UP Election: ಮೈನಪುರಿಯ ಕರಹಲ್ ನಲ್ಲಿ ಎಸ್‌ಪಿ-ಬಿಜೆಪಿ ಜಿದ್ದಾಜಿದ್ದಿ

By Prashant NatuFirst Published Feb 19, 2022, 1:50 PM IST
Highlights

ಮೈನಪುರಿಯ (Mainpuri) ಕರಹಲ್ ನ ಕಣ ರಂಗೇರಿದ್ದು ಸ್ವತಃ ಅಖಿಲೇಶ್ ಯಾದವ್ (Akhilesh Yadav) ಅಲ್ಲಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿದಿದ್ದಾರೆ. ಯಾದವ ಮತ್ತು ದಲಿತ  ಬಾಹುಳ್ಯದ ಕ್ಷೇತ್ರದಲ್ಲಿ ಹಾಗೆ ನೋಡಿದರೆ ಅಖಿಲೇಶ ಯಾದವ್ ಸುಲಭವಾಗಿ ಗೆಲ್ಲಬೇಕು. 

ಫೆಬ್ರವರಿ 20 ರಂದು ಯುಪಿ ಯ 59 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಅವಧ್ ಮತ್ತು ಬುಂದೇಲ ಖಂಡ ದ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.ಈ 59 ಕ್ಷೇತ್ರಗಳಲ್ಲಿ 29 ಕ್ಷೇತ್ರಗಳು ಕಟ್ಟಾ ಯಾದವ ಬಾಹುಳ್ಯ ಕ್ಷೇತ್ರಗಳು.2017 ರಲ್ಲಿ ಯಾದವ ಬಾಹುಳ್ಯದ 29 ಕ್ಷೇತ್ರಗಳಲ್ಲಿ 23 ರಲ್ಲಿ ಬಿಜೆಪಿ ಗೆದ್ದಿತ್ತು.ಅದಕ್ಕೆ ಪ್ರಮುಖ ಕಾರಣ ಯಾದವ ಮುಸ್ಲಿಂ ಸಮಿಕರಣದ ವಿರುದ್ಧ ಯಾದವೇತರ ಸಮುದಾಯ ಗಳು ಒಟ್ಟಿಗೆ ಬಂದಿದ್ದು.

Hijab Row: ಬಿಜೆಪಿಗೆ ರಾಜಕಿಯ ಲಾಭದ ನಿರೀಕ್ಷೆ, ಕಾಂಗ್ರೆಸ್ ವೋಟ್ ಕಳೆದುಕೊಳ್ಳುವ ಆತಂಕ

ಅದರಲ್ಲೂ ಮೈನಪುರಿಯ ಕರಹಲ್ ನ ಕಣ ರಂಗೇರಿದ್ದು ಸ್ವತಃ ಅಖಿಲೇಶ್ ಯಾದವ್ ಅಲ್ಲಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿದಿದ್ದಾರೆ.ಯಾದವ ಮತ್ತು ದಲಿತ  ಬಾಹುಳ್ಯದ ಕ್ಷೇತ್ರದಲ್ಲಿ ಹಾಗೆ ನೋಡಿದರೆ ಅಖಿಲೇಶ ಯಾದವ್ ಸುಲಭವಾಗಿ ಗೆಲ್ಲಬೇಕು. ಯಾಕೆಂದರೆ ಮೈನಪುರಿ ಅಖಿಲೇಶ್ ತಂದೆ ಮುಲಾಯಂರ ಕರ್ಮ ಭೂಮಿ.ಆದರೆ ಬಿಜೆಪಿ ಕೊನೆ ಗಳಿಗೆ ಯಲ್ಲಿ ಕೇಂದ್ರ ಸಚಿವ ಎಸ್ ಪಿ ಬಘೇಲ್ ರನ್ನು ತಂದು ನಿಲ್ಲಿಸಿದ್ದು ದಲಿತ ಸಮುದಾಯದ ಬಘೇಲ್ ರನ್ನು ಚುನಾವಣೆಗೆ ನಿಲ್ಲಿಸಿದ್ದು ಅಖಿಲೇಶ್ ರ ತಲೆ ನೋವು ಹೆಚ್ಚಿಸಿದೆ.ಕರಹಲ್ ನಲ್ಲಿ ಅಖಿಲೇಶ್ ಯಾದವ್ ರನ್ನು ಹೆಚ್ಚು ಹೊತ್ತು ಕಟ್ಟಿ ಹಾಕಲೆಂದೇ ಬಿಜೆಪಿ ಏನೆಲ್ಲ ರಣತಂತ್ರಗಳನ್ನು ಹೂಡುತ್ತಿದೆ.

ಪುತ್ರ ರಾಜ್ಯದ ಬೇರೆ ಕಡೆ ಪ್ರಚಾರದಲ್ಲಿ ತೊಡಗಿರುವುದರಿಂದ ಸ್ವತಃ ಮುಲಾಯಂ ಸಿಂಗ್ ಯಾದವ್ ಮೈನಪುರಿಗೆ ಪ್ರಚಾರಕ್ಕೆ ಹೋಗಿದ್ದು ಅಮಿತ್ ಶಾ ಕೂಡ ಹೋಗಿ  ಕರಹಲ್ ನಲ್ಲಿ  ಅಖಿಲೇಶ್ ರನ್ನು ಸೋಲಿಸಲು ಟೊಂಕ ಕಟ್ಟಿ ನಿಂತಿದ್ದಾರೆ.

Punjab Elections: ಪಂಜಾಬ್‌ನ 'ಡೇರಾ' ಪಾಲಿಟಿಕ್ಸ್, ದಲಿತ ಮತಗಳು ಬೇಕಾದರೆ ಇವರ 'ಆಶೀರ್ವಾದ' ಬೇಕೇ ಬೇಕು!

