Delhi pollution; ಸುಪ್ರೀಂ ಚಾಟಿ ಬೆನ್ನಲ್ಲೇ ಮಹತ್ವದ ಘೋಷಣೆ, ಶಾಲೆ, ಕಾಮಗಾರಿ ಬಂದ್, WFH ಆದೇಶ!

By Suvarna NewsFirst Published Nov 13, 2021, 7:08 PM IST
Highlights
  • ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ, ವಾಸಯೋಗ್ಯವಲ್ಲದ ನಗರ
  • ದೆಹಲಿ ಮಾಲಿನ್ಯ ಕುರಿತು ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಮಹತ್ವದ ಸಭೆ
  • ಒಂದು ವಾರ ದೆಹಲಿಯ ಅರ್ಧ ಸ್ತಬ್ಧ, ಅರವಿಂದ್ ಕೇಜ್ರಿವಾಲ್ ಘೋಷಣೆ

ನವದೆಹಲಿ(ನ.13): ರಾಷ್ಟ್ರ ರಾಜಧಾನಿ ವಾಸಯೋಗ್ಯವಲ್ಲದ ನಗರವಾಗಿ ಮಾರ್ಪಟ್ಟಿದೆ. ವಾಯು ಮಾಲಿನ್ಯ(Deli Air pollution) ವಿಪರೀತವಾಗಿದ್ದು ಸುಪ್ರೀಂ ಕೋರ್ಟ್(Supreme Court) ದೆಹಲಿ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ತಕ್ಷಣವೇ ಪರಿಸ್ಥಿತಿ ನಿಯಂತ್ರಿಸಿ, ಅಗತ್ಯ ಬಿದ್ದರೆ ಲಾಕ್‌ಡೌನ್ ಹೇರಿ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಇದರ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತುರ್ತು ಸಭೆ ನಡೆಸಿದ್ದಾರೆ. ಇದೀಗ ಕೆಲ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಅರವಿಂದ್ ಕೇಜ್ರಿವಾಲ್(Arvind Kejriwal) ನಡೆಸಿದ ತುರ್ತು ಸಭೆಯಲ್ಲಿ ದೆಹಲಿ(Delhi) ಮಾಲಿನ್ಯ ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ನವೆಂಬರ್ ನಾಳೆಯಿಂದಲೇ ಹೊಸ ಆದೇಶ ಜಾರಿಗೆ ಬರುತ್ತಿದೆ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಕಾರಣ ಒಂದು ವಾರ ಶಾಲೆಗೆ(Shool) ರಜೆ ಘೋಷಿಸಲಾಗಿದೆ. ಇನ್ನು ಕಟ್ಟಡ ಕಾಮಾಗಾರಿ(Constructions) ಸೇರಿದಂತೆ ಇತರ ಕಾಮಗಾರಿ ಕೆಲಸ ಒಂದು ವಾರ ನಿರ್ಬಂಧಿಸಲಾಗಿದೆ.

ಸರ್ಕಾರಿ ಕಚೇರಿ ಕೆಲಸಗಳನ್ನು ಸಂಪೂರ್ಣವಾಗಿ ಮನೆಯಿಂದ ಮಾಡಲು(Work From Home) ಸೂಚಸಲಾಗಿದೆ. ಇನ್ನು ಖಾಸಗಿ ಕಂಪನಿಗಳಿಗೂ ಸಾಧ್ಯವಾದಷ್ಟು ಮಟ್ಟಿಗೆ ವರ್ಕ್ ಫ್ರಮ್ ಹೋಮ್ ನೀಡಲು ಸೂಚಿಸಲಾಗಿದೆ. ಈ ಮೂಲಕ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಮಿತಿಮೀರಿದ ವಾಯುಮಾಲಿನ್ಯ, ದೆಹಲಿಯಲ್ಲಿ 5 ಜನರಲ್ಲಿ ನಾಲ್ವರಿಗೆ ಆರೋಗ್ಯ ಸಮಸ್ಯೆ!

