ವರ್ಷದ ಕೊನೆಯ ದಿನ. ಹಲವರು ಇಂದು ಪಾರ್ಟಿ ಮೂಡ್‌ನಲ್ಲಿರುತ್ತಾರೆ. ಕಚೇರಿಗೆ ತೆರಳಲು ಇಷ್ಟಪಡುವುದಿಲ್ಲ. ಇದೇ ದಿನ ಇನ್ಫೋಸಿಸ್ ಮೈಸೂರು ಕ್ಯಾಂಪಸ್ ಉದ್ಯೋಗಿಗಳಿಗೆ ಕಂಪನಿ ವರ್ಕ್ ಫ್ರಮ್ ಹೋಮ್ ಮಾಡುವಂತೆ ಸೂಚಿಸಿದೆ. ಇದು ಹೊಸ ವರ್ಷ, ಪಾರ್ಟಿ ಕಾರಣಕ್ಕಲ್ಲ.
ಮೈಸೂರು(ಡಿ.31) ಹೊಸ ವರ್ಷ ಅದ್ಧೂರಿಯಾಗಿ ಬರಮಾಡಿಕೊಳ್ಳಲು ಎಲ್ಲರು ಸಜ್ಜಾಗಿದ್ದಾರೆ. ಈಗಾಗಲೇ ಪಾರ್ಟಿ ಆರಂಭಗೊಂಡಿದೆ. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಹೊಸ ವರ್ಷದ ಸಂಭ್ರಮ ಕಳೆಗಟ್ಟಿದೆ. ಹೊಸ ವರ್ಷದ ಪಾರ್ಟಿ, ಪ್ರಸಕ್ತ ವರ್ಷಕ್ಕೆ ಗುಡ್ ಬೈ ಹೇಳಲು ಹಲವರು ಇಂದು ಕಚೇರಿಗೆ ಚಕ್ಕರ್ ಹಾಕುತ್ತಾರೆ. ಮತ್ತೆ ಕೆಲವರು ವರ್ಕ್ ಫ್ರಮ್ ಹೋಮ್ ಪಡೆದುಕೊಂಡು ಸಂಜೆಯ ಪಾರ್ಟಿಗೆ ಬೇಗನೆ ಸಜ್ಜಾಗುತ್ತಾರೆ. ಇದರ ನಡುವೆ ಮೈಸೂರು ಇನ್ಫೋಸಿಸ್ ಕ್ಯಾಂಪಸ್ ಉದ್ಯೋಗಿಗಳಿಗೆ ಕಂಪನಿಯೇ ಡಿಸೆಂಬರ 31ರಂದು ಎಲ್ಲರೂ ವರ್ಕ್ ಫ್ರಮ್ ಹೋಮ್ ಮಾಡುವಂತೆ ಕಡ್ಡಾಯ ಸೂಚನೆ ನೀಡಿದೆ. ಆದರೆ ಇನ್ಪೋಸಿಸ್ ನೀಡಿರುವ ಈ ಸೂಚನೆ ಹೊಸ ವರ್ಷಾಚರಣೆ, ಪಾರ್ಟಿ ಕಾರಣಕ್ಕಲ್ಲ.
ಡಿಸೆಂಬರ್ 31 ರಂದು ಮೈಸೂರಿನ ಇನ್ಫೋಸಿಸ್ ಕಂಪನಿ ತನ್ನ ಎಲ್ಲಾ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಇದು ಕಡ್ಡಾಯ ಸೂಚನೆಯಾಗಿದೆ. ಇಷ್ಟೇ ಅಲ್ಲ ಮುಂದಿನ ಕೆಲ ದಿನ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯ ಕಾರಣ ಮೈಸೂರು ಇನ್ಫೋಸಿಸ್ ಕ್ಯಾಂಪಸ್ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿದೆ. ಹೀಗಾಗಿ ಉದ್ಯೋಗಿಗಳು ಎಲ್ಲರೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.
70 ಗಂಟೆ ಕೆಲ್ಸ ನಿಮ್ಗೆ ಕೋಟಿ ರೂ ಕೊಡುತ್ತೆ, ಉದ್ಯೋಗಿ ಕತೆ ಏನು?ಮೂರ್ತಿಗೆ ನಮಿತಾ ಥಾಪರ್ ಪ್ರಶ್ನೆ!
