Uttar Pradesh: Azamgarh ಹೆಸರು ಬದಲಾವಣೆಯತ್ತ ಯೋಗಿ ಚಿತ್ತ!

By Suvarna News  |  First Published Nov 13, 2021, 7:30 PM IST

*ವಿಶ್ವವಿದ್ಯಾನಿಲಯದ ಶಂಕುಸ್ಥಾಪನೆಯ ವೇಳೆ ಯೋಗಿ ಮಾತು
*ವಿಡಿಯೋ ತುಣುಕು ಟ್ವೀಟ್‌ ಮಾಡಿದ ಆದಿತ್ಯನಾಥ್!
*ಫೈಜಾಬಾದ್‌ಅನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಿದ್ದ ಯೋಗಿ
*ಸೊಳ್ಳೆಗಳು ಮತ್ತು ಮಾಫಿಯಾಗಳಿಂದ ಪೂರ್ವಾಂಚಲ್ ಮುಕ್ತ : ಅಮಿತ್‌ ಶಾ
 


ಉತ್ತರಪ್ರದೇಶ(ನ.13): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಅಜಂಗಢ್ ಹೆಸರನ್ನು (Azamgarh) 'ಆರ್ಯಂಗಢ' ('Aryamgarh) ಎಂದು ಬದಲಾಯಿಸುವ ಸುಳಿವು ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರೊಂದಿಗೆ ಅಜಂಗಢದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆಈ ಸುಳಿವು ನೀಡಿದ್ದಾರೆ. "ಇಂದು ಶಂಕುಸ್ಥಾಪನೆ  ಮಾಡಿರುವ ವಿಶ್ವವಿದ್ಯಾನಿಲಯವು ಅಜಂಗಢವನ್ನು ನಿಜವಾದ ಆರ್ಯಂಘಡವನ್ನಾಗಿ ಮಾಡುತ್ತದೆ, ಈಗ ಅದರಲ್ಲಿ ಯಾವುದೇ ಸಂದೇಹ ಬೇಡ ಎಂದು ಯೋಗಿ ಆದಿತ್ಯನಾಥ್ ಅವರು ವಿಶ್ವವಿದ್ಯಾನಿಲಯದ ಶಂಕುಸ್ಥಾಪನೆಯ ವೇಳೆ ಮಾತನಾಡಿದ ವಿಡಿಯೋ ತುಣುಕೊಂದನ್ನು ಟ್ವೀಟ್ ಮಾಡಿದ್ದಾರೆ"

ಈ ಮೂಲಕ ಅಜಂಗಢವನ್ನು  ಆರ್ಯಂಘಡವನ್ನಾಗಿ ಬದಲಾಯಿಸಲು ಉತ್ತರಪ್ರದೇಶ ಸರ್ಕಾರ ಒಲವು ಹೊಂದಿದೆ ಎಂದು ಯೋಗಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಉತ್ತಪ್ರದೇಶದ ಹಲವಾರು ಸಂಘಟನೆಗಳು ವಿವಿಧ ಜಿಲ್ಲೆಗಳ ಹೆಸರು ಬದಲಾಯಿಸುವಂತೆ ಒತ್ತಾಯಿಸಿದ್ದವು. ಅಜಮ್‌ನಗರವನ್ನು (Azamgarh) ಆರ್ಯನಗರ, ಅಲಿಘರ್‌ಅನ್ನು (Aligarh) ಹರಿಘರ್‌ ಮತ್ತು ಆಗ್ರಾವನ್ನು (Agra) ಅಗ್ರವನ  ಎಂದು ಮರುನಾಮಕರಣ ಮಾಡಬೇಕೆಂಬ ಕೂಗು ಕೇಳಿಬಂದಿದ್ದವು.

Latest Videos

undefined

 

आज जिस विश्वविद्यालय की आधारशिला रखी गयी है, यह विश्वविद्यालय 'आजमगढ़' को सचमुच ''आर्यमगढ़'' बना ही देगा, इसमें अब कोई संदेह होना ही नहीं चाहिए। pic.twitter.com/OgwQVUwqp9

— Yogi Adityanath (@myogiadityanath)

 

Faizabad ರೈಲು ನಿಲ್ದಾಣದ ಮರುನಾಮಕರಣಕ್ಕೆ ಮುಂದಾದ ಯೋಗಿ ಸರ್ಕಾರ !

ಉತ್ತರಪ್ರದೇಶದ ಫೈಜಾಬಾದ್‌(Faizabad) ಜಿಲ್ಲೆಯನ್ನು ಅಯೋಧ್ಯಾ (Ayodhya) ಎಂದು ಮರುನಾಮಕರಣ ಮಾಡಿದ ಮೂರು ವರ್ಷಗಳ ನಂತರ ಈಗ ಫೈಜಾಬಾದ್‌ ರೈಲು ನಿಲ್ದಾಣವನ್ನು ಕೂಡ ಅಯೋಧ್ಯಾ ಕ್ಯಾಂಟ್‌ (Ayodhya Cantt) ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಯೋಗಿ ಸರ್ಕಾರ ಕೈಗೊಂಡಿತ್ತು

ಸೊಳ್ಳೆಗಳು ಮತ್ತು ಮಾಫಿಯಾಗಳಿಂದ ಪೂರ್ವಾಂಚಲ್  ಮುಕ್ತ!

