
ನವದೆಹಲಿ (ಫೆ.10): ಕೇಂದ್ರ ಸಚಿವ ಅನುರಾಗ್ ಠಾಕೂರ್, 17ನೇ ಲೋಕಸಭೆಯ ಕೊನೆ ಅಧಿವೇಶನದ ಕೊನೆಯ ದಿನ ಬಹಳ ವಿಶೇಷವಾಗಿ ಕಂಡರು. ಅವರು ಶನಿವಾರ ಕೇಸರಿ ಬಣ್ಣದ ಹುಡ್ಡಿ ಧರಿಸಿ ಆಗಮಿಸಿದ್ದರು. ಸಂಸತ್ ಭವನದ ಎದುರು ನಮೋ ಹ್ಯಾಟ್ರಿಕ್ ಎಂದು ಬರೆದಿದ್ದ ಕೇಸರಿ ಬಣ್ಣದ ಜಾಕೆಟ್ ತೊಟ್ಟು ಬಂದಿದ್ದ ಅನುರಾಗ್ ಠಾಕೂರ್, ಪತ್ರಕರ್ತರ ಉದ್ದೇಶಿಸಿ ಮಾತಾಡಿದರು. ಇದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಏರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಅದರೊಂದಿಗೆ ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಮೂರನೇ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ಅಗತ್ಯವಾಗಿದೆ ಎಂದಿದ್ದಾರೆ. ಈ ಕುರಿತಾಗಿ ಎಕ್ಸ್‌ನಲ್ಲಿಯೂ ವಿಡಿಯೋ ಪೋಸ್ಟ್ ಮಾಡಿರುವ ಅನುರಾಗ್ ಠಾಕೂರ್, 'ಸತತ ಮೂರನೇ ಅವಧಿಗೆ ಪ್ರಧಾನಿ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಏರಲಿದೆ. ಪ್ರಧಾನಿ ಮೋದಿ ಯಾವಾಗಲೂ ಅಭಿವೃದ್ಧಿಯ ಪರವಾಗಿದ್ದಾರೆ. ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕೀ ಬಾರ್ 400 ಪಾರ್' (ಮೂರನೇ ಬಾರಿ ಮೋದಿ ಸರ್ಕಾರ, ಈ ಬಾರಿ 400 ಆಚೆಗೆ)' ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ಸಂಸದ ರವಿ ಕಿಶನ್, ಅನುರಾಗ್ ಠಾಕೂರ್ ಅವರ ಹುಡ್ಡಿ ಜಾಕೆಟ್ ಬಗ್ಗೆ ಮಾತನಾಡಿದ್ದಾರೆ. ಅವರ ಹೃದಯರ ಮಾತು ಹುಡ್ಡಿ ಮೂಲಕ ಆಚೆ ಬಂದಿದೆಯಷ್ಟೇ. ಇದನ್ನು ಇಡೀ ದೇಶವೇ ಧರಿಸಲು ಬಯಸುತ್ತದೆ. ಏಕೆಂದರೆ, ಭಗವಾನ್ ರಾಮ ಯಾವ ರೀತಿ ಜನರ ಹೃದಯದಲ್ಲಿ ನೆಲೆಸಿದ್ದಾನೆಯೋ, ಪ್ರಧಾನಿ ನರೇಂದ್ರ ಮೋದಿ ಕೂಡ ಅವರಂತೆ ಎಲ್ಲರ ಹೃದಯದಲ್ಲಿ ಸ್ಥಾನ ಪಡೆಯಲು ಆರಂಭಿಸಿದ್ದಾರೆ' ಎಂದು ಹೇಳಿದ್ದಾರೆ.
ಸುಧಾರಣೆ, ನಿರ್ವಹಣೆ, ಬದಲಾವಣೆ ಇದು ನಮ್ಮ ಮಂತ್ರ ಎಂದ ಪ್ರಧಾನಿ ಮೋದಿ
ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗವು ಅಧಿಕೃತವಾಗಿ ಘೋಷಿಸದಿದ್ದರೂ, 18 ನೇ ಲೋಕಸಭೆಯ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆಯು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆಡಳಿತಾರೂಢ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ವಿರೋಧ ಪಕ್ಷದ ಇಂಡಿಯಾ ಬ್ಲಾಕ್ ವಿರುದ್ಧ ಸ್ಪರ್ಧಿಸಲು ಸಿದ್ಧತೆ ನಡೆಸಿದೆ. ಎನ್‌ಡಿಎ ನೇತೃತ್ವದ 17ನೇ ಲೋಕಸಭೆ ಅಧಿವೇಶನದ ಅಧಿಕೃತ ಅವಧಿ ಜೂನ್ 16ಕ್ಕೆ ಮುಕ್ತಾಯವಾಗಲಿದ್ದು, ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿವೆ.
ಎರಡೂ ಸದನಗಳಲ್ಲಿ ರಾಮ ಮಂದಿರದ ನಿರ್ಣಯ ಮಂಡಿಸಲಿದೆ ಕೇಂದ್ರ ಸರ್ಕಾರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