
Fact Check: ದೇವಸ್ಥಾನದ ಚಿತ್ರವಿರುವ ಹಳದಿ ಬಣ್ಣದ ಹೊಸ 1,000 ರು. ಮುಖಬೆಲೆಯ ನೋಟು ಬಿಡುಗಡೆಯಾಗಿದ್ದು, ನ.15ರಿಂದ ಈ ನೋಟು ಚಲಾವಣೆಗೆ ಬರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ₹1,000 ನೋಟು ಬಿಡುಗಡೆ ಮಾಡುವ ಕುರಿತು ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ಫ್ಯಾಕ್ಟ್ ಚೆಕ್ ಘಟಕ ಸ್ಪಷ್ಟಪಡಿಸಿದೆ.
ಆರ್‌ಬಿಐನ ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸಿದಾಗ ಹೊಸ 1,000 ರು. ನೋಟು ಬಿಡುಗಡೆ ಕುರಿತು ಯಾವುದೇ ಘೋಷಣೆ ಕಂಡುಬಂದಿಲ್ಲ. ಹೀಗಾಗಿ ವೈರಲ್ ಸುದ್ದಿಯನ್ನು ನಕಲಿ ಎಂದು ಗುರುತಿಸಿದೆ. 2016ರ ನ.8ರಂದು ಹಳೆಯ ₹500 ಮತ್ತು ₹1,000 ನೋಟುಗಳನ್ನು ಅಮಾನ್ಯಗೊಳಿಸಲಾಗಿತ್ತು. ಪ್ರಸ್ತುತ ₹10, ₹20, ₹50, ₹100, ₹200 ಮತ್ತು ₹500 ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿ ಇವೆ.
ಹೀಗಿರುವಾಗ, ಹೊಸ ₹1,000 ನೋಟು ಬಿಡುಗಡೆಯಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಪುರಾವೆ ಇಲ್ಲ ಹಾಗೂ ಈ ಸುದ್ದಿ ಸಂಪೂರ್ಣ ಹುಸಿ.
🚨 FAKE ₹1,000 NOTE ALERT!
Several social media posts claim that a new ₹1,000 note has been issued.
#PIBFactCheck
❌ This claim is fake.
✅ The @RBI has made no announcement regarding the issuance of a new ₹1,000 note.
🔸 Verify information through official sources and do not share unverified claims.
💡 Come across suspicious content related to the Central Government? Report it to @PIBFactCheck.
📲 +91 8799711259
📩 factcheck@pib.gov.in
— PIB Fact Check (@PIBFactCheck) October 27, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