ನೀವೂ ಹೀಗೆ ಮಾಡಿದ್ದೀರಾ? ನಕ್ಕು ನಕ್ಕು ಸುಸ್ತಾದ ಏರ್‌ಪೋರ್ಟ್ ಸಿಬ್ಬಂದಿ, ಇದುವೇ ಫ್ರೆಂಡ್‌ಶಿಪ್ ಎಂದ್ರು ಜನ

By Mahmad Rafik  |  First Published Dec 31, 2024, 3:10 PM IST

ವಿಮಾನ ನಿಲ್ದಾಣದಲ್ಲಿ ನ್ಯೂಸ್ ಪೇಪರ್ ಗಾತ್ರದ ಬೋರ್ಡಿಂಗ್ ಪಾಸ್‌ನೊಂದಿಗೆ ಪ್ರಯಾಣಿಕನೊಬ್ಬ ಕಾಣಿಸಿಕೊಂಡ ಘಟನೆ ನಡೆದಿದೆ. ಈ ತಮಾಷೆಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ.


ಮುಂಬೈ: ಕಷ್ಟದ ಕಾಲದಲ್ಲಿ ಸಹಾಯಕ್ಕೆ ಬರುವ ವ್ಯಕ್ತಿಯೇ ನಿಜವಾದ ಗೆಳೆಯ. ಯಾವುದೇ ಸ್ವಾರ್ಥವಿಲ್ಲದೇ ಜೊತೆಯಲ್ಲಿರುವುದು ಗೆಳೆತನ. ಕುಟುಂಬಸ್ಥರೊಂದಿಗೆ ಹೇಳಿಕೊಳ್ಳಲಾಗದ ಎಷ್ಟೋ ವಿಷಯಗಳನ್ನು ಗೆಳೆಯರ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳಲಾಗುತ್ತದೆ. ಅದರಲ್ಲಿಯೂ ಬಾಲ್ಯದ ಗೆಳೆಯರೊಂದಿಗೆ ಒಡನಾಟದ ಸುಂದರ ಕ್ಷಣಗಳು ಇಡೀ ಜೀವನದುದ್ದಕ್ಕೂ ನೆನಪಿನಲ್ಲಿರುತ್ತವೆ. ಅಷ್ಟು ಮಾತ್ರವಲ್ಲ ಆ ಗೆಳೆತನಕ್ಕೆ ಅಂತ್ಯ ಇರಲ್ಲ. ಗೆಳೆಯರ ಮಧ್ಯೆ ಕಾಲೆಳೆಯೋದು ಸಾಮಾನ್ಯ. ಕೆಲವೊಮ್ಮೆ ಗೆಳೆಯರು  ಅಪಘಾತಕ್ಕೊಳಗಾದ್ರೆ ಆಸ್ಪತ್ರೆಯಲ್ಲಿ ಆತನ ಜೊತೆಯಲ್ಲಿಯೇ ಇರುತ್ತಾರೆ. ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. 

ಇದೀಗ ಇಂತಹವುದೇ ಒಂದು ಸುಂದರ ಮತ್ತು ತಮಾಷೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ಈ ರೀತಿ ನಾವು ಯೋಚನೆಯೇ ಮಾಡಿರಲಿಲ್ಲ ಎಂದು ಬರೆದುಕೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದು ನಿಜವಾದ ಗೆಳೆತನ. ಗೆಳೆಯರ ಮಧ್ಯೆ ಈ ರೀತಿಯ ತಮಾಷೆ ಇದ್ರೆ ಮಾತ್ರ ಆ ಗೆಳೆತನ ತುಂಬಾ ಸುಂದರವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ. 

