ರೇಪ್‌ ಕೇಸಿನ ದೋಷಿ ಮಾಜಿ ಬಿಜೆಪಿ ಶಾಸಕ ಈಗ ಹತ್ಯೆ ಕೇಸಲ್ಲೂ ಅಪರಾಧಿ!

ರೇಪ್‌ ಕೇಸಿನ ದೋಷಿ ಸೇಂಗರ್‌ ಈಗ ಹತ್ಯೆ ಕೇಸಲ್ಲೂ ಅಪರಾಧಿ| ಅತ್ಯಾಚಾರ ಪ್ರಕರಣದಲ್ಲಿ ದೋಷ ಸಾಬೀತಾಗಿ ಅಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಜೆಪಿಯ ಉಚ್ಛಾಟಿತ ಶಾಸಕ ಕುಲ್‌ದೀಪ್‌ ಸಿಂಗ್‌ ಸೇಂಗರ್‌

Unnao rape case Kuldeep Singh Sengar convicted for death of victim father

ನವದೆಹಲಿ[ಮಾ.05]: ಉನ್ನಾವ್‌ ಅತ್ಯಾಚಾರ ಪ್ರಕರಣದಲ್ಲಿ ದೋಷ ಸಾಬೀತಾಗಿ ಅಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಜೆಪಿಯ ಉಚ್ಛಾಟಿತ ಶಾಸಕ ಕುಲ್‌ದೀಪ್‌ ಸಿಂಗ್‌ ಸೇಂಗರ್‌, ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣದಲ್ಲೂ ದೋಷಿ ಎಂದು ಇಲ್ಲಿ ಕೋರ್ಟ್‌ ಹೇಳಿದೆ.

ಅತ್ಯಾಚಾರಕ್ಕೆ ಗುರಿಯಾಗಿದ್ದ ಸಂತ್ರಸ್ತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮನೆ ಮುಂದೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಮರು ದಿನವೇ, ಸೇಂಗಾರ್‌ ಬೆಂಬಲಿಗರು ಸಂತ್ರಸ್ತೆಯ ತಂದೆ ಮೇಲೆ ಸುಳ್ಳು ಕೇಸು ದಾಖಲಿಸಿ, ಹಲ್ಲೆಯನ್ನೂ ನಡೆಸಿದ್ದರು.

ಉನ್ನಾವೋ ಅತ್ಯಾಚಾರ: ಉಚ್ಛಾಟಿತ ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ!

ಬಳಿಕ 2018 ಏ.9 ರಂದು ಪೊಲೀಸ್‌ ಕಸ್ಟಡಿಯಲ್ಲೇ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಸೇಂಗಾರ್‌ ಮೇಲೆ ಕೇಸ್‌ ದಾಖಲಾಗಿತ್ತು.

Latest Videos
Follow Us:
Download App:
  • android
  • ios