ಶೀಘ್ರದಲ್ಲೇ ಹೊಸ ಮಾರ್ಗಸೂಚಿಯನ್ನು ದೆಹಲಿ ಸರ್ಕಾರ ಪ್ರಕಟಿಸಲಿದೆ. ಈ ಮೂಲಕ ದೆಹಲಿಯಲ್ಲಿ ಪರಿಸ್ಥಿತಿ ಕೈಮೀರಿರುವ ವಾಯು ಮಾಲಿನ್ಯ ನಿಯಂತ್ರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಪಂಜಾಬ್ ಹಾಗೂ ಹರ್ಯಾಣ ಭಾಗದಲ್ಲಿ ರೈತರು ತಮ್ಮ ಬೆಳೆಗಳ ಕಳೆಯನ್ನು ಸುಡುವುದು ಕೂಡ ಮಾಲಿನ್ಯ ಕಾರಣಾಗುತ್ತಿದೆ. ಇದನ್ನು ನಿಯಂತ್ರಿಸಲು ಹೊಸ ಕಾನೂನು ಜಾರಿಗೆ ತರುವ ನಿಟ್ಟಿನಲ್ಲೂ ದೆಹಲಿ ಸರ್ಕಾರ ಚರ್ಚೆ ನಡೆಸಿದೆ.

ಲಾಕ್‌ಡೌನ್ ಸೂಚನೆಯನ್ನು ಸುಪ್ರೀಂ ಕೋರ್ಟ್ ನೀಡಿದೆ. ಆದರೆ ಜನರಿಗೆ ಸಮಸ್ಯೆಯಾಗದಂತೆ ವಾಯು ಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರ ಬದ್ಧವಾಗಿದೆ. ತುರ್ತು ಕ್ರಮಗಳನ್ನು ಘೋಷಿಸಿದೆ. ಜನರು ನೂತನ ಮಾರ್ಗಸೂಚಿ ಪಾಲನೆ ಮಾಡಿ, ಮಾಲಿನ್ಯ ತಗ್ಗಿಸಲು ಸಹಕರಿಸಬೇಕು ಎಂದು ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ದೆಹಲಿ ವಾಯು ಮಾಲಿನ್ಯ ಪ್ರಮಾಣ 500ಕ್ಕಿಂತ ಹೆಚ್ಚಾಗಿದೆ. ಇದು ಅತ್ಯಂತ ಗಂಭೀರವಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ವಾಯು ಮಾಲಿನ್ಯ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌ವಿ ರಮಣ ದೆಹಲಿಯಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದೆ.

Air Pollution| ಮಾಲಿನ್ಯಕ್ಕೆ ದಿಲ್ಲಿ ತಲ್ಲಣ: 5 ವರ್ಷದಲ್ಲೇ ಗರಿಷ್ಠ!

ತಕ್ಷಣಕ್ಕೆ ವಾಯು ಮಾಲಿನ್ಯ ಪ್ರಮಾಣ ಕಡಿಮೆ ಮಾಡಲು ತುರ್ತು ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಅಗತ್ಯ ಬಿದ್ದರೆ ಎರಡು ದಿನ ಲೌಕ್‌ಡೌನ್ ಮಾಡಿ. ಆದರೆ ಜನರಿಗೆ ವಾಸ ಯೋಗ್ಯ ನಗರವನ್ನಾಗಿ ಮಾಡಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಮನೆಯೊಳಗೆ ಇರಲು ಯೋಗ್ಯವಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಿಯಂತ್ರಿಸಲು ಮಾರ್ಗವೇನು ಎಂದು ಸುಪ್ರೀಂ ಪ್ರಶ್ನಿಸಿದೆ.

ಮಾಲಿನ್ಯಕ್ಕೆ ರೈತರನ್ನು ಹೊಣೆಯಾಗಿಸಬೇಡಿ. ದೀಪಾವಳಿ ಸಂದರ್ಭ ಅದೆಷ್ಟು ಪಟಾಕಿ ಸಿಡಿಸಲಾಗಿದೆ ಎಂಬುದು ತಿಳಿದಿದೆಯಾ? ಎಂದು ದೆಹಲಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಂಪೂರ್ಣವಾಗಿ ದೆಹಲಿ ಮುಚ್ಚಲ್ಪಡುತ್ತದೆ. ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದೆ. ಸಮಸ್ಯೆ ಮತ್ತಷ್ಟು ಉಲ್ಬಣವಾಗುವದಕ್ಕಿಂತ ಮೊದಲು ಸಮಸ್ಯೆ ಬಗೆಹರಿಸಿ ಎಂದು ಸುಪ್ರೀಂ ಹೇಳಿದೆ.
 

click me!