ್ ಪ್ರಕರಣಗಳ ಪ್ರಮಾಣ ಕಡಿಮೆಯಾಗುತ್ತಿಲ್ಲ. ಇದೀಗ ಮತ್ತೊಂದು ಶಾಕಿಂಗ್ ಘಟನೆ ಫಿರೋಜಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. 18 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಅನುಮಾನಸ್ಪಾದ ರೀತಿ ಶವವಾಗಿ ಪತ್ತೆಯಾಗಿದ್ದು, ಕಾಲೇಜು ಪ್ರಾಂಶುಪಾಲ ಮತ್ತು ಅವರ ಮಗನ ವಿರುದ್ಧವೇ ಕೊಂದ ಆರೋಪ ಕೇಳಿಬಂದಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಹೇಳುವ ಪ್ರಕಾರ, ಮೃತ ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಬಂಧಿಸುವವರಿಗೆ ಶವ ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದರು. ಆದರೆ ಪೊಲೀಸ್ ಅಧಿಕಾರಿಗಳ ಮನವೊಲಿಕೆ ನಂತರ ಕುಟುಂಬಸ್ತರು ಸ್ವೀಕರಿಸಿದರು ಎಂದು ತಿಳಿಸಿದ್ದಾರೆ.

ಪ್ರಥಮ ವರ್ಷದ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿ

ಮೂಲತಃ ಮೈನ್‌ಪುರಿ ಜಿಲ್ಲೆ ನಿವಾಸಿಯಾದ ಮೃತ ವಿದ್ಯಾರ್ಥಿನಿ ಪ್ರೀತಿ ಫಿರೋಜಾಬಾದ್ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ(GNM) ಓದುತ್ತಿದ್ದರು. ಬುಧವಾರ ಬೆಳಗ್ಗೆ ಆಕೆಯ ಹಾಸ್ಟೆಲ್‌ನ ಗೆಳತಿಯರು ಟಿಫೀನ್ ಮಾಡಲು ಹೊರಗೆ ಹೋಗಿದ್ದಾಗ ಪ್ರೀತಿ ಕಾಣೆಯಾಗಿದ್ದಳು.ಕೋಣೆಯಲ್ಲಿ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.

ಪೊಲೀಸರು ಹಾಸ್ಟೆಲ್‌ನಲ್ಲಿ ಅಳಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮೃತ ವಿದ್ಯಾರ್ಥಿನಿ ಪ್ರೀತಿ ಬೆಳಗಿನ ಜಾವ 2.30 ರ ಸುಮಾರಿಗೆ ಆವರಣ ಗೋಡೆಯನ್ನು ಹತ್ತಿರುವುದು ಕಂಡುಬಂದಿದೆ. ನಂತರ ಒಂಟಿಯಾಗಿ ಕಾಲೇಜು ಆವರಣದಿಂದ ಹೊರಬರುತ್ತಿರುವುದು ಸಹ ಸೆರೆಯಾಗಿದೆ ಪೊಲೀಸ್ ಅಧಿಕಾರಿ ತ್ರಿಪಾಠಿ ಹೇಳಿದ್ದಾರೆ.

ಮೌಡಾ ಕನೆಟಾ ಗ್ರಾಮದ ಬಳಿ ಶವವಾಗಿ ಪತ್ತೆ!

ಅದರ ನಂತರ ಮೌಡಾ ಕನೆಟಾ ಗ್ರಾಮದ ಬಳಿ ಮಹಿಳೆಯೊಬ್ಬರ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅದು ಕಾಣೆಯಾಗಿದ್ದ ವಿದ್ಯಾರ್ಥಿನಿ ಪ್ರೀತಿ ಅವರದ್ದು ಎಂದು ಗುರುತಿಸಲಾಗಿದೆ. ಹಾಗಾದ್ರೆ ಪ್ರೀತಿಯನ್ನು ಕೊಂದಿದ್ದು ಯಾರು? ಯಾಕಾಗಿ ಹಾಸ್ಟೆಲ್‌ನಿಂದ ಹೊರಹೋಗಿದ್ದು? ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಾಂಶುಪಾಲ ಮತ್ತು ಮಗನ ಮೇಲೆಯೇ ಕುಟುಂಬಸ್ಥರ ಆರೋಪ

ನನ್ನ ತಂಗಿಯನ್ನು ಕೊಂದಿದ್ದು ಕಾಲೇಜು ಪ್ರಾಂಶುಪಾಲ ಸುರೇಶ ದಕ್ಷ ಮತ್ತು ಅವರ ಮಗ ಯಶ್ ಎಂದು ಪ್ರೀತಿ ಸಹೋದರ ರೋಹಿತ್ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಸಂಬಂಧ ಬಿಎನ್‌ಎಸ್ ಸೆಕ್ಷನ್ 103(1)ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜನರ ಭವಿಷ್ಯ ಹೇಳುತ್ತಿದ್ದ ಜ್ಯೋತಿಷಿಗೆ ಶಾಕ್: MLC ಚುನಾವಣೆಯಲ್ಲಿ ಖ್ಯಾತ ಜ್ಯೋತಿಷಿ ಪತ್ನಿಗೆ ಹೀನಾಯ ಸೋಲು!
ಕ್ಯಾಲ್ಕುಲೇಟರ್‌ಗೆ ಸವಾಲ್: 16ರ ಹರೆಯದಲ್ಲೇ 9 ಗಿನ್ನೆಸ್ ದಾಖಲೆ ಮುರಿದ ಭಾರತದ 'ಹ್ಯೂಮನ್ ಕಂಪ್ಯೂಟರ್'!