ಈ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ (Home Minister) ಅಮಿತ್ ಶಾ ಅವರು ಸಮಾಜವಾದಿ ಪಕ್ಷವನ್ನು (Samajwadi Party) ಗುರಿಯಾಗಿಸಿಕೊಂಡು, ಅದು "ಜಿನ್ನಾ, ಅಜಂ ಖಾನ್ ಮತ್ತು ಮುಖ್ತಾರ್ (ಅನ್ಸಾರಿ)" ಪಕ್ಷ ಎಂದು ಆರೋಪಿಸಿದ್ದಾರೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೂರ್ವಾಂಚಲ್ ಪ್ರದೇಶವನ್ನು "ಸೊಳ್ಳೆಗಳು ಮತ್ತು ಮಾಫಿಯಾಗಳಿಂದ" ಮುಕ್ತಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

"ಬಿಜೆಪಿ ಜನರಿಗೆ 'JAM' - ಜನಧನ್, ಆಧಾರ್ ಮತ್ತು ಮೊಬೈಲ್ ಅನ್ನು ನೀಡಿದೆ- ಆದರೆ ಎಸ್ಪಿ ಜನರು 'JAM' ಅನ್ನು ತಂದಿದ್ದಾರೆ ಎಂದು ಹೇಳುತ್ತಾರೆ - ಜಿನ್ನಾ, ಅಜಮ್ ಖಾನ್ ಮತ್ತು ಮುಖ್ತಾರ್ (ಡಾನ್‌ ಆಗಿದ್ದ ಮುಖ್ತಾರ್ ಅನ್ಸಾರಿ ರಾಜಕಾರಣಿಯಾಗಿದ್ದರು )" ಎಂದು ಶಾ ಹೇಳಿದರು. ಅಜಂಗಢ, ಲೋಕಸಭೆಯಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಪ್ರತಿನಿಧಿಸುವ ಎಸ್ಪಿಯ ಭದ್ರಕೋಟೆಯಾಗಿದೆ.

ಚುನಾವಣೆ ಗೆಲ್ಲಲು ಬಿಜೆಪಿ 3 ಗುರಿ: ಯೋಗಿಗೆ ಪದೋನ್ನತಿ!

"ನಿಮಗೆ ಬಿಜೆಪಿಯ ಜಾಮ್ ಬೇಕೋ ಅಥವಾ ಎಸ್ಪಿಯ ಜಾಮ್ ಬೇಕೋ ಎಂದು ನನಗೆ ಹೇಳಬೇಕು. ಈ ಜನರು ಎಂದಿಗೂ ಉತ್ತರ ಪ್ರದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅವರು ಜಾತಿಯ (Caste) ಆಧಾರದ ಮೇಲೆ ಜನರನ್ನು ವಿಭಜಿಸುವ, ಗಲಭೆ, ಓಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗುತ್ತಾರೆ" ಎಂದು ಶಾ ಹೇಳಿದ್ದಾರೆ.

4.5 ವರ್ಷಗಳು ಕಳೆದರೂ ಸಿಎಂ ಯಾವುದೇ ಕೆಲಸ ಮಾಡಿಲ್ಲ!

ಯೋಗಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಮಾಜವಾದಿ ಪಕ್ಷವು ಸರ್ಕಾರವು ನಗರಗಳ ಹೆಸರನ್ನು ಮರುನಾಮಕರಣ ಮಾಡುತ್ತಿದೆ ಎಂದು ಆರೋಪಿಸುತ್ತಿದೆ. ಅಜಂಗಢದ ಹೆಸರು ಬದಲಾವಣೆ ಯೋಜನೆ ಬಗ್ಗೆ ಮಾತನಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, "ಅಮಿತ್ ಶಾ ಮತ್ತು ಯೋಗಿ ಅಜಂಗಢದ ಅಭಿವೃದ್ಧಿಯನ್ನು ನೋಡಲು ಹೋಗಿದ್ದಾರೆ, 4.5 ವರ್ಷಗಳು ಕಳೆದರೂ ಸಿಎಂ ಅಲ್ಲಿ ಯಾವುದೇ ಕೆಲಸವನ್ನು ಉದ್ಘಾಟಿಸಲಿಲ್ಲ. ಹಾಗಾಗಿ ಅವರ ಮಾತನ್ನು ಯಾರೂ ನಂಬುವುದಿಲ್ಲ" ಎಂದು ಹೇಳಿದ್ದಾರೆ. "ಸಿಎಂಗೆ ಹೆಸರು ಮತ್ತು ಬಣ್ಣವನ್ನು ಹೇಗೆ ಬದಲಾಯಿಸುವುದು ಮಾತ್ರ ತಿಳಿದಿದೆ. ಆದರೆ, ಈ ಬಾರಿ ಜನರು ಯೋಗಿ ಸರ್ಕಾರವನ್ನು ಬದಲಾಯಿಸುವಷ್ಟು ಮತ ಹಾಕುತ್ತಾರೆ" ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. 

click me!