ಸರ್ಕಾರಕ್ಕೆ 4  ವರ್ಷ, ತಮ್ಮ ಟಾರ್ಗೆಟ್ ಬಹಿರಂಗ ಮಾಡಿದ ಯೋಗಿ

Published : Mar 19, 2021, 04:15 PM IST
ಸರ್ಕಾರಕ್ಕೆ 4  ವರ್ಷ, ತಮ್ಮ ಟಾರ್ಗೆಟ್ ಬಹಿರಂಗ ಮಾಡಿದ ಯೋಗಿ

ಸಾರಾಂಶ

ಯೋಗಿ ಸರ್ಕಾರಕ್ಕೆ ನಾಲ್ಕು ವರ್ಷ/ ವರದಿ ಮಂಡಿಸಿದ ಸಿಎಂ ಯೋಗಿ ಆದಿತ್ಯನಾಥ್/ ಉತ್ತರ ಪ್ರದೇಶ ದೇಶದ ಅತಿದೊಡ್ಡ ಆರ್ಥಿಕ ವಲಯವಾಗಲಿದೆ/ ಕೇಂದ್ರ ಸರ್ಕಾರದ ನೆರವಿನೊಂದಿಗೆ ಅಭಿವೃದ್ಧಿ ಯೋಜನೆಗಳು 

ಲಕ್ನೋ(ಮಾ. 19)  ಉತ್ತರ ಪ್ರದೇಶವನ್ನು ದೇಶದ ಅತಿದೊಡ್ಡ ಆರ್ಥಿಕ ಕ್ಷೇತ್ರವನ್ನಾಗಿ ಮಾಡುವ ಗುರಿ ಇದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳ ಪೂರ್ಣಗೊಂಡ ನಂತರ ಸರ್ಕಾರದ ಸಾಧನೆಗಳನ್ನು ಒಳಗೊಂಡ  ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

'ರಾಜ್ಯ ಸರ್ಕಾರವನ್ನು ಸತತವಾಗಿ ಬೆಂಬಲಿಸಿದ್ದಕ್ಕಾಗಿ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಶೀಘ್ರದಲ್ಲೇ ಜಿಎಸ್ ಡಿಪಿ ದೃಷ್ಟಿಯಿಂದ ಉತ್ತರ ಪ್ರದೇಶ ಅತಿದೊಡ್ಡ ಕೊಡುಗೆ  ನೀಡುವ ರಾಜ್ಯವಾಗಲಿದೆ ಎಂದರು.

ಕಳೆದ ನಾಲ್ಕು ವರ್ಷಗಳಲ್ಲಿ ಯುಪಿ ದೇಶದ ಬೆಳವಣಿಗೆಯ ಎಂಜಿನ್ ಆಗಿ ಹೊರಹೊಮ್ಮಿದೆ. ಒಟ್ಟು ರಾಜ್ಯ ದೇಶೀಯ ಉತ್ಪನ್ನದ (ಜಿಎಸ್ಡಿಪಿ) ದೃಷ್ಟಿಯಿಂದ ರಾಜ್ಯ ಭಾರತದ ಅತಿದೊಡ್ಡ ಆರ್ಥಿಕತೆಯನ್ನು ರೂಪಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

'ಲವ್ ಜಿಹಾದ್ ತಡೆಯದೇ ಕೇರಳ ನಿದ್ದೆ ಹೊಡೆಯುತ್ತಿದೆ'

ಹಿಂದಿನ ಯುಪಿಎ ಸರ್ಕಾರ ಯಾವ ಹೊಸ ಯೋಜನೆಗಳನ್ನು ನೀಡದೇ ಉತ್ತರ ಪ್ರದೇಶವನ್ನು ಸೈಡ್ ಲೈನ್ ಮಾಡಿತ್ತು. ರಾಜ್ಯದ ಆರ್ಥಿಕತೆ ಹಳ್ಳ ಹಿಡಿದಿತ್ತು ಎಂದು ಆರೋಪಿಸಿದರು.

