Cryptocurrency Deadline : ಕ್ರಿಪ್ಟೋ ಕರೆನ್ಸಿ , ಬಿಟ್ ಕಾಯಿನ್ ಹೊಂದಿದವರಿಗೆ ಡೆಡ್‌ಲೈನ್?

Published : Dec 08, 2021, 04:04 AM IST
Cryptocurrency Deadline : ಕ್ರಿಪ್ಟೋ ಕರೆನ್ಸಿ , ಬಿಟ್ ಕಾಯಿನ್ ಹೊಂದಿದವರಿಗೆ  ಡೆಡ್‌ಲೈನ್?

ಸಾರಾಂಶ

* ಕ್ರಿಪ್ಟೋ ಕರೆನ್ಸಿ ಸ್ವಯಂ ಘೋಷಣೆ ಮಾಡಿಕೊಳ್ಳಲು ಜನರಿಗೆ ಗಡುವು? * ಹಾಲಿ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಸಿದ್ಧತೆ * ನಿಯಮ ಉಲ್ಲಂಘಿಸಿದವರಿಗೆ .20 ಕೋಟಿ ದಂಡ? *  ಸಣ್ಣ ಹೂಡಿಕೆದಾರರ ರಕ್ಷಣೆಗೆ ಕನಿಷ್ಠ ಮಿತಿ ಸಂಭವ

ನವದೆಹಲಿ(ಡಿ. 08)ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯವಾಗಿರುವ ಕ್ರಿಪ್ಟೋಕರೆನ್ಸಿ(cryptocurrency) ಹೂಡಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲು ಸಂಸತ್ತಿನ ಹಾಲಿ ಅಧಿವೇಶನದಲ್ಲೇ (Parliament winter session)ಕೇಂದ್ರ ಸರ್ಕಾರ  (Union Govt) ಮಸೂದೆಯೊಂದನ್ನು ಮಂಡನೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿರುವ ವ್ಯಕ್ತಿಗಳು ತಾವು ಎಷ್ಟುಹೂಡಿಕೆ ಮಾಡಿದ್ದೇವೆ ಎಂಬುದನ್ನು ಸ್ವಯಂ ಘೋಷಣೆ ಮಾಡಿಕೊಳ್ಳಲು ಸರ್ಕಾರ ಗಡುವು ನಿಗದಿಪಡಿಸುವ ಸಂಭವ ಇದೆ ಎನ್ನಲಾಗಿದೆ.

ಇದೇ ವೇಳೆ, ಡಿಜಿಟಲ್‌ ಕರೆನ್ಸಿ ವ್ಯವಹಾರದ ಮೇಲೆ ನಿಗಾ ಇಡಲು ಮಾರುಕಟ್ಟೆನಿಯಂತ್ರಣ ಸಂಸ್ಥೆ ‘ಸೆಬಿ’(SEBI)ಯನ್ನು ನೇಮಕ ಮಾಡುವ ಸಂಭವ ಇದೆ. ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿದವರಿಗೆ 20 ಕೋಟಿ ರು.ವರೆಗೆ ದಂಡ ಅಥವಾ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸುವ ಸಂಭವ ಇದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಉದ್ದೇಶಿತ ಮಸೂದೆಯಲ್ಲಿ ಕ್ರಿಪ್ಟೋಕರೆನ್ಸಿಯನ್ನು ‘ಕ್ರಿಪ್ಟೋಅಸೆಟ್‌’ ಎಂದು ಪರಿಗಣಿಸಲಾಗುತ್ತದೆ.

ಆರ್‌ಬಿಐ ಕರೆನ್ಸಿ ಪ್ರಸ್ತಾಪ ಇಲ್ಲ:  ಆದರೆ ಮಸೂದೆಯಲ್ಲಿ ರಿಸವ್‌ರ್‍ ಬ್ಯಾಂಕ್‌ ಮೂಲಕ ಅಧಿಕೃತ ಡಿಜಿಟಲ್‌ ಕರೆನ್ಸಿ ಬಿಡುಗಡೆ ಮಾಡಿಸುವ ಪ್ರಸ್ತಾವ ಇಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಣ್ಣ ಹೂಡಿಕೆದಾರರು ಕ್ರಿಪ್ಟೋಕರೆನ್ಸಿಯತ್ತ ಆಕರ್ಷಿತರಾಗುವುದನ್ನು ತಡೆಯಲು, ಡಿಜಿಟಲ್‌ ಕರೆನ್ಸಿಯಲ್ಲಿ ಬಂಡವಾಳ ಹೂಡಿಕೆಗೆ ಕನಿಷ್ಠ ಮೊತ್ತವನ್ನು ನಿಗದಿಪಡಿಸುವ ಕುರಿತು ಸರ್ಕಾರ ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಹಣಕಾಸು ಸಚಿವಾಲಯದ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆಗೆ ಲಭಿಸಿಲ್ಲ ಎಂದು ಮಾಧ್ಯಮಗಳು ತಿಳಿಸಿವೆ.

