ತಾನು ತನ್ನವರು, ಮನೆ ಮಠ ಯಾವುದೂ ಇಲ್ಲದೆ ರಸ್ತೆ ಬದಿ ವಾಸ ಮಾಡುವ ನಿರ್ಗತಿಕ ಅಜ್ಜಿಯೊಬ್ಬರು ತನಗೆ ಆಹಾರ ನೀಡಿದ ವ್ಯಕ್ತಿಗೆ ಹಣ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏನೂ ತೀರದ ವಯಸ್ಸಿನಲ್ಲಿಯೂ ಅಜ್ಜಿಯ ಸ್ವಾಭಿಮಾನದ ನಡೆಗೆ ಜನ ಭೇಷ್ ಎನ್ನುತ್ತಿದ್ದಾರೆ.
ಈ ವಿಡಿಯೋವನ್ನು ಘಂಟಾ ಎಂಬ ಹೆಸರಿರುವ ಇನ್ಸ್ಟಾಗ್ರಾಮ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. ನಿಮ್ಮ ಸುತ್ತ ಇರುವವರನ್ನು ಗಮನಿಸಿ, ಕೆಲವರು ಆಹಾರದ ಅಗತ್ಯವಿರುವವರು ನಿಮ್ಮ ಸುತ್ತ ಇರಬಹುದು. ಸಾಧ್ಯವಾದರೆ ಅವರಿಗೆ ಸಹಾಯ ಮಾಡಿ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬರು ರಸ್ತೆ ಬದಿ ಕುಳಿತಿದ್ದ ವಯೋವೃದ್ಧೆಯೊಬ್ಬರಿಗೆ ಒಂದು ಬಾಟಲ್ ನೀರನ್ನು ನೀಡುತ್ತಾರೆ. ನೀರನ್ನು ಅವರು ಖುಷಿಯಿಂದ ಸ್ವೀಕರಿಸುತ್ತಾರೆ. ನಂತರ ಪೊಟ್ಟಣದಲ್ಲಿ ಆಹಾರವನ್ನು ತಂದು ನೀಡುತ್ತಾರೆ. ಇದನ್ನೂ ಕೂಡ ಆಕೆ ಅಷ್ಟೇ ಖುಷಿಯಿಂದ ಸ್ವೀಕರಿಸುತ್ತಾರೆ. ಅವರ ಮುಖದಲ್ಲಿ ಖುಷಿಯು ಕಾಣಿಸುತ್ತದೆ. ಜೊತೆಗೆ ಅವರು ಕೃತಜ್ಞತೆಯಿಂದ ಕೈ ಮುಗಿಯುತ್ತಾರೆ.
ವೃದ್ಧೆಯ ಪರ್ಸ್ ಎಗ್ಗರಿಸಿದ ಕಳ್ಳನಿಗೆ ಬಿತ್ತು ಸಖತ್ ಗೂಸಾ... ಇಂಟರ್‌ನೆಟ್‌ನಲ್ಲಿ ಹೀರೋ ಆದ ಯುವಕ
ನಂತರ ಅವರು ತಮ್ಮ ಸೀರೆಯ ತುದಿಯಲ್ಲಿ ಕಟ್ಟಿದ್ದ ಗಂಟನ್ನು ಬಿಚ್ಚಿ ಅದರಿಂದ ಹಣದ ನೋಟೊಂದನ್ನು ತೆಗೆದು ನೀರು ಮತ್ತು ಆಹಾರ ನೀಡಿದವರಿಗೆ ಕೊಡುತ್ತಾರೆ. ಆದರೆ ಆ ವ್ಯಕ್ತಿ ಹಣ ಸ್ವೀಕರಿಸಲು ನಿರಾಕರಿಸುತ್ತಾರೆ. ಈ ವಿಡಿಯೋ ನೋಡಿದ ಅನೇಕರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನಮ್ಮ ಕಣ್ಣಲ್ಲಿ ನೀರು ತರಿಸಿತು. ಇದು ನಿಜವಾಗಿಯೂ ಹೃದಯ ಭಾರವಾಗಿಸಿದೆ ಎಂದು ನೋಡುಗರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ವಯಸ್ಸಾದವರು ಕೂಡ ಮಕ್ಕಳಂತೆ ಎಂಬ ಮಾತಿದೆ. ಹಾಗೆಯೇ ಇಲ್ಲೊಬ್ಬರು ಅಜ್ಜಿ ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಮೊಮ್ಮಕ್ಕಳ ಕಾಲದ ಫಾಸ್ಟ್‌ಪುಡ್ ಆಗಿರುವಂತಹ ಪಾಸ್ತಾವನ್ನು ಖುಷಿ ಖುಷಿಯಾಗಿ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು.
