
ಲಖ್ನೋ(ಜ.31): ದೇಶದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಮಧ್ಯೆ ಕೆಲ ಮಾಧ್ಯಮಗಳು ಚುನಾವಣೋತ್ತರ ಜನಾಭಿಪ್ರಾಯ ಸಂಗ್ರಹಿಸಿದ್ದು, ಈ ಸಮೀಕ್ಷೆಯ ಪ್ರಕಾರ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಕೇಸರಿ ಪಾಳಯ ಅತಿ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಇಲ್ಲಿ ಶೇ. 41 ರಷ್ಟು ಮತಗಳನ್ನು ಪಡೆದು ಸರ್ಕಾರ ರಚಿಸಬಹುದು ಎಂದು ಸಮೀಕ್ಷೆ ತಿಳಿಸಿದೆ. ಹಾಗೆಯೇ ವಿರೋಧ ಪಕ್ಷವಾಗಿರುವ ಸಮಾಜವಾದಿ ಪಕ್ಷ ನೇತೃತ್ವದ ಮೈತ್ರಿಕೂಟವೂ ಶೇ.38ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ.
ಈ ಜನಾಭಿಪ್ರಾಯ ಸಂಗ್ರಹಿಸುವ ಸಲುವಾಗಿ ಜನವರಿ 18 ರಿಂದ ಜನವರಿ 26 ರವರೆಗೆ ಸರ್ವೇ ನಡೆಸಲಾಗಿತ್ತು. ಉತ್ತರ ಪ್ರದೇಶದಲ್ಲಿ ಒಟ್ಟು 20 ಸಾವಿರ ಜನರೊಂದಿಗೆ ಸಂವಹನ ನಡೆಸಿ ಈ ಸಮೀಕ್ಷೆ ತಯಾರಿಸಲಾಗಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳ ಜನರೊಂದಿಗೆ ಮಾತನಾಡಿ ಈ ಸಮೀಕ್ಷೆ ವರದಿ ತಯಾರಿಸಲು ನಿರ್ಧರಿಸಲಾಗಿತ್ತು.
5 States Election: ಮತ್ತೆ ಬಿಜೆಪಿ ಕೈವಶ ಆಗುತ್ತಾ ಹಿಂದೂ ಅಸ್ಮಿತೆ ಅಯೋಧ್ಯೆ.?
ಸಮೀಕ್ಷೆಯಿಂದ ಸಿಕ್ಕಿರುವ ಅಂಕಿ ಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮರಳಿ ಬರಬಹುದು. 18 ರಿಂದ 35 ವರ್ಷ ವಯಸ್ಸಿನ 35 ಪ್ರತಿಶತ, 35 ರಿಂದ 45 ವರ್ಷ ವಯಸ್ಸಿನ 45 ಪ್ರತಿಶತ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ 25 ಪ್ರತಿಶತ ಜನರಿಂದ ಈ ಅಭಿಪ್ರಾಯ ಸಂಗ್ರಹಿಸಲಾಗಿತ್ತು.
ಯಾರ ಸೀಟು ಎಷ್ಟು?
ಸಮೀಕ್ಷೆಗಳ ಪ್ರಕಾರ, ಉತ್ತರ ಪ್ರದೇಶದ ಒಟ್ಟು 403 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಮೈತ್ರಿಕೂಟ 223 ರಿಂದ 239 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಸಮಾಜವಾದಿ ನೇತೃತ್ವದ ಮೈತ್ರಿಕೂಟ 165 ರಿಂದ 151 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು. ಬಿಎಸ್‌ಪಿ 8 ರರಿಂದ 10 ಸ್ಥಾನ ಗಳಿಸಲಿದ್ದು, ಕಾಂಗ್ರೆಸ್ 1 ಮತ್ತು ಇತರರು 4 ಸ್ಥಾನ ಪಡೆಯಲಿದ್ದಾರೆ ಎಂದು ಈ ಜನಾಭಿಪ್ರಾಯ ತಿಳಿಸಿದೆ. 2017ರ ಚುನಾವಣೆಯಲ್ಲಿ ಎಸ್‌ಪಿ 47 ಸ್ಥಾನಗಳನ್ನು ಪಡೆದಿತ್ತು.
ಯಾರಿಗೆ ಎಷ್ಟು ಮತ?
ಸಮೀಕ್ಷೆಗಳ ಪ್ರಕಾರ, ಬಿಜೆಪಿ ಹಾಗೂ ಅದರ ಮೈತ್ರಿಕೂಟ ಶೇಕಡಾ 41 ರಿಂದ 43 ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಸಮಾಜವಾದಿ ಪಕ್ಷದ ಮೈತ್ರಿಕೂಟ ಶೇಕಡಾ 38 ರಿಂದ 40 ಮತಗಳನ್ನು ಪಡೆಯಬಹುದು. ಅದೇ ಸಮಯದಲ್ಲಿ, ಬಿಎಸ್‌ಪಿ 10 ರಿಂದ12 ಶೇಕಡಾ ಮತ ಪಡೆಯಲಿದೆ. ಆದರೆ ಹಿರಿಯ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೇವಲ 3 ರಿಂದ 4 ಶೇಕಡಾ ಮತ್ತು ಇತರರು 4ರಿಂದ 5 ಶೇಕಡಾ ಮತ ಪಡೆಯುತ್ತಾರೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
Yogi Aditynath ಈ ದೇಶದ ಲೀಡರ್ ಆಗ್ತಾರಾ? ಫಲಜ್ಯೋತಿಷ್ಯ ಹೀಗೆ ಹೇಳುತ್ತೆ..
ಸಮೀಕ್ಷೆಯಲ್ಲಿ 51 ಪ್ರತಿಶತದಷ್ಟು ಜನರು ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಆಯ್ಕೆ ಎಂದು ಹೇಳಿದ್ದಾರೆ. ಹಾಗೆಯೇ ಶೇಕಡಾ 38 ರಷ್ಟು ಜನರು ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಅವರ ಆಯ್ಕೆಯನ್ನು ಬಯಸಿದ್ದಾರೆ. ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಬಯಸಿದವರ ಸಂಖ್ಯೆ ಶೇ. 2 ರಷ್ಟು ಮಾತ್ರ. ಹಾಗೆಯೇ ಕೆಲವರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ನಮ್ಮ ಆಯ್ಕೆ ಎಂದು ಹೇಳಿದ್ದಾರೆ.
ಯಾವ ಹಂತದಲ್ಲಿ ಯಾರಿಗೆ ಎಷ್ಟು ಸೀಟು?
ಹಂತ 1 - ಬಿಜೆಪಿ+39, ಎಸ್‌ಪಿ+18, ಬಿಎಸ್‌ಪಿ-1, ಕಾಂಗ್ರೆಸ್-0, ಇತರೆ-0
ಹಂತ 2 - ಬಿಜೆಪಿ+25, ಎಸ್‌ಪಿ+30, ಬಿಎಸ್‌ಪಿ-0, ಕಾಂಗ್ರೆಸ್-0, ಇತರೆ-0
ಹಂತ 3 - ಬಿಜೆಪಿ+40, ಎಸ್‌ಪಿ+19, ಬಿಎಸ್‌ಪಿ-0, ಕಾಂಗ್ರೆಸ್-0, ಇತರೆ-0
ಹಂತ 4 - ಬಿಜೆಪಿ+39, ಎಸ್‌ಪಿ+19, ಬಿಎಸ್‌ಪಿ-2, ಕಾಂಗ್ರೆಸ್-0, ಇತರೆ-0
ಹಂತ 5 -ಬಿಜೆಪಿ+35, ಎಸ್‌ಪಿ+21, ಬಿಎಸ್‌ಪಿ-2, ಕಾಂಗ್ರೆಸ್-1, ಇತರೆ-2
ಹಂತ 6 - ಬಿಜೆಪಿ+32, ಎಸ್‌ಪಿ+22, ಬಿಎಸ್‌ಪಿ-2, ಕಾಂಗ್ರೆಸ್-0, ಇತರೆ-1
ಹಂತ 7 - ಬಿಜೆಪಿ+25, ಎಸ್‌ಪಿ+26, ಬಿಎಸ್‌ಪಿ-1, ಕಾಂಗ್ರೆಸ್-0, ಇತರೆ-1
ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಮತದಾನ ನಡೆಯಲಿದೆ. ಎಣಿಕೆ ಕಾರ್ಯ ಮಾರ್ಚ್ 10 ರಂದು ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