ಉತ್ತರ ಪ್ರದೇಶದ ಮಿರತ್‌ನಲ್ಲಿ ಒಂಟಿಯಾಗಿ ಓಡಾಡುವವರ ಕೆನ್ನೆಗೆ ಚಪ್ಪರಿಸಿ ಪರಾರಿಯಾಗುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಯುವಕ 'ಡೋಪಾಮೈನ್ ರಶ್' ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉತ್ತರ ಪ್ರದೇಶ (ಡಿ.31): ಜಗತ್ತಿನಲ್ಲಿ ಒಬ್ಬೊಬ್ಬರಿಗೂ ಒಂದೊಂದು ವಿಚಿತ್ರ ಕಾಯಿಲೆ, ಖಯಾಲಿಗಳಿರುತ್ತೇವೆಂಬುದು ನಿಜ. ಕೆಲವು ಕಣ್ಣಿಗೆ ಕಾಣಿಸಿದರೆ ಇನ್ನು ಕೆಲವು ಗೋಚರಿಸುವುದಿಲ್ಲ. ಆದರೆ ವ್ಯಕ್ತಿಗಳ ವಿಚಿತ್ರ ವರ್ತನೆ, ಗುಣಲಕ್ಷಣಗಳಿಂದ ಗಮನಿಸಬಹುದಾಗಿ. ಇಂತವರ ವರ್ತನೆಗಳು ಜನರನ್ನು ಕಂಗಾಲಾಗಿಸುವುದೂ ಇದೆ. ಅಂಥ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮಿರತ್‌ನ 23 ವರ್ಷದ ಯುವಕ ಕಪಿಲ್ ಕುಮಾರ್ ಇತ್ತೀಚೆಗಷ್ಟೇ ಪದವಿ ಮುಗಿಸಿದ್ದಾನೆ. ಸದ್ಯ ಅವನಿಗೆ ಮಾಡಲು ಯಾವುದೇ ಕೆಲಸವಿಲ್ಲದೆ ಅಂಡಲೆಯುತ್ತಿದ್ದಾನೆ. ಆದರೆ ಕೆಲಸ ಸಿಗದೇ ಕಳೆದ ಐದಾರು ತಿಂಗಳಿಂದ ವಿಚಿತ್ರವಾಗಿ ವರ್ತಿಸಿಲಾರಂಭಿಸಿದ್ದಾನೆ. ಹುಡುಗರಿರಲಿ, ಹುಡುಗಿಯರಿರಲಿ, ಮುದುಕರಿರಲಿ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವವರನ್ನೇ ಟಾರ್ಗೆಟ್ ಮಾಡುತ್ತಾನೆ. ಅವರು ಏನಾಯ್ತು ಅಂತಾ ಅರಿವು ಆಗುವಷ್ಟರಲ್ಲಿ ಬೈಕ್‌ನಲ್ಲಿ ಪರಾರಿಯಾಗಿರುತ್ತಾನೆ ಆಸಾಮಿ.
Watch | ಬಿಜೆಪಿ ಸ್ಟಿಕ್ಕರ್ ಅಂಟಿಸಿದ ಬೊಲೆರೊ ಬೈಕ್‌ಗೆ ಡಿಕ್ಕಿ, 2 ಕಿ.ಮೀ ಎಳೆದೊಯ್ದ ಭೀಕರ ಅಪಘಾತದ ವಿಡಿಯೋ ವೈರಲ್!
ಒಂಟಿ ಸಿಕ್ಕರೆ ಏನು ಮಾಡ್ತಾನೆ?