ಬಿಟ್ ಕಾಯಿನ್ ಬಳಸಿದರೆ ಜೈಲೂಟ

ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಮಸೂದೆಯನ್ನು ಪುನಾಪರಿಶೀಲಿಸಲಾಗುತ್ತಿದೆ. ಆದರೆ ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡುವ ಪ್ರಸ್ತಾವ ಇಲ್ಲ ಎಂದು ಕಳೆದ ವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದರು.

 ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ರದ್ದು ಮಾಡಲಾಗುತ್ತದೆ ಎಂಬ ಸುಳಿವನ್ನು ಕೇಂದ್ರ ವಿತ್ತ ಸಚಿವಾಲಯ (Finance Ministry) ನೀಡಿತ್ತು.  ಕೇಂದ್ರದ ಕರೆನ್ಸಿ ಉಪ ನಿರ್ದೇಶಕ ಸಂಜು ಯಾದವ್‌ ಅವರು, ‘ದೇಶದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ಕಾನೂನಾತ್ಮಕವಾಗಿ ಒಪ್ಪಿಲ್ಲ. ಆದರೆ ಸರ್ಕಾರವೇ ಶೀಘ್ರದಲ್ಲೇ ಡಿಜಿಟಲ್‌ ಕರೆನ್ಸಿಯನ್ನು ಜಾರಿಗೆ ತರಬಹುದು. ಉಳಿದ ಕ್ರಿಪ್ಟೋ ಕರೆನ್ಸಿ ನಿಷೇಧ ಮಾಡಬಹುದು’ ಎಂದು ಹೇಳಿದ್ದಾರೆ. ಆರ್‌ಬಿಐ ಕೂಡ ಈ ಹಿಂದೆ, ಸರ್ಕಾರದ ಕ್ರಿಪ್ಟೋ ಕರೆನ್ಸಿ ಜಾರಿಗೆ ಬರಬಹುದು ಎಂದಿತ್ತು.

ಬಿಟ್‌ ಕಾಯಿನ್ ಅಂದ್ರೇನು?

ಬಿಟ್‌ಕಾಯಿನ್ ಎನ್ನುವುದು 2009 ರಲ್ಲಿ ರಚಿಸಲಾದ ಡಿಜಿಟಲ್ ಕರೆನ್ಸಿಯಾಗಿದೆ.  ಸಂತೋಷಿ ನಕಮೋಟೋ ಎಂ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಬಿಟ್ ಕಾಯಿನ್ ಅಂದ್ರೆ ಕಣ್ಣಿಗೆ ಕಾಣಲ್ಲ. ಅದೊಂದು ಡಿಜಿಟಲ್ ಕರೆನ್ಸಿ. 

2009ರಲ್ಲಿ  ಇದೀಗ ಮಾರ್ಚ್‌ 2021ರ ಅಂಕಿಅಂಶವನ್ನು ನೋಡಿದರೆ ಇಡೀ ವಿಶ್ವದಲ್ಲಿ ಒಟ್ಟು 18.6 ದಶ ಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 927 ಬಿಲಿಯನ್ ಅಮೆರಿಕನ್ ಡಾಲರ್.

ಇದೊಂದು ಡಿಜಿಟಲ್ ಹಣಕಾಸು ಅಥವಾ ಡಿಜಿಟಲ್ ಕರೆನ್ಸಿ ಆಗಿದೆ. ಅಂದರೆ ಆನ್ಲೈನ್ ಮೂಲಕ ಪಾವತಿಸಲು ನಿಜವಾದ ನಾಣ್ಯವನ್ನು ನೀಡಬೇಕಾಗಿಲ್ಲ. ಇಂದು ಸುಮಾರು 800ರಷ್ಟು ಇಂತಹ ಕ್ರಿಪ್ಟೋಕರೆನ್ಸಿ (cryptocurrency) ಗಳಿವೆ. ಈ ತಂತ್ರಜ್ಞಾನವನ್ನು ಬ್ಲಾಕ್ಚೈನ್ (blockchain) ಎಂಬ ನೂತನ ವಿಧಾನದ ಆಧಾರದಲ್ಲಿ ಸಾರ್ವಜನಿಕರಿಗೆ ಮಿಥ್ಯಾಹಣದ ಮೂಲಕ ಸುಲಭವಾಗಿ ತಮ್ಮ ಹಣಕಾಸಿನ ವ್ಯವಹಾರಗಳನ್ನು ವಿಶ್ವಮಟ್ಟದಲ್ಲಿ ನಡೆಸಲು ಸಾಧ್ಯವಾಗುತ್ತದೆ.

ಡಿಜಿಟಲ್‌ ಕರೆನ್ಸಿ ವ್ಯವಹಾರದ ಮೇಲೆ ನಿಗಾ ಇಡಲು ಮಾರುಕಟ್ಟೆನಿಯಂತ್ರಣ ಸಂಸ್ಥೆ ‘ಸೆಬಿ’ಯನ್ನು ನೇಮಕ ಮಾಡುವ ಸಂಭವ ಇದೆ. ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿದವರಿಗೆ 20 ಕೋಟಿ ರು.ವರೆಗೆ ದಂಡ ಅಥವಾ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸುವ ಸಂಭವ ಇದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