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ 2017 ರಲ್ಲಿ ಮೂರು ಪಕ್ಷದ ಮುಖ್ಯಮಂತ್ರಿಗಳು ಅಂದರೆ ಯೋಗಿ ಆದಿತ್ಯನಾಥ ಅಖಿಲೇಶ ಯಾದವ್ ಮತ್ತು ಮಾಯಾವತಿ ಚುನಾವಣೆಗೆ ನಿಂತಿರಲಿಲ್ಲ.ಅಖಿಲೇಶ ಯಾದವ್ 2012 ರಲ್ಲಿ ಮಾಯಾವತಿ 2007 ರಲ್ಲಿ ಯೋಗಿ ಆದಿತ್ಯನಾಥ 2017 ರಲ್ಲಿ ಮುಖ್ಯಮಂತ್ರಿಯಾದ ನಂತರ ವಿಧಾನಪರಿಷತ್ತಿಗೆ ಆಯ್ಕೆ ಆಗಿ ಬಂದವರು. ಆದರೆ ಈ ಬಾರಿ ಯೋಗಿ ಆದಿತ್ಯನಾಥ ಸ್ವಂತ ಕ್ಷೇತ್ರ ಗೋರಖಪುರದಿಂದ ನಿಲ್ಲಲು ತೀರ್ಮಾನಿಸಿದ ನಂತರ ಸಮಾಜವಾದಿ ಪಕ್ಷದಲ್ಲಿ ಅಖಿಲೇಶ್ ಯಾದವ್ ಕೂಡ ವಿಧಾನಸಭಾ ಚುನಾವಣೆಗೆ ನಿಲ್ಲುವುದು ಒಳ್ಳೆಯದು ಇಲ್ಲದಿದ್ದರೆ ಸರಿಯಾದ ಮೆಸೇಜ್ ಹೋಗುವುದಿಲ್ಲ ಎಂಬ ಒತ್ತಡ ಶುರುವಾಯಿತು
 
ಅಖಿಲೇಶ್ ರ ತಂದೆ ಮುಲಾಯಂ ಇಟಾವಾ ಜಿಲ್ಲೆಯ ಜಸ್ವಂತ್ ನಗರ ದಿಂದ ಸತತವಾಗಿ ಸ್ಪರ್ಧಿಸಿ ಗೆದ್ದಿದ್ದರು.ಆದರೆ ಚಿಕ್ಕಪ್ಪ ಶಿವಪಾಲ ಯಾದವ್ ಅಲ್ಲಿಂದ ಸ್ಪರ್ಧಿಸುವುದರಿಂದ ಅಖಿಲೇಶ್ ಯಾದವ ಬಾಹುಳ್ಯದ ಮೈನ ಪುರಿ ಜಿಲ್ಲೆಯ ಕ್ಷೇತ್ರವನ್ನೇ ಆಯ್ದು ಕೊಂಡಿದ್ದಾರೆ.  ಹಾಗೆ ನೋಡಿದರೆ ಬಿಜೆಪಿ ತನ್ನ ಕೇಂದ್ರ ಸಚಿವರಿಗೆ ವಿಧಾನಸಭಾ ಟಿಕೆಟ್ ಕೊಡುವುದು ಕಡಿಮೆ.ಆದರೆ ಅಖಿಲೇಶ್ ಯಾದವ್ ವಿರುದ್ಧ ಸ್ಪರ್ಧಿಸಲು ಇನ್ನೊಬ್ಬ ಯಾದವ್ ಅಭ್ಯರ್ಥಿಗೆ ಕೊಡುವುದ್ದಕ್ಕಿಂತ ದಲಿತ ಪ್ರಭಾವಿ ನಾಯಕ ಎಸ್ ಪಿ ಸಿಂಗ್ ಬಘೇಲ್ ರನ್ನು ತಂದು ಟಿಕೆಟ್ ಕೊಟ್ಟಿದೆ.ಈಗ ಮೋದಿ ಸಂಪುಟದಲ್ಲಿ ಮಂತ್ರಿ ಆಗಿರುವ ಎಸ್ ಪಿ ಸಿಂಗ್ ಬಘೇಲ್ ಒಂದು ಕಾಲದಲ್ಲಿ ಮುಲಾಯಂ ಸಿಂಗ್ ಯಾದವರ ಸೆಕ್ಯುರಿಟಿ ಅಧಿಕಾರಿ ಆಗಿದ್ದವರು.ಹೀಗಾಗಿ ಮುಲಾಯಂ ರ ರಾಜಕೀಯ ಪಟ್ಟುಗಳು ಬಘೇಲ್ ರಿಗೆ ಕರತಲಾಮಲಕ.

ಕರಹಲ್ ನ 3.71 ಲಕ್ಷ್ಯ ಮತದಾರರಲ್ಲಿ 1.44 ಲಕ್ಷ್ಯ ಯಾದವರು 14 ಸಾವಿರ ಮುಸ್ಲಿಮರು 34 ಸಾವಿರ ಶಾಕ್ಯ ರು 35 ಸಾವಿರ ದಲಿತ ಜಾಟವರು ಇದ್ದಾರೆ.ಬಿಜೆಪಿ ದಲಿತ ಅಭ್ಯರ್ಥಿ ಯನ್ನು ನಿಲ್ಲಿಸಿ ಯಾದವೇತರ ಮತದಾರರನ್ನು ಕ್ರೋಢೀಕರಿಸುವ ಪ್ರಯತ್ನ ಮಾಡುತ್ತಿದೆ

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!