ಹಗಲು ಹೆಚ್ಚಾಗಿ ರಾತ್ರಿವೇಳೆ ಹೊರಗಡೆ ಸುತ್ತಾಡುತ್ತಾನೆ. ರಸ್ತೆಯಲ್ಲಿ ಯಾರಾದರೂ ಒಂಟಿಯಾಗಿ ನಡೆದುಹೋಗುತ್ತಿದ್ದರೆಂದರೆ ಅವರನ್ನು ಟಾರ್ಗೆಟ್ ಮಾಡುತ್ತಾನೆ ಆಸಾಮಿ. ಅವರ ಹಿಂದೆ ಬೈಕ್ ನಲ್ಲಿ ಹೊರಡು ಕಪಿಲ್ ಹತ್ತಿರ ಬರುತ್ತಿದ್ದಂತೆ ಅವರ ಕೆನ್ನೆ ಸವರುವುದು,ಕೆನ್ನೆ ತಟ್ಟುವುದು ಅಲ್ಲಿಂದ ಪರಾರಿಯಾಗುವುದು ಮಾಡುತ್ತಾನೆ. ಕೆನ್ನೆಗೆ ಸವರಿ ಅಥವಾ ಕೆನ್ನೆಗೆ ತಟ್ಟಿ ಅಲ್ಲಿಂದ ಪರಾರಿಯಾಗುತ್ತಾನೆ. ಇದು ವಿಚಿತ್ರ ಅನಿಸಿದರೂ ನಿಜ. ಹೀಗೆ ಕೆನ್ನೆಗೆ ತಟ್ಟಿಸಿಕೊಂಡ ಕೆಲವರು ಹಿಡಿಯಲು ಯತ್ನಿಸಿದ್ದಾರೆ ಆದರೆ ಕೈಗೆ ಸಿಗದೆ ಪರಾರಿಯಾಗಿಬಿಡುತ್ತಾನೆ. ಕೆಲವರು ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಪೊಲೀಸರು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಯುವಕನ ಈ ವಿಚಿತ್ರ ವರ್ತನೆಯಿಂದ ಕೆನ್ನೆಗೆ ಚಪ್ಪರಿಸಿಕೊಂಡವರ ಸಂಖ್ಯೆ ಹೆಚ್ಚುತ್ತಲೇ ಹೋಗಿದೆ. ಇದು ಇತ್ತೀಚೆಗೆ ಕಪಿಲ್ ತನ್ನ ಕಪಿ ಚೇಷ್ಟೆ ಮುಂದುವರಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ನಿವೃತ್ತ ಪಿಸಿಎಸ್ ಕೆನ್ನೆಗೆ ಬಾರಿಸಿ ಸಿಕ್ಕಿಬಿದ್ದ ಭೂಪ:
ದಿನನಿತ್ಯ ಒಂಟಿಯಾಗಿರು ಓಡಾಡುವ ಜನರ ಕೆನ್ನೆಗೆ ಚಪ್ಪರಿಸಿ ತಪ್ಪಿಸಿಕೊಳ್ಳುತ್ತಿದ್ದ ಆಸಾಮಿ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಿವೃತ್ತ ಪಿಸಿಎಸ್ ಕೆನ್ನೆಗೆ ಬಾರಿಸಿದ್ದಾನೆ. ವೃದ್ಧನಾಗಿದ್ದರಿಂದ ಕೆನ್ನೆಗೆ ಹೊಡೆದಾಕ್ಷಣ ಕೆಳಗೆ ಕುಸಿದುಬಿದ್ದಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಪೊಲೀಸರ ಗಮನಕ್ಕೂ ಬಂದಿದೆ. ಅಲ್ಲದೇ ಗಾಯಗೊಂಡಿದ್ದ ವೃದ್ಧ ಪೊಲೀಸರಿಗೆ ದೂರು ನೀಡಿದಾಗ ಯುವಕನ ವಿಚಿತ್ರ ವರ್ತನೆ ಕಂಡು ಪೊಲೀಸರು ದಂಗಾಗಿದ್ದಾನೆ. ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಕಪಿಲ್ ಕುಮಾರ ವೃದ್ಧನಿಗೆ ಅಷ್ಟೇ ಅಲ್ಲ, ದಿನನಿತ್ಯ ಅನೇಕ ಜನರಿಗೆ ಹೀಗೆ ಕೆನ್ನೆಗೆ ಚಪ್ಪಿಸುವ ವಿಡಿಯೋ ಪ್ರಕರಣಗಳು ಬೆಳಕಿಗೆ ಬಂದಿವೆ. ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧಾರಿಸಿ ಯುವಕನನ್ನು ಬಂಧಿಸಿದ ಪೊಲೀಸರು. ಕಪಿಲ್ ಬಂಧನದ ವಿಷಯ ತಿಳಿದ ಆತನ ಪೋಷಕರು ತಕ್ಷಣ ಪೊಲೀಸ್ ಠಾಣೆಗೆ ತೆರಳಿ, ಕಪಿಲ್ ಮಾನಸಿಕ ಸ್ಥಿತಿಯನ್ನು ಪೊಲೀಸರಿಗೆ ವಿವರಿಸಿದ್ದಾರೆ.