Tap to resize

Latest Videos

ಏನಿದು ವೈರಲ್ ವಿಡಿಯೋ?
ಬೋರ್ಡಿಂಗ್ ಪಾಸ್ ಪ್ರಿಂಟ್ ಹಾಕಿಕೊಂಡು ಬಾ ಎಂದು ಯಾವತ್ತೂ ನಿಮ್ಮ ಗೆಳೆಯರಿಗೆ ಹೇಳಬೇಡಿ ಎಂಬ ಶೀರ್ಷಿಕೆಯಡಿಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ.  ವಿಮಾನ ನಿಲ್ದಾಣದ ಪ್ರವೇಶಕ್ಕೆ ಬೋರ್ಡಿಂಗ್‌ ಪಾಸ್ ಕಡ್ಡಾಯವಾಗಿ ಹೊಂದಿರಬೇಕು. ಇದನ್ನು ಭದ್ರತಾ ಸಿಬ್ಬಂದಿ ಗುರುತಿನ ಚೀಟಿಯೊಂದಿಗೆ ಪರಿಶೀಲಿಸಿ ಪ್ರಯಾಣಿಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಸಾಮಾನ್ಯವಾಗಿ ಬೋರ್ಡಿಂಗ್ ಪಾಸ್ A4 ಸೈಜ್ ಪೇಪರ್‌ನಲ್ಲಿ ಪ್ರಿಂಟ್ ಹಾಕಿಕೊಂಡು ಬರಲಾಗುತ್ತದೆ. ಆದರೆ ಇಲ್ಲಿ ನ್ಯೂಸ್ ಪೇಪರ್ ಸೈಜ್ ಕಾಗದದ ಮೇಲೆ ಪ್ರಿಂಟ್ ಹಾಕಲಾಗಿತ್ತು. ಬಹುಶಃ ಮತ್ತೊಂದು ಪಾಸ್ ಪ್ರಿಂಟ್ ಹಾಕಲು ಸಮಯವಿಲ್ಲದ ಕಾರಣ ಆ ವ್ಯಕ್ತಿ ಅದನ್ನೇ ಏರ್‌ಪೋರ್ಟ್ ಸಿಬ್ಬಂದಿಗೆ ತೋರಿಸಿದ್ದಾರೆ. 

ದೊಡ್ಡ ಪೇಜ್‌ನಲ್ಲಿ ಬೋರ್ಡಿಂಗ್ ಪಾಸ್ ನೋಡಿ ಏರ್‌ಪೋರ್ಟ್ ಸಿಬ್ಬಂದಿ ಸಹ ನಕ್ಕಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. vins.740 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಬೋರ್ಡಿಂಗ್ ಪಾಸ್ ತಂದವ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿರಬೇಕು ಅಂತಾನೂ ಬರೆಯಲಾಗಿದೆ. ಇದೇ ವಿಡಿಯೋವನ್ನು viralbhayani ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. 

ಇದನ್ನೂ ಓದಿ: ಅಂಗಡಿಗೆ ನುಗ್ಗಿದ ಕಳ್ಳ, ಅಲ್ಲಿದ್ದ ಮದ್ಯಕ್ಕೆ ಮನಸೋತು ಕುಡಿದು ಅಲ್ಲೇ ಮಲಗಿದ: ಮುಂದಾಗಿದ್ದು ಬಲು ರೋಚಕ

ಈ ವಿಡಿಯೋ ಕಮೆಂಟ್ ಮಾಡಿರುವ ನೆಟ್ಟಿಗರು, ಇಷ್ಟು ದೊಡ್ಡ ಕನ್ಫರ್ಮೇಷನ್ ತೋರಿಸಿದ್ರೆ ಏರ್‌ಲೈನ್ಸ್ ಸಿಬ್ಬಂದಿ ಮನೆಯವರೆಗೂ ಬಂದು ನಿಮ್ಮನ್ನು ಬಿಟ್ಟು ಹೋಗುತ್ತಾರೆ. ಸೂಪರ್, ತುಂಬಾ ಫನ್ನಿ  ಎಂದು ಬರೆದು ನಗುವ ಎಮೋಜಿಯನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. ಈ ರೀತಿ ವಿದೇಶಿ ಕೆಲ ಯುವಕರು ಮಾಡಿದ್ದರು. ಅದನ್ನೇ ಇವರು ಕಾಪಿ ಮಾಡಿದ್ದಾರೆ ಎಂಬ ಕೆಮಂಟ್‌ಗಳು ಬಂದಿವೆ. 

ಇದನ್ನೂ ಓದಿ: ವಧು ಕಣ್ಣೀರಿಟ್ಟು ಹೇಳಿದ್ದನ್ನು ನೋಡಿ ವರ ಶಾಕ್; ಇಲ್ಲೇ ಹಿಂಗೆ, ಮುಂದೆ ಹೆಂಗೆ ಎಂದ ನೆಟ್ಟಿಗರು

 
 
 
 
 
 
 
 
 
 
 
 
 
 
 

A post shared by Vinod (@vins.740)

click me!