ಸುಧಾರಣೆ, ನಿರ್ವಹಣೆ, ಬದಲಾವಣೆ ಇದು ನಮ್ಮ ಮಂತ್ರ ಎಂದ ಪ್ರಧಾನಿ ಮೋದಿ

Published : Feb 10, 2024, 05:13 PM ISTUpdated : Feb 10, 2024, 05:29 PM IST
ಸುಧಾರಣೆ, ನಿರ್ವಹಣೆ, ಬದಲಾವಣೆ ಇದು ನಮ್ಮ ಮಂತ್ರ ಎಂದ ಪ್ರಧಾನಿ ಮೋದಿ

ಸಾರಾಂಶ

17ನೇ ಲೋಕಸಭೆಯ ಕೊನೆಯ ಅಧಿವೇಶನದಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದ ಕಳೆದ ಐದು ವರ್ಷಗಳ ಸಾಧನೆಗಳ ಬಗ್ಗೆ ಮಾತನಾಡಿದರು. ಈ ಲೋಕಸಭೆಯ ಶೆ. 97ರಷ್ಟು ಉತ್ಪಾದಕತೆ ದಾಖಲು ಮಾಡಿದೆ ಎಂದರು.  

ನವದೆಹಲಿ (ಫೆ.10): 17ನೇ ಲೋಕಸಭೆಯ ಕೊನೆಯ ಅಧಿವೇಶನದ ಕೊನೆಯ ದಿನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಳೆದ ಐದು ವರ್ಷಗಳಲ್ಲಿ ಆದ ಬದಲಾವಣೆ ಹಾಗೂ ಮಹತ್ವದ ವಿಚಾರಗಳ ಬಗ್ಗೆ ಮಾತನಾಡಿದರು. ಹೊಸ ಸಂಸತ್‌ ಭವನ ನಿರ್ಮಾಣ, ಸೆಂಗೋಲ್‌ ಸಂಪ್ರದಾಯ ಸ್ಥಾಪನೆಯಂಥ ವಿಚಾರಗಳನ್ನು ಅವರು ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಈ ಬಾರಿ ಜಿ20 ಶೃಂಗಸಭೆಯ ಆತಿಥ್ಯ ಭಾರತಕ್ಕೆ ಸಿಕ್ಕಿತ್ತು. ಆತಿಥೇಯ ರಾಷ್ಟ್ರವಾಗಿ ಭಾರತ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಭಾರತ ಪ್ರಜಾಪ್ರಭುತ್ವದ ತಾಯಿ ಎನ್ನುವುದನ್ನು ನೀವು ಜಗತ್ತಿಗೆ ತೋರಿಸಿದ್ದೀರಿ ಎಂದು ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ. ಜಿ20 ವೇಳೆ ವಿಶ್ವದ ಎಲ್ಲಾ ದೇಶಗಳ ಸ್ಪೀಕರ್‌ಗಳ ಸಮಾವೇಶ ಕೂಡ ನಡೆಯಿತು ಎಂದು ಮೋದಿ ಹೇಳಿದರು.

ಇದು ಲೋಕತಂತ್ರದ ಅತ್ಯಂತ ಮಹತ್ವದ ದಿನ ಎನ್ನುತ್ತಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಐದು ವರ್ಷಗಳಲ್ಲಿ ದೇಶ ಭಾರೀ ಬದಲಾವಣೆ ಕಂಡಿದೆ. ಲೋಕಸಭೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಿದ್ದಾರೆ. 17ನೇ ಲೋಕಸಭೆಯಲ್ಲೂ ಜನರು ಆಶೀರ್ವದಿಸುವ ನಿರೀಕ್ಷೆ ಇದೆ. ಎಲ್ಲಾ ಸದಸ್ಯರಿಗೂ ನನ್ನ ಅಭಿನಂದನೆಗಳು.  ಈ ವೇಳೆ ಸ್ಪೀಕರ್‌ ಓಂ ಬಿರ್ಲಾ ಅವರ ಕಾರ್ಯನಿರ್ವಹಣೆಯ ಬಗ್ಗೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು. ಕರೋನಾದ ಕಠಿಣ ಸಮಯದಲ್ಲೂ ಲೋಕಸಭೆ ಕೆಲಸ ಮಾಡಿದೆ. ಎಲ್ಲಾ ಸನ್ನಿವೇಶಗಳಲ್ಲೂ ಸಂಸದರು ಧೈರ್ಯದಿಂದ ಕೆಲಸ ಮಾಡಿದ್ದಾರೆ.   ಈ ಐದು ವರ್ಷಗಳಲ್ಲಿ ಇಡೀ ಮಾನವ ಸಂಕಟ ಎದುರಾಗಿತ್ತು. ಯಾರು ಉಳಿಯುತ್ತಾರೆ,  ಯಾರು ಉಳಿಯಲ್ಲ ಎನ್ನುವ ಸ್ಥಿತಿ ಎದುರಾಗಿತ್ತು. ಅಂಥ ಹೊತ್ತಲ್ಲೂ ತಮ್ಮ  ಕರ್ತವ್ಯ ಯಶಸ್ವಿಯಾಗಿ ನಿರ್ವಹಣೆ ಮಾಡಿದರು. ಅಂಥ ಹೊತ್ತಲ್ಲಿ ಸಂಸದ ನಿಧಿ ಬಿಡುವವಂತೆ ಒಂದು ಸಾಲಿನ ನಿರ್ಣಯ ಇಟ್ಟಾಗ ಎಲ್ಲರೂ ಒಪ್ಪಿದ್ದರು. ಅಲ್ಲದೇ ಸಂಸದರ ವೇತನ ಕಡಿತಕ್ಕೂ ಒಪ್ಪಿದ್ದರು ಎಂದು ಮೋದಿ ಹೇಳಿದರು.