ಯುವಕನ ವರ್ತನೆ ಬಗ್ಗೆ ತಾಯಿ ಹೇಳಿದ್ದೇನು?:
ಕಪಿಲ್ ತಾಯಿ ಹೇಳುವಂತೆ, ಬಾಲ್ಯದಿಂದಲೂ ಕಪಿಲ್ ನನ್ನು ಎಲ್ಲರೂ ಹೇಡಿ, ಮೂರ್ಖ ಎಂದು ಗೇಲಿ ಮಾಡುತ್ತಿದ್ದರು ಹಾಗಾಗಿ ಒಂಟಿಯಾಗಿರುವ ಜನರ ಮೇಲೆ ಕೋಪಗೊಂಡು ದಾಳಿ ಮಾಡುತ್ತಿದ್ದನಂತೆ. ಅವನು ನನ್ನ ಮತ್ತು ನನ್ನ ಪತಿಯೊಂದಿಗೆ ಮಾತ್ರ ಮಾತನಾಡುತ್ತಿದ್ದ. ಆದರೆ ನನ್ನ ಪತಿ ಐದು ವರ್ಷಗಳ ಹಿಂದೆ ನಿಧನರಾದ ಬಳಿಕ ತಂದೆಯ ಮರಣದಿಂದ ಅವನು ಮತ್ತಷ್ಟು ಒಂಟಿಯಾಗಿರಲಾಂಭಿಸಿದ ಎಂದು ಪೊಲೀಸರ ಮುಂದೆ ತಿಳಿಸಿದ್ದಾಳೆ.
ರೊಟ್ಟಿಯ ನೆಪ ಹೇಳಿ ವಧುವನ್ನು ಬಿಟ್ಟು ಬೇರೆ ಯುವತಿಯ ಮದ್ವೆಯಾದ ವರ
ಡೋಪಾಮೈನ್ ರಶ್ ಮಾನಸಿಕ ಕಾಯಿಲೆ:
ಯುವಕ ಕಪಿಲ್ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಿದ ವೈದ್ಯರು ಪ್ರಸ್ತುತ ಅವರು ‘ಡೋಪಾಮೈನ್ ರಶ್’ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾರೆ. ಅವನಿಗೆ ಚಿಕಿತ್ಸೆ ತುಂಬಾ ಅಗತ್ಯವಿದೆ. ಇನ್ನೂ ಕೆಲವು ದಿನ ಹಾಗೆ ಬಿಟ್ಟರೆ ತೀವ್ರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿಯನ್ನು ಪೋಷಕರಿಗೆ ಒಪ್ಪಿಸಿ, ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದ್ದಾರೆ.
: A 23-year-old unemployed graduate in , suffering from depression after his father's death and mother's remarriage, was arrested for slapping pedestrians, including a woman and a retired officer, seeking dopamine rush. pic.twitter.com/biIfUxrUog
— Siraj Noorani (@sirajnoorani)