ನಮ್ಮಲ್ಲಿ ಹಿರಿಯರು ಈಗಿನ ಫಾಸ್ಟ್‌ಫುಡ್ ಎಂದರೆ ಇಷ್ಟ ಪಡುವುದಕ್ಕಿಂತ ಮೂಗು ಮುರಿಯುವುದೇ ಹೆಚ್ಚು. ಮಾಮೂಲಿ ಸಂಪ್ರದಾಯಿಕವಾದ ಆಹಾರಗಳನ್ನೇ ಮನೆಯ ಹಿರಿಯರು ತಿನ್ನುವುದು ಸಾಮಾನ್ಯ. ಹೊಸ ಬಗೆಯ ಆಹಾರವನ್ನು ಅವರು ತಿನ್ನಲು ನಿರಾಕರಿಸುವುದೇ ಹೆಚ್ಚು. ಆದರೆ ಇಲ್ಲಿರುವ ಅಜ್ಜಿ ಫುಲ್ ಡಿಫರೆಂಟ್. ಅವರು ಫಾಸ್ಟ್‌ಫುಡ್ ಎನಿಸಿರುವ ಪಾಸ್ತಾವನ್ನು ಬಾಯಿ ಚಪ್ಪರಿಸಿ ತಿನ್ನುತ್ತಿದ್ದು, ಬಹಳ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Business Women : ಹಾಲು ಮಾರಿ ಕೋಟ್ಯಾಧೀಶೆಯಾದ ಗುಜರಾತಿನ ವೃದ್ಧೆ!
@dash.ofdelish_17 ಎಂಬ ಇನ್ಸ್ಟಾಗ್ರಾಮ್ ಖಾತೆದಾರರು ಈ ವಿಡಿಯೋವನ್ನು ಅಪ್‌ಲೋಡ್ ಮಾಡಿ್ದಾರೆ. ವೀಡಿಯೊದಲ್ಲಿ ಅವರ ಅಜ್ಜಿ ಮೊದಲ ಬಾರಿಗೆ ಪಾಸ್ತಾವನ್ನು ಸೇವಿಸುವುದನ್ನು ನಾವು ನೋಡಬಹುದು. ವೀಡಿಯೊದಲ್ಲಿ, ಅಜ್ಜಿ 'ಕಿತ್ನಾ ಆಚಾ ಬನಾಯಾ ಹೈ, ವಾಹ್ ವಾಹ್. (ಎಷ್ಟು ರುಚಿಯಾಗಿ ಮಾಡಿದ್ದೀರಿ ವಾಹ್) ಎಂದು ಉದ್ಘರಿಸುತ್ತಾ ತಿನ್ನುವುದನ್ನು ನೋಡಬಹುದು. ಅಜ್ಜಿಯ ಮೊಮ್ಮಗಳು 'ಅಚಾ ಲಗಾ ನಾನಿ? (ನಿಮಗೆ ಇಷ್ಟವಾಯಿತೇ ಅಜ್ಜಿ) ಎಂದು ಆಕೆಯನ್ನು ಅಜ್ಜಿಯನ್ನು ಕೇಳುತ್ತಾಳೆ ಅದಕ್ಕೆ ಅಜ್ಜಿ ಉತ್ತರಿಸುತ್ತ 'ಬೋಹೊತ್ ಅಚ್ಚಾ ಹೈ, ಬ್ಯೂಟಿಫುಲ್ ಎಂದು . (ತುಂಬಾ ಚೆನ್ನಾಗಿದೆ. ಸುಂದರವಾಗಿದೆ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