ಉನ್ನಾವೋ ಪ್ರಕರಣ: ಪ್ರೀತಿ ನಿರಾಕರಿಸಿದ ಕಾರಣ ನೀರಿನಲ್ಲಿ ಕೀಟನಾಶಕ ಬೆರೆಸಿ ಕೊಲೆ!

Published : Feb 20, 2021, 02:35 PM IST
ಉನ್ನಾವೋ ಪ್ರಕರಣ: ಪ್ರೀತಿ ನಿರಾಕರಿಸಿದ ಕಾರಣ ನೀರಿನಲ್ಲಿ ಕೀಟನಾಶಕ ಬೆರೆಸಿ ಕೊಲೆ!

ಸಾರಾಂಶ

ಫೋನ್ ನಂಬರ್ ನೀಡಲು ನಿರಾಕರಿಸಿದ 18ರ ಯುವತಿ ಕೊಲೆಗೈಯಲು ಪಕ್ಕಾ ಪ್ಲಾನ್ ಮಾಡಿದ ಆರೋಪಿ ವಿನಯ್ ಇದೀಗ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ವಿನಯ್ ಪ್ಲಾನ್‌ಗೆ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದು, ಮತ್ತೊರ್ವಳ ಸ್ಥಿತಿ ಗಂಭೀರವಾಗಿದೆ. ಪೊಲೀಸರ ಅತಿಥಿಯಾಗಿರುವ ವಿನಯ್ ಹೇಳಿದ ಪ್ರೀತಿ-ಕೊಲೆ ಕತೆ ಇಲ್ಲಿದೆ.

ಉನ್ನಾವೋ(ಫೆ.20):  ಉತ್ತರ ಪ್ರದೇಶದ ಉನ್ನಾವೋ ಮತ್ತೆ ಸುದ್ದಿಯಲ್ಲಿದೆ. ಆರೋಪಿ ವಿನಯ್ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದರೆ, ಮತ್ತೊರ್ವ ಯುವತಿ ಸ್ಥಿತಿ ಗಂಭೀರವಾಗಿದೆ.  ಪ್ರೀತಿ ನಿರಾಕರಿಸಿದ, ಫೋನ್ ನಂಬರ್ ನೀಡಲು ನಿರಾಕರಿಸಿ 18ರ ಯುವತಿಯನ್ನು ಕೊಲೆಗೈಯಲು ಪ್ಲಾನ್ ಮಾಡಿದ ಆರೋಪಿ ವಿನಯ್ ಅಲಿಯಾಸ್ ಲಂಬು ಇದೀಗ ಪೊಲೀಸ ಅತಿಥಿಯಾಗಿದ್ದಾನೆ.

ರೇಪ್‌ ಕೇಸಿನ ದೋಷಿ ಮಾಜಿ ಬಿಜೆಪಿ ಶಾಸಕ ಈಗ ಹತ್ಯೆ ಕೇಸಲ್ಲೂ ಅಪರಾಧಿ!.

ಮೇವು ತರಲು ಹೋದ ಮೂವರು ಸಹೋದರಿಯರು ಬಬುಹಾರ ಗ್ರಾಮದ ಗದ್ದೆಯಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದರೆ, ಮತ್ತೊರ್ವಳ ಸ್ಥಿತಿ ಚಿಂತಾಜನಕವಾಗಿತ್ತು. ಈ ಸಂಬಂಧ 24 ಗಂಟೆಯಲ್ಲಿ ಆರೋಪಿ ವಿನಯ್ ಬಂಧಿಸಿದ ಪೊಲೀಸರು ಸ್ಫೋಟ ಮಾಹಿತಿಯನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಲಕಿಯರ ಕುಟುಂಬದ ಗದ್ದೆ ಬಳಿ ಆರೋಪಿ ವಿನಯ್ ಗದ್ದೆ ಕೂಡ ಇತ್ತು. ಹೀಗಾಗಿ ಬಾಲಕಿಯರು ಜಾನುವಾರುಗಳಿಗೆ ಮೇವು, ಗದ್ದೆ ಕೆಲಸಕ್ಕೆ ತೆರಳಿದಾಗ, ಈ ಆರೋಪಿ ವಿನಯ್ ಕಾದು ಕುಳಿತು 18ರ ಯುವತಿ ಬಳಿ ಮಾತನಾಡುತ್ತಿದ್ದ. ಫೋನ್ ನಂಬರ್ ಹಂಚಿಕೊಳ್ಳಲು ವಿನಯ್ ಹೇಳಿದ್ದಾರೆ. ಇದಕ್ಕೆ 18ರ ಬಾಲಕಿ ನಿರಾಕರಿಸಿದ್ದಾರೆ. ತನ್ನ ಪ್ರೀತಿ ನಿರಾಕರಿಸುತ್ತಿದ್ದಾಳೆ ಎಂದು ಅರಿತ ವಿನಯ್, 18ರ ಬಾಲಕಿಯನ್ನು ಕೊಲೆಗೈಯಲು ನಿರ್ಧರಿಸಿದ್ದಾನೆ.

