ಪಕ್ಷದ ಶಾಸಕನನ್ನೇ ವರಿಸಲಿದ್ದಾರೆ ಕಾಂಗ್ರೆಸ್‌ನ ಈ ಶಾಸಕಿ!

Published : Nov 17, 2019, 02:47 PM ISTUpdated : Nov 17, 2019, 02:55 PM IST
ಪಕ್ಷದ ಶಾಸಕನನ್ನೇ ವರಿಸಲಿದ್ದಾರೆ ಕಾಂಗ್ರೆಸ್‌ನ ಈ ಶಾಸಕಿ!

ಸಾರಾಂಶ

ಕಾಂಗ್ರೆಸ್ ಶಾಸಕಿ ಕೈ ಹಿಡಿಯಲಿದ್ದಾರೆ ಅದೇ ಪಕ್ಷದ ಶಾಸಕ| ಅಧಿತಿ ವೆಡ್ಸ್ ಅಂಗದ್ ಅದ್ಧೂರಿ ಮದುವೆಗೆ ಆಪ್ತರಿಗಷ್ಟೇ ಆಹ್ವಾನ| ಮೊದಲ ಪ್ರಯತ್ನದಲ್ಲೇ ಜಯಗಳಿಸಿ MLAಗಳಾದ ಅಧಿತಿ ಹಾಗೂ ಅಂಗದ್

ನವದೆಹಲಿ[ಅ.17]: ರಾಯ್ಬರೇಲಿಯ ಕಾಂಗ್ರೆಸ್ ಶಾಸಕಿ ಅಧಿತಿ ಸಿಂಗ್ ತಮ್ಮದೇ ಪಕ್ಷದ ಶಾಸಕ ಅಂಗದ್ ಸಿಂಗ್‌ ಜೊತೆ ವಿವಾಹವಾಘಲಿದ್ದಾರೆ. ಅಂಗದ್ ಸಿಂಗ್ ಪಂಜಾಬ್‌ನ ಶಹೀದ್ ಭಗತ್ ಸಿಂಗ್ ನಗರದ ಕಾಂಗ್ರೆಸ್ ಶಾಸಕ. ಇವರಿಬ್ಬರೂ ನವೆಂಬರ್ 21ರಂದು ದೆಹಲಿಯ ರೆಸಾರ್ಟ್‌ವೊಂದರಲ್ಲಿ ಮದುವೆಯಾಗಲಿದ್ದಾರೆ. ನವೆಂಬರ್ 23ರಂದು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇನ್ನು 2017ರಲ್ಲಿ ಚುನಾವಣಾ ಕಣಕ್ಕಿಳಿದಿದ್ದ ಅಂಗದ್ ಸಿಂಗ್ ಹಾಗೂ ಅಧಿತಿ ಸಿಂಗ್ ತಮ್ಮ ಮೊದಲ ಪ್ರಯತ್ನದಲ್ಲೇ ಜಯಶಾಲಿಯಾಗಿದ್ದರು. 

ಅಧಿತಿ ಸಿಂಗ್, ರಾಯ್ಬರೇಲಿಯ ಸದರ್ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅಖಿಲೇಶ್ ಸಿಂಗ್ ಮಗಳು. ಇತ್ತ ಅಂಗದ್ ಸಿಂಗ್ ತಂದೆ ದಿಲ್ಬಾಗ್ ಸಿಂಗ್ ಕೂಡಾ ಪಂಜಾಬ್‌ನ ನವಾಂಶಹರ್‌ ಕ್ಷೇತ್ರದಿಂದ 6 ಬಾರಿ ಶಾಶಕರಾಗಿ ಆಯ್ಕೆಯಾಗಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಆ ದಿನಗಳು' ನಟಿ!

ಅಂಗದ್ ಹಾಗೂ ಅಧಿತಿ ಸಿಂಗ್ ಮದುವೆ ಹಿಂದೂ ಹಾಗೂ ಸಿಖ್ ಈ ಎರಡೂ ಸಂಪ್ರದಾಯದನ್ವಯ ನಡೆಯಲಿದೆ ಎಂದು ತಿಳಿದು ಬಂದಿದೆ. ನವೆಂಬರ್ 21 ರಂದು ರೆಸಾರ್ಟ್‌ನಲ್ಲಿ ನಡೆಯುವ ಮದುವೆ ಹಿಂದೂ ಸಂಪ್ರದಾಯದಂತೆ ನಡೆದರೆ, ಪಂಜಾಬ್‌ನ ನವಾಂಶಹರ್‌ನಲ್ಲಿ ನಡೆಯುವ ಮದುವೆ ಸಿಖ್ ಸಂಪ್ರದಾಯದಂತೆ ನಡೆಯಲಿದೆ. ಮದುವೆ ಕಾರ್ಯಕ್ರಮದಲ್ಲಿ ಆಪ್ತರಷ್ಟೇ ಪಾಲ್ಗೊಳ್ಳಿದ್ದಾರೆನ್ನಲಾಗಿದೆ.

ಲಭ್ಯವಾದ ಮಾಹಿತಿ ಅನ್ವಯ ಅಂಗದ್ ಸಿಂಗ್ ಕುಟುಂಬ ಪಂಜಾಬ್‌ನ ನವಾಂಶಹರ್‌ನಲ್ಲಿ ಅದ್ಧೂರಿ ರಿಸೆಪ್ಷನ್ ಆಯೋಜಿಸಿದೆ. ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಇನ್ನಿತರರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಲಾಗಿದೆ. 

ಫೋಟೋ ಶೂಟ್‌ನಲ್ಲಿ ಬ್ಯೂಸಿಯಾದ ವಧು ವರ: ಹಣದ ಚೀಲದೊಂದಿಗೆ ಕಳ್ಳ ಪರಾರಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