ಕೇಂದ್ರ ಬಜೆಟ್‌ಗೆ ಕಾಂಗ್ರೆಸ್ ನಾಯಕ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಸಂತಸ..!

By Anusha Kb  |  First Published Jul 23, 2024, 2:27 PM IST

ವಿರೋಧ ಪಕ್ಷಗಳು ಆಡಳಿತ ಪಕ್ಷ ಮಂಡಿಸುವ ಬಜೆಟ್ ಅನ್ನು ಮೆಚ್ಚಿಕೊಳ್ಳುವುದು, ನಿಷ್ಪಕ್ಷಪಾತವಾಗಿ ಮಾತನಾಡುವುದು ತೀರಾ ಕಡಿಮೆ. ಹಾಗಿದ್ದೂ ಕಾಂಗ್ರೆಸ್ ನಾಯಕ ಚಿದಂಬರಂ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ, ಅದಕ್ಕೆ ಕಾರಣವೂ ಇದೆ ಈ ಬಗ್ಗೆ ಡಿಟೇಲ್ಡ್ ಸ್ಟೋರಿ.


ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಮಂಡಿಸಿದ 2024 ರ ಬಜೆಟ್ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಬಜೆಟ್ ಎಷ್ಟೇ ಚೆನ್ನಾಗಿರಲಿ, ವಿರೋಧ ಪಕ್ಷಗಳು ಆಡಳಿತ ಪಕ್ಷ ಮಂಡಿಸುವ ಬಜೆಟ್ ಅನ್ನು ಮೆಚ್ಚಿಕೊಳ್ಳುವುದು, ನಿಷ್ಪಕ್ಷಪಾತವಾಗಿ ಮಾತನಾಡುವುದು ತೀರಾ ಕಡಿಮೆ. ಹಾಗಿದ್ದೂ ಕಾಂಗ್ರೆಸ್ ನಾಯಕ ಚಿದಂಬರಂ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ, ಅದಕ್ಕೆ ಕಾರಣವೂ ಇದೆ ಈ ಬಗ್ಗೆ ಡಿಟೇಲ್ಡ್ ಸ್ಟೋರಿ.

ಇಂದು ಮಂಡನೆಯಾದ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ  ಟ್ವಿಟ್ ಮಾಡಿದ ಪಿ. ಚಿದಂಬರಂ, 2024ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿರುವ ಕೆಲವು ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಕಲು ಮಾಡಿದ್ದಾರೆ ಎಂದು ದೂರಿದ್ದಾರೆ. ಚುನಾವಣಾ ಫಲಿತಾಂಶಗಳ ನಂತರ ಗೌರವಾನ್ವಿತ ಹಣಕಾಸು ಸಚಿವರು ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪ್ರಾಣಾಳಿಕೆಯನ್ನು ಓದಿದ್ದಾರೆ ಎಂದು ತಿಳಿಯಲು ನನಗೆ ಸಂತೋಷವಾಗುತ್ತಿದೆ. ಅವರು ಕಾಂಗ್ರೆಸ್ ತನ್ನ ಪ್ರಣಾಳಿಕೆಯ ಪೇಜ್ 30ರಲ್ಲಿ ತಿಳಿಸಿರುವ ಉದ್ಯೋಗ ಸಂಬಂಧಿತ ಇನ್ಸೆಂಟಿವ್ (ELI) ಅನ್ನು ತಮ್ಮ ಬಜೆಟ್‌ನಲ್ಲಿ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. 

Tap to resize

Latest Videos

undefined

ಹಾಗೆಯೇ ಕಾಂಗ್ರೆಸ್ ಪ್ರಣಾಳಿಕೆಯ ಪೇಜ್‌ 11ರಲ್ಲಿ ಘೋಷಿಸಿದ್ದ, ಪ್ರತಿ ಅಪ್ರೆಂಟಿಸ್‌ಗೆ ಭತ್ಯೆಯೊಂದಿಗೆ ಅಪ್ರೆಂಟಿಶಿಪ್‌ ಸ್ಕೀಮ್‌ ಯೋಜನೆಯನ್ನು (Apprenticeship scheme)ತಮ್ಮ ಬಜೆಟ್‌ನಲ್ಲಿ ಪರಿಚಯಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಇದರ ಜೊತೆಗೆ ಅವರು ಕಾಂಗ್ರೆಸ್ ಪ್ರಣಾಳಿಕೆಯ ಇನ್ನೂ ಕೆಲವು ಯೋಜನೆಗಳನ್ನು ನಕಲು ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಪಿ. ಚಿದಂಬರಂ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಏಂಜೆಲ್ ಟ್ಯಾಕ್ಸ್‌ ( Angel Tax)ರದ್ದುಗೊಳಿಸುವ ಕೇಂದ್ರದ ನಿರ್ಧಾರಕ್ಕೂ ಮಾಜಿ ವಿತ್ತ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಏಂಜೆಲ್ ಟ್ಯಾಕ್ಸ್ ರದ್ದುಗೊಳಿಸಲು ಕಾಂಗ್ರೆಸ್ ಹಲವು ವರ್ಷಗಳಿಂದ ಮನವಿ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ಬಜೆಟ್‌ನಲ್ಲಿ ಅವಕಾಶ ಸಿಗದ ಕ್ಷೇತ್ರಗಳ ಬಗ್ಗೆ ಮುಂದೆ ಪಟ್ಟಿ ಮಾಡಿ ಹೇಳುವುದಾಗಿ ಅವರು ಹೇಳಿದ್ದಾರೆ.

ಟ್ಯಾಕ್ಸ್‌ ಫೈಲ್‌ ಅರ್ಜಿ ಸಲ್ಲಿಸಲು ಹಣಕಾಸು ಮಿತಿಯನ್ನು ಐಟಿಎಟಿಗೆ 60 ಲಕ್ಷ ರೂ, ಹೈಕೋರ್ಟ್‌ಗಳಿಗೆ 2 ಕೋಟಿ ಹಾಗೂ ಸುಪ್ರೀಂಕೋರ್ಟ್‌ಗೆ 5 ಕೋಟಿ ರೂವರೆಗೆ ಹೆಚ್ಚಿಸಲಾಗಿದೆ. ಇದರ ಜೊತೆ ಎಲ್ಲಾ ರೀತಿಯ ಹೂಡಿಕೆದಾರರಿಗೆ  ಏಂಜೆಲ್ ಟ್ಯಾಕ್ಸ್‌ ಅನ್ನು ರದ್ದುಗೊಳಿಸಲಾಗುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ವಿದೇಶಿ ಕಂಪನಿಗಳಿಗೆ ಕಾರ್ಪೋರೇಟ್ ಟ್ಯಾಕ್ಸ್ ದರವನ್ನು 40ರಿಂದ 35 ಶೇಕಡಾಕ್ಕೆ ಇಳಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮ್‌ನ ಇಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಹಾಗೆಯೇ ಮೊದಲ ಬಾರಿಗೆ ಕೆಲಸಕ್ಕೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿರುವ ಸಂಸ್ಥೆಗಳಿಗೆ ಒಂದು ತಿಂಗಳ ವೇತನವನ್ನು ಬೆಂಬಲವಾಗಿ ಘೋಷಿಸಲಾಗಿದೆ. 

I am glad to know that the Hon'ble FM has read the Congress Manifesto LS 2024 after the election results

I am happy she has virtually adopted the Employment-linked incentive (ELI) outlined on page 30 of the Congress Manifesto

I am also happy that she has introduced the…

— P. Chidambaram (@PChidambaram_IN)

 

click me!