2017 ರಲ್ಲಿ, ನಾವು ಸರ್ಕಾರ ರಚಿಸಿದಾಗ, ರಸ್ತೆಗಳು, ಶಾಲೆಗಳು ಅಥವಾ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲದ ಅನೇಕ ಗ್ರಾಮಗಳು ಇದ್ದವು. ಕೆಲವು ಬುಡಕಟ್ಟು ಹಳ್ಳಿಗಳಲ್ಲಿ ಜನರಿಗೆ ಮತದಾನದ ಹಕ್ಕು ಕೂಡ ಇರಲಿಲ್ಲ ಅದೆಲ್ಲವನ್ನು ಬದಲಾಯುಸುತ್ತ ಬಂದೆವು ಎಂದು ತಿಳಿಸಿದರು.

ಆರೋಗ್ಯ ವಿಭಾಗದಲ್ಲಿ ರಾಜ್ಯ ಅತಿ ಹಿಂದುಳಿದಿದೆ ಎಂದು ಹೇಳಲಾಗಿತ್ತು. ಆದರೆ ಈಗ ನಮ್ಮ COVID ನಿರ್ವಹಣೆಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಮೆಚ್ಚಿದೆ ಎಂದರು.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಕಾಲ ಆಡಳಿತ ಮಾಡಿದ ಬಿಜೆಪಿ ಸಿಎಂ ಎಂಬ ಹಿರಿಮೆಗೂ ಆದಿತ್ಯನಾಥ್ ಪಾತ್ರವಾಗಿದ್ದಾರೆ. 

ಉತ್ತರಪ್ರದೇಶದಲ್ಲಿ ಭಾರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆದಿತ್ಯನಾಥ್ ಅವರನ್ನು 2017 ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಎಂದು ಹೆಸರಿಸಲಾಯಿತು. ವಿಪಕ್ಷಗಳು ಮಾತ್ರವಲ್ಲದೆ ತಮ್ಮದೆ ಪಕ್ಷಗಳಿಂದ ಯೋಗಿ ಸವಾಲುಗಳನ್ನು ಎದುರಿಸಬೇಕಾಗಿ ಬಂತು.

ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಯಿತು. ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆಯಲ್ಲಿ 1.30 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಯಿತು.

 ಇಲ್ಲಿಯವರೆಗೆ, 1.35 ಲಕ್ಷ ಪ್ರಾಥಮಿಕ ಶಾಲೆಗಳನ್ನು ಪುನಶ್ಚೇತನಗೊಳಿಸಲಾಗಿದೆ  ಎಂದು ಸರ್ಕಾರ ಹೇಳಿದೆ. ಪೋಷಕರಿಗೆ ತಿಳಿವಳಿಕೆ ನೀಡಿ ಮಕ್ಕಳು ಶಾಲೆ  ತೊರೆಯುವ ಸಂಖ್ಯೆ ಕಡಿಮೆ ಮಾಡಲಾಯಿತು. 

ಯೋಗಿ ಆಡಳಿತದಲ್ಲಿ ಮೂರು ರಾಜ್ಯ ವಿಶ್ವವಿದ್ಯಾಲಯಗಳು, 51 ಹೊಸ ಸರ್ಕಾರಿ ಕಾಲೇಜುಗಳು, 194 ಹೊಸ ಸರ್ಕಾರಿ ಮಾಧ್ಯಮಿಕ ಶಾಲೆಗಳು, 28 ಎಂಜಿನಿಯರಿಂಗ್ ಕಾಲೇಜುಗಳು, 26 ಪಾಲಿಟೆಕ್ನಿಕ್‌ಗಳು, 79 ಐಟಿಐಗಳು, 248 ಅಂತರ ಕಾಲೇಜುಗಳು ಮತ್ತು 771 ಕಸ್ತೂರ್ಬಾ ಶಾಲೆಗಳನ್ನು ಸ್ಥಾಪಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಶಿಲ್ಪಾ ಶೆಟ್ಟಿ ಅವರ ಎಐ ಫೋಟೋ ತೆಗೆಯಲು ಕೋರ್ಟ್ ಆದೇಶ
ಬಾಂಗ್ಲಾ ಹಿಂದೂ ಹಂತಕರ ಶಿಕ್ಷಿಸಿ : ಭಾರತ ಆಗ್ರಹ