
ಮಧುಬಾನಿ: ಪಹಲ್ಗಾಮ್ ದಾಳಿಕೋರರು ಹಾಗೂ ಅವರಿಗೆ ಬೆನ್ನುಲುಬಾಗಿರುವವರನ್ನು ಸುಮ್ಮನೆ ಬಿಡುವುದಿಲ್ಲ, ಅವರು ಊಹೆಯೂ ಮಾಡಿರದಂತಹ ಕಠಿಣ ಶಿಕ್ಷೆ ಅವರಿಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಘಟನೆ ನಡೆದ ನಂತರ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಸುಮ್ಮನೇ ಬಿಡುವುದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಬಿಹಾರದ ಮಧುಬಾನಿಗೆ ಆಗಮಿಸಿದ ಪ್ರಧಾನಿ ಮೋದಿ ತಮ್ಮ ಮಾತು ಆರಂಭಿಸುವುದಕ್ಕೂ ಮೊದಲು ಪಹಲ್ಗಾಮ್ ಯುದ್ಧದಲ್ಲಿ ಮಡಿದವರಿಗೆ ಕೆಲ ನಿಮಿಷಗಳ ಕಾಲ ಮೌನ ಪ್ರಾರ್ಥನ ಮಾಡುವಂತೆ ಮನವಿ ಮಾಡಿದರು. ಮೌನ ಪ್ರಾರ್ಥನೆಯ ಬಳಿಕ ಮಾತನಾಡಿದ ಅವರು, ಪಹಲ್ಗಾಮ್ ನರಮೇಧದ ಅಪರಾಧಿಗಳಿಗೆ ಅವರ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ನೀಡಲಾಗುವುದು ಮತ್ತು ಭಾರತವು ಭಯೋತ್ಪಾದಕರನ್ನು ಬೆಂಬಲಿಸುತ್ತಿರುವವರ ಬೆನ್ನು ಮೂಳೆ ಮುರಿಯಲಾಗುವುದು ಎಂದರು.
ಇಂದು, ಬಿಹಾರದ ನೆಲದಲ್ಲಿ ನಿಂತತು ನಾನು ಇಡೀ ಜಗತ್ತಿಗೆ ಹೇಳುತ್ತೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ, ಪತ್ತೆಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ. ನಾವು ಅವರನ್ನು ಭೂಮಿಯ ತುದಿಯವರೆಗೆ ಹಿಂಬಾಲಿಸುತ್ತೇವೆ ಎಂದು ಹೇಳಿದ್ದಾರೆ. ಭಯೋತ್ಪಾದಕರು ನೆಲೆ ನಿಂತಿರುವ ಉಳಿದ ನೆಲವನ್ನು ನೆಲಸಮ ಮಾಡುವ ಸಮಯ ಈಗ ಬಂದಿದೆ. ಪಹಲ್ಗಾಮ್ ದಾಳಿಯ ನಂತರ ಇಡೀ ದೇಶವು ದುಃಖದಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಳೆದ ದಶಕದಲ್ಲಿ, 2 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳು ಇಂಟರ್ನೆಟ್‌ಗೆ ಸಂಪರ್ಕಗೊಂಡಿವೆ. ಹಳ್ಳಿಗಳಲ್ಲಿ 5.50 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳನ್ನು ನಿರ್ಮಿಸಲಾಗಿದೆ, ಪಂಚಾಯತ್‌ಗಳು ಡಿಜಿಟಲ್ ಆಗುವುದರಿಂದ ಮತ್ತೊಂದು ಪ್ರಯೋಜನವಿದೆ. ಈಗ ಜೀವನ/ಮರಣ ಪ್ರಮಾಣಪತ್ರ, ಭೂ ಹಿಡುವಳಿ ಪ್ರಮಾಣಪತ್ರ ಮುಂತಾದ ಹಲವು ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು ಎಂದು ಪ್ರಧಾನಿ ಇದೇ ವೇಳೆ ಹೇಳಿದ್ದರು.
ಇದನ್ನೂ ಓದಿ: ಇಸ್ರೇಲ್ ರೀತಿ ದಾಳಿಗೆ ಸಜ್ಜಾಯ್ತಾ ಭಾರತ? PoK 42 ಉಗ್ರ ಲಾಂಚ್ ಪ್ಯಾಡ್ ಪತ್ತೆಹಚ್ಚಿದ ಸೇನೆ
ಪೂಜ್ಯ ಬಾಪು ಸತ್ಯಾಗ್ರಹದ ಮಂತ್ರವನ್ನು ಹರಡಿದ ಭೂಮಿ ಬಿಹಾರ. ಭಾರತದ ಹಳ್ಳಿಗಳು ಬಲಿಷ್ಠವಾಗದ ಹೊರತು, ಭಾರತ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಎಂದು ಪೂಜ್ಯ ಬಾಪು ದೃಢವಾಗಿ ನಂಬಿದ್ದರು. ಇಂದು, ಪಂಚಾಯತ್ ರಾಜ್ ದಿನದ ಸಂದರ್ಭದಲ್ಲಿ, ಇಡೀ ದೇಶವು ಮಿಥಿಲಾ ಮತ್ತು ಬಿಹಾರದೊಂದಿಗೆ ಸಂಪರ್ಕ ಹೊಂದಿದೆ. ದೇಶ ಮತ್ತು ಬಿಹಾರದ ಅಭಿವೃದ್ಧಿಗೆ ಸಂಬಂಧಿಸಿದ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳ ಅಡಿಪಾಯ ಮತ್ತು ಉದ್ಘಾಟನೆಯನ್ನು ಇಲ್ಲಿ ಹಾಕಲಾಗಿದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ:ಏನಿದು ಸಿಂಧೂ ನದಿ ಒಪ್ಪಂದ: ಪಾಕ್ ಮೇಲೆ ಬೀರಲಿರುವ ಪರಿಣಾಮವೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