ರೇಪ್‌ ಆದ್ಮೇಲೆ ಬಂದು ದೂರು ಕೊಡು: ಉನ್ನಾವ್‌ ಪೊಲೀಸರ ಉಡಾಫೆ

ಮೂವರು ಬಾಲಕಿಯರು ಗದ್ದೆಗೆ ಬಂದು ಮೇವು ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದಾರೆ. ದಣಿದಾಗ ತಾವು ತಂದಿದ್ದ ತಿಂಡಿಯನ್ನು ತೆಗೆದು ಸೇವಿಸಲು ಮುಂದಾಗಿದ್ದಾರೆ. ಇದೇ ಸಮಯಕ್ಕೆ ಕಾದು ಕುಳಿತ ವಿನಯ್, ತನ್ನ ಸ್ನೇಹಿತನಿಂದ ತಿಂಡಿ ತರಿಸಿ ಈ ಇಬ್ಬರು ಬಾಲಕಿ ಹಾಗೂ ಯುವತಿಯರ ಜೊತೆ ಸೇವಿಸಿದ್ದಾನೆ. ಬಳಿಕ ಈ ಯುವತಿಗೆ ಕೀಟನಾಶಕ ಬೆರೆಸಿದ ನೀರನ್ನು ಕುಡಿಯಲು ನೀಡಿದ್ದಾನೆ. 

18ರ ಯುವತಿ ನೀರು ಕುಡಿದ ಬೆನ್ನಲ್ಲೇ, ಆಕೆಯ ತಂಗಿಯರಿಬ್ಬರು ನೀರು ಕುಡಿದಿದ್ದಾರೆ. ಕೀಟನಾಶಕ ಬೆರೆಸಿದ ನೀರು ಕುಡಿದ ಬೆನ್ನಲ್ಲೇ ಮೂವರು ಅಸ್ವಸ್ಥಗೊಂಡಿದ್ದಾರೆ. ಇತ್ತ ಆರೋಪಿ ವಿನಯ್ ಹಾಗೂ ಆತನ ಸ್ನೇಹಿತ ಅಲ್ಲಿಂದ ಪರಾರಿಯಾಗಿದ್ದಾರೆ. ಆರೋಪಿ ವಿನಯ್ ಪೊಲೀಸರ ಬಳಿ ನೀರಿನಲ್ಲಿ ಕೀಟನಾಶಕ ಬೆರೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಇದರಿಂದ ಇಬ್ಬರು ದಲಿತ ಬಾಲಕಿಯರ ಪ್ರಾಣ ಪಕ್ಷಿ ಹಾರಿಹೋಗಿದ್ದರೆ, 18ರ ದಲಿತ ಬಾಲಕಿ ಇದೀಗ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ.

ವಿನಯ್ ಹೇಳಿಕೆಯಲ್ಲಿ ಕೆಲ ಗೊಂದಲಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನೀರಿನಲ್ಲಿ ಕೀಟನಾಶ ಬೆರೆಸಿರುವುದು ದೃಢಪಟ್ಟಿದೆ. ಆದರೆ ಈ ನೀರನ್ನು ಬಲವಂತವಾಗಿ ಕುಡಿಸಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.  ವಿಯನ್ ಜೊತೆ 15 ವರ್ಷದ ಅಪ್ರಾಪ್ತನನ್ನು ಈ ಪ್ರಕರಣ ಸಂಬಂಧ ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು