
ಸೀತಾಪುರ: ಉತ್ತರ ಪ್ರದೇಶದ ಸೀತಾಪುರದಲ್ಲಿ ಮಹಿಳೆಯೊಬ್ಬರು ವಿಚಿತ್ರವಾದ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಭಿನ್ನವಾಗಿ ಜನಿಸಿದ ಮಗುವಿಗೆ ಎರಡು ಮುಖ, ನಾಲ್ಕು ಕಾಲು ಹಾಗೂ 4 ಕೈಗಳಿದ್ದವು. ಅಲ್ಲದೇ ಮಗುವಿನ ದೇಹವೂ ಮತ್ತೊಂದು ದೇಹಕ್ಕೆ ಜೋಡಿಸಿದಂತೆ ಕಾಣುತ್ತಿತ್ತು. ಈ ವಿಚಿತ್ರ ಮಗು ಜನಿಸಿದ ವಿಚಾರ ತಿಳಿಯುತ್ತಿದ್ದಂತೆ ಮಗುವನ್ನು ನೋಡಲು ಆಸ್ಪತ್ರೆಗೆ ಜನ ಜಮಾಯಿಸಿದ್ದಾರೆ. ಆದರೆ ಈ ಮಗು ಜನಿಸಿದ ಒಂದು ದಿನದ ನಂತರ ಸಾವನ್ನಪ್ಪಿದೆ.
ಹೀಗೆ ವಿಚಿತ್ರ ಮಗುವಿಗೆ ಜನ್ಮ ನೀಡಿದ ತಾಯಿಯನ್ನು 40 ವರ್ಷದ ರಮಾದೇವಿ ಎಂದು ಗುರುತಿಸಲಾಗಿದೆ. ಇವರು ಸಕ್ರಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಿರತ್‌ಪುರ ಗ್ರಾಮದ ಕೊರೆನ್‌ಪುರ್ವದ ನಿವಾಸಿಯಾಗಿದ್ದಾರೆ. ಭಾನುವಾರ ರಾತ್ರಿ ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದಾದ ನಂತರ ಅವರನ್ನು ರೇವನ್ ಎಂಬಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾನೆ 5 ಗಂಟೆಯ ವೇಳೆಗೆಲ್ಲಾ ಮಹಿಳೆ ಈ ವಿಭಿನ್ನವಾದ ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತ ಮಗು ವಿಚಿತ್ರವಾಗಿ ಜನಿಸಿದ ವಿಚಾರ ತಿಳಿದು ಅನೇಕರು ಮಗುವನ್ನು ನೋಡಲು ಆಸ್ಪತ್ರೆಯತ್ತ ಧಾವಿಸಿ ಬಂದಿದ್ದಾರೆ. ಆದರೆ ಮಗು ಮಾತ್ರ ಜನಿಸಿದ ಮಾರನೇ ದಿನವೇ ಸಾವನ್ನಪ್ಪಿದೆ.
ನಾಲ್ಕು ಕಾಲಿನ ಹೆಣ್ಣು ಮಗು ಜನನ: ಮಧ್ಯಪ್ರದೇಶದಲ್ಲಿ ಅಪರೂಪದ ಪ್ರಕರಣ
ಈ ವಿಚಿತ್ರ ಮಗುವಿನ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯರು ಮಾಹಿತಿ ನೀಡಿದ್ದು, ಮಗುವಿನ ದೇಹವೂ ಇನ್ನೊಂದು ದೇಹಕ್ಕೆ ಅಂಟಿಕೊಂಡಂತಿತ್ತು. ಇದರಲ್ಲಿ ಒಂದು ದೇಹವೂ ಬೆಳೆದಿದ್ದರೆ ಇನ್ನೊಂದು ದೇಹವೂ ಬೆಳವಣಿಗೆಯ ಹಂತದಲ್ಲಿತ್ತು. ಜೊತೆಗೆ ಮಗುವಿಗೆ ಎರಡು ಮುಖಗಳಿದ್ದವು, ನಾಲ್ಕು ಕಾಲು ಹಾಗೂ ಕೈಗಳಿದ್ದವು ಎಂದು ಹೇಳಿದ್ದಾರೆ. ಮಗುವಿ ತಂದೆ ರಾಮ್‌ಪಾಲ್ ತನ್ನ ಪತ್ನಿ ವಿಶಿಷ್ಠವಾದ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಿದರು.
ಆದರೆ ವಿಚಿತ್ರವಾಗಿ ಜನಿಸಿದ ಮಗುವನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಭಯಗೊಂಡಿದ್ದು, ಅವರು ಮಗುವನ್ನು ಹೊರಗೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ವಾಗ್ವಾದ ನಡೆದಿದೆ. ಆದರೆ ಈಗ ಮಗು ತಾಯಿಯ ಪಕ್ಕದಲ್ಲಿ ಮಲಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಮಗುವನ್ನು ಕಳೆದುಕೊಂಡ ಪೋಷಕರು ಮಾತ್ರ ಕಣ್ಣೀರಾಕುತ್ತಿದ್ದಾರೆ.
ಕಾಲಿರುವ ಜಾಗದಲ್ಲಿ ಕೊಂಬು: ಮಧ್ಯಪ್ರದೇಶದಲ್ಲಿ ವಿಚಿತ್ರ ಮಗು ಜನನ: ಆಸ್ಪತ್ರೆಯಲ್ಲಿ ಜನವೋ ಜನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