ಗುಜರಾತ್‌ ಸಿಎಂ ಆಗಿದ್ದಾಗ ಮೋದಿ ಮಾಡಿದ್ದ ಟ್ವೀಟ್‌ ನೆನಪಿಸಿ ಸಿದ್ದರಾಮಯ್ಯ ಕಿಡಿ

17ನೇ ಲೋಕಸಭೆಯ ಕೆಲಸವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಅದರ ಮೊದಲ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ 30 ಮಸೂದೆಗಳನ್ನು ಅಂಗೀಕರಿಸಲಾಯಿತು. "ಇದು ಕೂಡ ಒಂದು ದಾಖಲೆಯಾಗಿದೆ" ಎಂದು ಅವರು ಹೇಳಿದರು.  'ಅನೇಕ ಸುಧಾರಣೆಗಳು ಈ ವರ್ಷದಲ್ಲಿ ಸಂಭವಿಸಿದವು. ದೇಶವು ಬದಲಾವಣೆಯತ್ತ ಸಾಗುತ್ತಿದೆ. ಹಲವು ತಲೆಮಾರುಗಳು ಕಾಯುತ್ತಿದ್ದ ಕೆಲಸಗಳು ಈ ಲೋಕಸಭೆಯಲ್ಲಿ ಸಂಭವಿಸಿದವು. ಅನೇಕ ತಲೆಮಾರುಗಳು ಒಂದೇ ಸಂವಿಧಾನದ ಕನಸು ಕಂಡಿದ್ದವು, ಈ ಸದನವು 370 ನೇ ವಿಧಿಯನ್ನು ರದ್ದುಗೊಳಿಸಿತು. ಜನರು ಸಂವಿಧಾನ ರಚನೆಯಲ್ಲಿ ಪಾತ್ರವಹಿಸಿದವರು ಇಂದು ನಮ್ಮನ್ನು ಆಶೀರ್ವದಿಸಬೇಕು.ಕಾಶ್ಮೀರದ ಜನರು ಸಾಮಾಜಿಕ ನ್ಯಾಯದಿಂದ ದೂರವಾಗಿದ್ದರು.ಇಂದು ನಾವು ಅದನ್ನು ಅವರ ಬಳಿಗೆ ಕೊಂಡೊಯ್ದಿದ್ದೇವೆ.ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಕಠಿಣ ಕಾನೂನುಗಳನ್ನು ಮಾಡಿದ್ದೇವೆ.ಹೊಸ ಸದನವು ದೊಡ್ಡ ಸುಧಾರಣೆಗೆ ಸಾಕ್ಷಿಯಾಗಿದೆ. ನಾರಿ ಶಕ್ತಿ ವಂದನ್ ಅಧಿನಿಯಮ್ ಅಂಥ ಒಂದು ಮಸೂದೆ ಎಂದು ಮೋದಿ ಹೇಳಿದರು.

ನರೇಂದ್ರ ಮೋದಿ ಅಧಿಕಾರದಲ್ಲಿ ಒಂದಾದ್ರೂ ಡ್ಯಾಮ್ ಕಟ್ಟಿದ್ರೆ ಹೇಳಲಿ, ಅವರ ಗುಲಾಮನಾಗ್ತೀನಿ: ಶಾಸಕ ನರೇಂದ್ರಸ್ವಾಮಿ

"ನ್ಯಾಯಾಲಯವು ಮುಸ್ಲಿಂ ಮಹಿಳೆಯರ ಪರವಾಗಿ ಆದೇಶ ನೀಡಿತು. ಆದರೆ ಅವರು ಅದರ ಪ್ರಯೋಜನವನ್ನು ಆನಂದಿಸಲು ಸಾಧ್ಯವಾಗಲಿಲ್ಲ. ಈ ಲೋಕಸಭೆಯು ಪೀಳಿಗೆಯ ಅನ್ಯಾಯವನ್ನು ಕೊನೆಗೊಳಿಸಿತು" ಎಂದು ತ್ರಿವಳಿ ತಲಾಖ್ ಅನ್ನು ಕೊನೆಗೊಳಿಸಿದ್ದರ  ಬಗ್ಗೆ ಮಾತನಾಡಿದರು. "ನಾವಿನ್ಯತೆ ಇಲ್ಲದೆ ಯಾವುದೇ ಸರ್ಕಾರವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಈ ಸದನವು ನಾವೀನ್ಯತೆಯನ್ನು ಉತ್ತೇಜಿಸಲು ಕಾನೂನು ಚೌಕಟ್ಟನ್ನು ರಚಿಸಿದೆ. ಅದಕ್ಕಾಗಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಆರಂಭಿಸಲಾಗಿದೆ. ಈ ಕಾರಣದಿಂದಾಗಿ, ನಮ್ಮ ದೇಶವು ಸಂಶೋಧನೆ ಮತ್ತು ನಾವೀನ್ಯತೆ ಕಾರ್ಯಗಳಿಗೆ ಜಾಗತಿಕ ಕೇಂದ್ರವಾಗಬಹುದು" ಎಂದು ಪ್ರಧಾನಿ ಮೋದಿ ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?