ಮೈಸೂರಿನಲ್ಲಿರುವ ಇನ್ಫೋಸಿಸ್ ಕ್ಯಾಂಪಸ್, ಮೀಸಲು ಅರಣ್ಯ ಪ್ರದೇಶಕ್ಕೆ ತಾಗಿಕೊಂಡಿದೆ. ಹೀಗಾಗಿ ಈ ಭಾಗದಲ್ಲಿ ಕಾಡು ಪ್ರಾಣಿಗಳ ಓಡಾಟ ಸಹಜವಾಗಿದೆ. ಇತ್ತ ಇನ್ಫೋಸಿಸ್ ಕ್ಯಾಂಪಸ್ ಕೂಡ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಆದರೆ ಮೈಸೂರು ಇನ್ಫೋಸಿಸ್ ಕ್ಯಾಂಪಸ್ ಒಳಗೆ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲು. ಸುರಕ್ಷತಾ ದೃಷ್ಟಿಯಿಂದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.ಈ ಕುರಿತು ಇನ್ಫೋಸಿಸ್ ಎಲ್ಲಾ ಉದ್ಯೋಗಿಗಳಿಗೆ ಇಮೇಲ್ ಮಾಡಿದೆ.
ಎಲ್ಲಾ ಉದ್ಯೋಗಿಗಳು ಡಿಸೆಂಬರ್ 31ರಂದು ಮನೆಯಿಂದಲೇ ಕಲೆಸ ಮಾಡಬೇಕಾಗಿ ವಿನಂತಿ. ಕ್ಯಾಂಪಸ್ ಒಳಗೆಡೆ ಚಿರತೆ ಕಾಣಿಸಿಕೊಂಡಿದೆ. ಈಕುರಿತು ಅರಣ್ಯಾಧಿಕಾರಿಗಳ ತಂಡ ಕಾರ್ಯಪ್ರವೃತ್ತವಾಗಿದೆ. ಇನ್ಪೋಸಿಸ್ ಸೆಕ್ಯೂರಿಟಿ ತಂಡ, ಈ ಕುರಿತು ಸ್ಪಷ್ಟಸೂಚನೆ ನೀಡಿದೆ. ಡಿಸೆಂಬರ್ 31ರಂದು ಯಾರೂ ಕೂಡ ಕ್ಯಾಂಪಸ್ ಪ್ರವೇಶಿಸದಂತೆ ಸೂಚಿಸಿದೆ. ಇತ್ತ ಬರೋಬ್ಬರಿ 4,000 ಮಂದಿ ಟ್ರೈನಿಗಳಿಗೆ ಮನೆಯಲ್ಲಿ, ಹಾಸ್ಟೆಲ್‌ನಲ್ಲಿ ಇರಲು ಸೂಚನೆ ನೀಡಿದೆ. ಈ ಮೂಲಕ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಮನವಿ ಮಾಡಿದೆ. ಕ್ಯಾಂಪಸ್ ಒಳಗಿರುವ ಟ್ರೈನಿಗಳಿಗೆ ಹಾಸ್ಟೆಲ್ ಕೊಠಡಿಯಿಂದ ಹೊರಬರದಂತೆ ಸೂಚಿಸಲಾಗಿದೆ. ಆಹಾರ, ನೀರು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದಿದೆ.
ಬೆಂಗಳೂರಿನ ಕಿಂಗ್‌ಫಿಶರ್ ಟವರ್‌ನಲ್ಲಿ ಮನೆ ಖರೀದಿಸಿದ ನಾರಾಯಣ ಮೂರ್ತಿ, ಬೆಲೆ ಎಷ್ಟು?
ಮೈಸೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸುತ್ತಿರುವ ಪ್ರಕರಣ ಹೆಚ್ಚಾಗಿದೆ. ಬೆಂಗಳೂರಿನ ಹೊರ ವಲಯಗಳಲ್ಲೂ ಚಿರತೆ ಕಾಣಿಸಿಕೊಂಡಿತ್ತು. ಹಲವು ದಾಳಿಯೂ ನಡೆದಿದೆ. ಚಿರತೆ ದಾಳಿಗೆ ಹಲವು ಜೀವಗಳು ಬಲಿಯಾಗಿದೆ. ಇದೀಗ ನಗರ ಪ್ರದೇಶಗಳಲ್ಲೂ ಚಿರತೆ ಕಾಣಿಸಿಕೊಳ್ಳುತ್ತಿದೆ.